ದೊಡ್ಡಬಳ್ಳಾಪುರ: ತೋಟಗಾರಿಕೆ ಇಲಾಖೆ 2019-20ನೇ ಸಾಲಿನ ಕೃಷಿಭಾಗ್ಯ ಯೊಜನೆಯಡಿ ಅರ್ಹ ರೈತರಿಗೆ ಕೃಷಿಹೊಂಡ, ಪಾಲಿಹೌಸ್, ಮಳೆ ನೀರು ಸಂಗ್ರಹಕ್ಕೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿನ ರೈತರು ತೋಟಗಾರಿಕೆ ಇಲಾಖೆಯ ಸಹಾಯಧನದ ಫಲಾನುಭವಿಗಳಾಗಿರುತ್ತಾರೆ. ಕೃಷಿ ಭಾಗ್ಯ ಯೋಜನೆಯಡಿ ಒಂದು ಎಕರೆಗೆ ಹಸಿರುಮನೆ ಘಟಕ ನಿರ್ಮಾಣ, ಮಳೆ ನೀರು ಸಂಗ್ರಹಣಾ ಘಟಕ, ಡೀಸೆಲ್ ಮೋಟಾರ್ ಹಾಗೂ ಅಧಿಕ ಮೌಲ್ಯದ ಬೆಳೆ ಉತ್ಪಾದನೆಗೆ, ಕೃಷಿಹೊಂಡ ಮತ್ತು ಪಾಲಿಹೌಸ್ ನಿರ್ಮಾಣಕ್ಕೆ ಶೇ.50 ರಂತೆ ಸಹಾಯಧನ ನೀಡಲಿದೆ. ಅರ್ಹ ಆಸಕ್ತಿಯುಳ್ಳ ಜಿಲ್ಲೆಯ ಸಾಮಾನ್ಯ ವರ್ಗದ ರೈತರು ಅರ್ಜಿ ಸಲ್ಲಿಸಬಹುದಾಗಿದೆ.
ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಜೂನ್ 15 ಕೊನೆಯ ದಿನವಾಗಿದೆ. ಅರ್ಜಿ ನಮೂನೆಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲ್ಲೂಕುಗಳ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರುಗಳ(ಜಿ.ಪಂ) ಕಚೇರಿಯನ್ನು ಸಂಪರ್ಕಿಸಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕು ತೋಟಗಾರಿಕೆ ಇಲಾಖೆಯ ದೂರವಾಣಿ ಸಂಖ್ಯೆ
ದೊಡ್ಡಬಳ್ಳಾಪುರ: 080-27623770, ದೇವನಹಳ್ಳಿ:080-27681204, ಹೊಸಕೋಟೆ