ದೇವನಹಳ್ಳಿ : ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದು, ಅಂತಿಮ ಸಂಸ್ಕಾರಕ್ಕಾಗಿ ಶವವನ್ನು ಮೃತ ವ್ಯಕ್ತಿಯ ಸ್ವಗ್ರಾಮಕ್ಕೆ ಆ್ಯಂಬುಲೆನ್ಸ್ ನಲ್ಲಿ ಸಾಗಿಸುವಾಗ, ಈ ವಾಹನಕ್ಕೆ ಹಸುವೊಂದು ಅಡ್ಡ ಬಂದಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಆ್ಯಂಬುಲೆನ್ಸ್ ಪಲ್ಟಿ ಹೊಡೆದಿದ್ದು, ನಾಲ್ವರಿಗೆ ಗಾಯವಾಗಿದೆ.
ದೇವನಹಳ್ಳಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 207 ರ ಲಕ್ಷ್ಮಿ ಪುರ ಗೇಟ್ ಬಳಿ ನಡೆದಿದ್ದು, ಕೆಆರ್ ಪುರಂನಿಂದ ಬಳ್ಳಾರಿಯ ಜಿಲ್ಲೆಯ ಕೂಡ್ಲಿಗಿ ತಾಲೂಕಿಗೆ ಶವವನ್ನು ಸಾಗಿಸುವಾಗ ಅಪಘಾತ ಜರುಗಿದೆ. ಬುಧವಾರ ತಡ ರಾತ್ರಿ ಬೆಂಗಳೂರಿನ ಮಾರತ್ತಹಳ್ಳಿ ಜರುಗಿದ ಅಪಘಾತದಲ್ಲಿ ಸುಧೀರ್ ನಾಯಕ್ ಸ್ಥಳದಲ್ಲೇ ಸಾವಿಗೀಡಾಗಿದ್ದ. ಮೃತ ವ್ಯಕ್ತಿಯ ಶವವನ್ನು ಕೆಆರ್ ಪುರನಿಂದ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗ್ರಾಮಕ್ಕೆ ಆ್ಯಂಬುಲೆನ್ಸ್ನಲ್ಲಿ ಸಾಗಿಸುವಾಗ, ಆ್ಯಂಬುಲೆನ್ಸ್ ಗೆ ಅಡ್ಡವಾಗಿ ಹಸು ಬಂದು ಈ ಅನಾಹುತ ಜರುಗಿದೆ.
ಗಾಯಾಳುಗಳನ್ನ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕಳಿಸಲಾಗಿದೆ. ಸ್ಥಳಕ್ಕೆ ವಿಶ್ವನಾಥಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.