ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ 17 ಮಂದಿ ಸೇರಿ ಒಟ್ಟು 21 ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದ್ದಾರೆ.
ನೆಲಮಂಗಲ ತಾಲೂಕಿನ ಮೂವರು ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಒಬ್ಬರು ಸೇರಿ ಒಟ್ಟು 21 ಜನರಲ್ಲಿ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತರು ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದರು.
ಹೊಸಕೋಟೆ ನಗರದ ಕುಂಬಾರಪೇಟೆಯ ನಿವಾಸಿಗಳಾದ ಪಿ-14,435, ಪಿ-14,436, ಪಿ-14,437, ಪಿ-14,438, ಪಿ-14,439, ಪಿ-14,441, ಪಿ-14,442, ಪಿ-14,443, ಪಿ-14,444, ಪಿ-14,445, ಪಿ-14,446, ಪಿ-14,447, ಪಿ-14,448, ಪಿ-14,449, ಸೇರಿ ಒಟ್ಟು 14 ಜನ ಸೋಂಕಿತ ವ್ಯಕ್ತಿಯಾದ ಪಿ-10,399 ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು. ಪಿ-14,450 ವ್ಯಕ್ತಿಯು ಇನ್‌ಫ್ಲೂಯೆನ್ಜಾ ಲೈಕ್ ಇಲ್ನೆಸ್(ಐಎಲ್‌ಐ) ಸಮಸ್ಯೆಯಿಂದ ಬಳಲುತ್ತಿದ್ದ. ಹೊಸಕೋಟೆ ನಗರದ ಚಿಕ್ಕತಿಗಳರಪೇಟೆಯ ನಿವಾಸಿಪಿ-14,440 ಸೋಂಕಿತ ವ್ಯಕ್ತಿಯ (ಪಿ-8,545) ಪ್ರಾಥಮಿಕ ಸಂಪರ್ಕ ಹೊಂದಿದ್ದ. ಹೊಸಕೋಟೆ ನಗರದ ನಿವಾಸಿಯಾದ ಪಿ-14,451 ಕೇರಳ ರಾಜ್ಯದಿಂದ ಹಿಂದಿರುಗಿದ ಹಿನ್ನೆಲೆಯಲ್ಲಿ ಕೋವಿಡ್- 19 ಪರೀಕ್ಷೆಯಲ್ಲಿ ಸೋಂಕು ಇರುವಿಕೆ ಪತ್ತೆಯಾಗಿದೆ ಎಂದು ಹೇಳಿದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ಕೊಡಿಗೇಹಳ್ಳಿಯ ನಿವಾಸಿ 42 ವರ್ಷದ ಪುರುಷ (ಪಿ-14,452) ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಅವರಿಗೂ ಸೋಂಕು ತಗುಲಿದೆ. ನೆಲಮಂಗಲ ತಾಲೂಕಿನ ಅರಿಶಿಣಕುಂಟೆಯ ನಿವಾಸಿ 54 ವರ್ಷದ ಪುರುಷ (ಪಿ-14,453), ನೆಲಮಂಗಲ ನಗರದ ನಿವಾಸಿ 43 ವರ್ಷದ ಪುರುಷ (ಪಿ-14,454) ಹಾಗೂ 14 ವರ್ಷದ ಬಾಲಕಿ (ಪಿ-14,455) ಸೋಂಕು ಇರುವುದು ದೃಢಪಟ್ಟಿದೆ.