ETV Bharat / state

ಗುಜರಿ ಅಂಗಡಿ ಮುಂಭಾಗ ನಿಲ್ಲಿಸಿದ್ದ ಗೂಡ್ಸ್​ ವಾಹನ ಕಳ್ಳತನ: ಕಂಗಾಲಾದ ವ್ಯಾಪಾರಿ - A goods vehicle stolen in doddaballapur

ಆಗಸ್ಟ್ 25 ರಂದು ಗುಜರಿ ಅಂಗಡಿ ಮುಂಭಾಗ ನಿಲ್ಲಿಸಿದ್ದ ಗೂಡ್ಸ್​ ವಾಹನವನ್ನು ರಾತ್ರೋರಾತ್ರಿ ಕಳ್ಳತನ ಮಾಡಿರುವ ಘಟನೆ ದೊಡ್ಡಬಳ್ಳಾಪುರ ನಗರದ ಡಿ.ಕ್ರಾಸ್ ಬಳಿ ನಡೆದಿದೆ.

goods vehicle stolen in doddaballapur
ಗೂಡ್ಸ್​ ವಾಹನ ಕಳ್ಳತನ
author img

By ETV Bharat Karnataka Team

Published : Sep 2, 2023, 10:47 AM IST

ಗೂಡ್ಸ್​ ವಾಹನ ಕಳ್ಳತನದ ಬಗ್ಗೆ ಮಾಹಿತಿ ನೀಡಿದ ವ್ಯಾಪಾರಿ ನಿಸಾರ್ ಅಹ್ಮದ್

ದೊಡ್ಡಬಳ್ಳಾಪುರ : ಸ್ತ್ರೀಶಕ್ತಿ ಸಹಕಾರ ಸಂಘದಲ್ಲಿ ಹೆಂಡತಿ ಸಾಲ ಮಾಡಿ ತಂದುಕೊಟ್ಟ ಹಣದಲ್ಲಿ ಖರೀದಿಸಿದ್ದ ಗೂಡ್ಸ್ ವಾಹನವನ್ನು ಪಾರ್ಕಿಂಗ್ ಮಾಡಲಾಗಿದ್ದ ಸ್ಥಳದಿಂದ ಕಳ್ಳರು ಕದ್ದೊಯ್ದಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದ್ದು, ವಾಹನ ಕಳೆದುಕೊಂಡ ಬಡ ವ್ಯಾಪಾರಿ ಕಂಗಾಲಾಗಿದ್ದಾರೆ.

ದೊಡ್ಡಬಳ್ಳಾಪುರ ನಗರದ ಡಿ.ಕ್ರಾಸ್ ಬಳಿಯ ರೈಲ್ವೆ ಮೇಲ್ಸೇತುವೆ ಬಳಿ ಘಟನೆ ನಡೆದಿದೆ. ಗುಜರಿ ವ್ಯಾಪಾರ ಮಾಡುವ ನಿಸಾರ್ ಅಹ್ಮದ್ ಎಂಬುವರ ವಾಹನವನ್ನು ರಾತ್ರೋರಾತ್ರಿ ಕಳ್ಳರು ಕದ್ದೊಯ್ದಿದ್ದಾರೆ. ಆಗಸ್ಟ್ 25ರ ರಾತ್ರಿ ನಿಸಾರ್ ಅಹ್ಮದ್ ಎಂದಿನಂತೆ ಗುಜರಿ ಅಂಗಡಿ ಮುಂಭಾಗ ಅಶೋಕ್ ಲೇಲ್ಯಾಂಡ್ ದೋಸ್ತ್ ಮಾಡೆಲ್ ಗಾಡಿಯನ್ನು ಪಾರ್ಕ್ ಮಾಡಿ ಹೋಗಿದ್ದರು. ಬೆಳಗ್ಗೆ ಬಂದು ನೋಡುವಷ್ಟರಲ್ಲೇ ವಾಹನ ನಾಪತ್ತೆಯಾಗಿದೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಘಟನೆ ಬಗ್ಗೆ ಮಾಹಿತಿ ನೀಡಿದ ಗುಜರಿ ಅಂಗಡಿ ಮಾಲೀಕ ನಿಸಾರ್ ಅಹ್ಮದ್, "ನನ್ನ ಹೆಂಡತಿ ಮಹಿಳಾ ಸ್ತ್ರೀ ಸಂಘದಲ್ಲಿ 2 ಲಕ್ಷ ರೂ. ಸಾಲ ಮಾಡಿ ಕೊಟ್ಟಿದ್ದರು. ಇದರ ಜೊತೆ ಹಲವು ವರ್ಷಗಳಿಂದ ದುಡಿದ ಹಣವನ್ನು ಸೇರಿಸಿ ಗೂಡ್ಸ್ ವಾಹನ ಖರೀದಿಸಿದ್ದೆ. ಇದೀಗ ಯಾರೋ ನಮ್ಮ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಕುಟುಂಬಕ್ಕೆ ಆಧಾರವಾಗಿದ್ದ ವಾಹನವನ್ನೇ ಕದ್ದೊಯ್ದಿದ್ದಾರೆ. ಇನ್ನೊಂದೆಡೆ, ಬ್ಯಾಂಕ್​ನವರು ಇಎಂಐ ಕಟ್ಟಿ, ಗಾಡಿ ಸಿಗುತ್ತದೆ ಅಂತಾ ಹೇಳುತ್ತಿದ್ದಾರೆ ಎಂದು ವ್ಯಾಪಾರಿ ಕಣ್ಣೀರಿಟ್ಟರು.

ವೃದ್ಧೆಯ ಆಪರೇಷನ್ ಮಾಡಿಸಲು ಇಟ್ಟಿದ್ದ ಹಣ ಕಳ್ಳತನ : ಕಳೆದ ಮೂರು ದಿನಗಳ ಹಿಂದೆ ವೃದ್ಧೆಯೊಬ್ಬರು ಹಸು ಮೇಯಿಸಲೆಂದು ತೆರಳಿದ್ದಾಗ ಮನೆಗೆ ನುಗ್ಗಿದ ಕಳ್ಳರು, ಆಪರೇಷನ್ ಮಾಡಿಸಲು ಇಟ್ಟಿದ್ದ ಹಣ ಮತ್ತು ಚಿನ್ನದ ಆಭರಣಗಳನ್ನು ದೋಚಿಕೊಂಡು ಪರಾರಿಯಾದ ಘಟನೆ ನೆಲಮಂಗಲ ತಾಲೂಕಿನ ರಾಯರಪಾಳ್ಯದಲ್ಲಿ ನಡೆದಿತ್ತು. ಸಿದ್ದಪ್ಪ ರಂಗಮ್ಮ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಕೆಲಸದ ನಿಮಿತ್ತ ಕುಟುಂಬಸ್ಥರು ಹೊರ ಹೋಗಿದ್ದರು. ಈ ವೇಳೆ ಬಾಗಿಲು ಒಡೆದು ಒಳ ನುಗ್ಗಿದ ಖದೀಮರು ಹಣ ಮತ್ತು ಒಡವೆಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಇದನ್ನೂ ಓದಿ : ವೃದ್ಧೆಯ ಗಂಟಲು ಆಪರೇಷನ್ ಮಾಡಿಸಲು ಇಟ್ಟಿದ್ದ ಹಣ ದೋಚಿದ ಕಳ್ಳರು

ನಗ, ನಾಣ್ಯ ಕಳ್ಳತನ ಮಾಡಿದ ಆಂಬ್ಯುಲೆನ್ಸ್‌ ಚಾಲಕ : ನಾಗ್ಪುರದ ಸಕ್ಕರ್ದಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೃತಪಟ್ಟ ವ್ಯಕ್ತಿಯ ಮನೆಯಲ್ಲಿ ಕಳ್ಳತನ ಮಾಡಿದ್ದ ಆಂಬ್ಯುಲೆನ್ಸ್‌ ಚಾಲಕ ಸೇರಿದಂತೆ ಆತನ ಮಗ ಹಾಗೂ ಇಬ್ಬರು ಅಪ್ರಾಪ್ತರನ್ನು ನಿನ್ನೆ ಪೊಲೀಸರು ಬಂಧಿಸಿದ್ದಾರೆ. ಅಶ್ವಜಿತ್ ವಾಂಖೆಡೆ ಮತ್ತು ನಿತೇಶ್ ವಾಂಖೆಡೆ ಬಂಧಿತರು. ಆಂಬ್ಯುಲೆನ್ಸ್‌ನ ಚಾಲಕ ಅಶ್ವಜಿತ್, ವ್ಯಕ್ತಿಯೊಬ್ಬರ ಮೃತದೇಹವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ದಿದ್ದಾನೆ. ಬಳಿಕ, ಅದೇ ಮನೆಯಲ್ಲಿ ತನ್ನ ಮಗನ ಮೂಲಕ ಕಳ್ಳತನ ಮಾಡಿಸಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ : ಶವ ಸಾಗಿಸಲು ಮನೆಗೆ ಬಂದಿದ್ದ ಆಂಬ್ಯುಲೆನ್ಸ್‌ ಚಾಲಕನಿಂದ ನಗ, ನಾಣ್ಯ ಕಳ್ಳತನ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.