ನೆಲಮಂಗಲ (ಬೆಂಗಳೂರು): ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯ ಕಣ್ಣಿಗೆ ಕಾರದ ಪುಡಿ ಎರಚಿ ಚಿನ್ನದ ಸರ ಕದ್ದೊಯ್ದಿರುವ ಘಟನೆ ನೆಲಮಂಗಲದ ದಕ್ಷಿಣಕಾಶಿ ಶಿವಗಂಗೆಯ ನವ್ಯಶ್ರೀ ನಂದಿನಿ ಪಾರ್ಲರ್ನಲ್ಲಿ ನಡೆದಿದೆ.
ಸಂಜೆ ವೇಳೆ ಬಿಸ್ಕೇಟ್ ಕೇಳುವ ನೆಪದಲ್ಲಿ ಅಂಗಡಿಗೆ ಬಂದ ಇಬ್ಬರು ಬಿಸ್ಕೇಟ್ ನೀಡುತ್ತಿದ್ದಂತೆ ಕಾರದ ಪುಡಿ ಎರಚಿ 3 ಲಕ್ಷ ಮೌಲ್ಯದ 60 ಗ್ರಾಂ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾರೆ. ನಂದಿನಿ ಪಾರ್ಲರ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಸಂತ ಕುಮಾರಿ ಎಂಬಾಕೆ ಚಿನ್ನದ ಸರ ಕಳೆದುಕೊಂಡಿದ್ದು, ದಾಬಾಸ್ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಸಿಪಿಐ ಹರೀಶ್ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.