ದೊಡ್ಡಬಳ್ಳಾಪುರ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಚಿನ್ನಾಭರಣದೊಂದಿಗೆ 50 ಕೆಜಿ ಅಕ್ಕಿ, ಸಿಲಿಂಡರ್ ಕದ್ದು ಪರಾರಿಯಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ವಿವೇಕಾನಂದ ನಗರದ ಶಾಂತಮ್ಮ ಮಂಜುನಾಥ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ದಿನಾಂಕ 29/3/2020 ರಂದು ಮನೆಗೆ ಬೀಗ ಹಾಕಿ ಶಾಂತಮ್ಮ ಕುಟುಂಬ ಪಾವಗಡಕ್ಕೆ ಹೋಗಿದ್ದರು.
ಇಂದು ಮನೆಗೆ ಬಂದು ನೋಡಿದಾಗ ಮನೆಯ ಬೀಗ ಮುರಿದು ಮನೆಯಲ್ಲಿ ಇದ್ದ ಟಿವಿ, ಸಿಲಿಂಡರ್, ರೇಷ್ಮೆಯ ಸೀರೆ, 50 KG ರೇಷನ್ ಅಕ್ಕಿ, ನಗದು 20 ಸಾವಿರ, 20 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.