ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಸುತ್ತಮುತ್ತ ಬಿರುಗಾಳಿ ಸಹಿತ ಭಾರಿ ಮಳೆಯಾದ ಹಿನ್ನೆಲೆ ಬೃಹತ್ ಮಾವಿನ ಮರವೊಂದು ಗುಡಿಸಲು ಮೇಲೆ ಬಿದ್ದಿದೆ. ಅದೃಷ್ಟವಶಾತ್ ಗುಡಿಸಲಲ್ಲಿ ಮಲಗಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಅರೆಹಳ್ಳಿಗುಡದಳ್ಳಿಯಲ್ಲಿ ಘಟನೆ ನಡೆದಿದೆ. ಕಳೆದೊಂದು ತಿಂಗಳಿನಿಂದ ದೊಡ್ಡಬಳ್ಳಾಪುರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ರಾತ್ರಿ ಸುರಿದ ಗಾಳಿ ಸಹಿತ ಭಾರಿ ಮಳೆಗೆ ಗುಡಿಸಲುಗಳು ಸೇರಿದಂತೆ ಮನೆಗಳು ಬಿದ್ದು ಹೋಗಿದ್ದು ಜನಜೀವನ ತತ್ತರಗೊಂಡಿದೆ.
ತಾಲೂಕಿನ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಹಳ್ಳಿಗುಡದಳ್ಳಿ ಗ್ರಾಮದ ಅಂಬೇಂಡ್ಕರ್ ಕಾಲೂನಿಯಲ್ಲಿ ಸುಮಾರು 25 ಗುಡಿಸಲುಗಳಿಗೆ ಗಾಳಿ-ಮಳೆಯಿಂದಾಗಿ ಹಾನಿ ಆಗಿದೆ. ಗುಡಿಸಲು ಕಳೆದುಕೊಂಡಿರುವ ಕುಟುಂಬಗಳು ಬೀದಿಗೆ ಬಿದ್ದಿವೆ.
ಹಲವು ವರ್ಷಗಳಿಂದ 50ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ವಾಸವಾಗಿದ್ದಾರೆ . ಆದರೆ ಸ್ಥಳೀಯ ಗ್ರಾಮ ಪಂಚಾಯಿತಿ ಆಗಲಿ ತಾಲೂಕು ಆಡಳಿತ ಮಂಡಳಿಯಾಗಲಿ ನಿವೇಶನ ಕೊಟ್ಟಿಲ್ಲ.