ETV Bharat / state

ಉಕ್ರೇನ್​ನಿಂದ ಬೆಂಗಳೂರಿಗೆ 9 ವಿದ್ಯಾರ್ಥಿಗಳ ಆಗಮನ

ಉಕ್ರೇನ್​ನ ಜಪ್ರೋಷಿಯಾ ಸಿಟಿಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ 9 ವಿದ್ಯಾರ್ಥಿಗಳು ಇಂದು ಬೆಂಗಳೂರಿಗೆ ಆಗಮಿಸಿದ್ದು, ಪೋಷಕರು ತಮ್ಮ ಮಕ್ಕಳನ್ನು ತಬ್ಬಿಕೊಂಡು ಸಂತಸ ವ್ಯಕ್ತಪಡಿಸಿದರು.

ಉಕ್ರೇನ್​ನಿಂದ ಬೆಂಗಳೂರಿಗೆ ಆಗಮಿಸಿದ  ವಿದ್ಯಾರ್ಥಿಗಳು

author img

By

Published : Mar 6, 2022, 1:28 PM IST

Updated : Mar 6, 2022, 2:30 PM IST

ದೇವನಹಳ್ಳಿ: ಯದ್ಧಪೀಡಿತ ಉಕ್ರೇನ್​ನಲ್ಲಿ ಸಿಲುಕಿದ್ದ 9 ವಿದ್ಯಾರ್ಥಿಗಳು ಇಂದು ಸುರಕ್ಷಿತವಾಗಿ ಬೆಂಗಳೂರಿಗೆ ಆಗಮಿಸಿದರು.

ಉಕ್ರೇನ್​ನ ಜಪ್ರೋಷಿಯಾ ಸಿಟಿಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ನಿನ್ನೆ ಬುಡಾಪೆಸ್ಟ್​ನಿಂದ ದೆಹಲಿಗೆ ಏರ್ ಲಿಫ್ಟ್‌ ಮಾಡಲಾಗಿತ್ತು. ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ವಿದ್ಯಾರ್ಥಿಗಳು ‌ಆಗಮಿಸುತ್ತಿದ್ದಂತೆ ಪೋಷಕರ ಖುಷಿಗೆ ಪಾರವೇ ಇರಲಿಲ್ಲ.

ಬೆಂಗಳೂರಿಗೆ ಆಗಮಿಸಿದ 9 ವಿದ್ಯಾರ್ಥಿಗಳು

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿದ್ಯಾರ್ಥಿಗಳು, ಉಕ್ರೇನ್​ನಿಂದ ಗಡಿಭಾಗಕ್ಕೆ ಬರಲು ತಾವು ಅನುಭವಿಸಿದ ಕಷ್ಟಗಳನ್ನು ಹಂಚಿಕೊಂಡರು. ಜೊತೆಗೆ ಮರಳಿ ದೇಶಕ್ಕೆ ತಮ್ಮನ್ನು ಕರೆತರಲು ಸಹಾಯ ಮಾಡಿದ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಧನ್ಯವಾದ ಹೇಳಿ, ಇನ್ನೂ ಸಾಕಷ್ಟು ವಿದ್ಯಾರ್ಥಿಗಳು ಉಕ್ರೇನ್​ನಲ್ಲಿ ಸಿಲುಕಿದ್ದು, ಅವರನ್ನು ಸುರಕ್ಷಿತವಾಗಿ ತವರಿಗೆ ಕರೆತರಬೇಕೆಂದು ಮನವಿ ಮಾಡಿದರು.

Last Updated : Mar 6, 2022, 2:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.