ದೊಡ್ಡಬಳ್ಳಾಪುರ: ತನ್ನ ಅಂಗಾಂಗ ದಾನ ಮಾಡಿ ಎಂದು ಡೆತ್ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ರೋಜಿಪುರದಲ್ಲಿ ಘಟನೆ ನಡೆದಿದೆ.
ಹರ್ಷಿತಾ (20) ಆತ್ಮಹತ್ಯೆಗೆ ಶರಣಾದ ಯುವತಿ. ಈಕೆ ಬಿಕಾಂ ಮುಗಿಸಿ ಒಂದು ತಿಂಗಳ ಹಿಂದಷ್ಟೇ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಳು. ಆತ್ಮಹತ್ಯೆಗೂ ಮುನ್ನ ನನ್ನ ಸಾವಿಗೆ ನಾನೇ ಕಾರಣ. ನನ್ನ ದೇಹದ ಅಂಗಾಂಗಗಳನ್ನು ದಾನ ಮಾಡುವಂತೆ ಡೆತ್ನೋಟ್ ಬರೆದು ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಮಗಳ ಆಸೆಯಂತೆ ಆಕೆಯ ಪೋಷಕರು ಡಾ.ರಾಜ್ ಕುಮಾರ್ ನೇತ್ರಾ ಸಂಗ್ರಹಣಾ ಕೇಂದ್ರಕ್ಕೆ ಹರ್ಷಿತಾ ಕಣ್ಣುಗಳನ್ನು ದಾನ ಮಾಡಿದ್ದಾರೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.