ETV Bharat / state

ಪ್ಯಾರಿಸ್​ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ 172 ಕನ್ನಡಿಗರು - ಪ್ಯಾರಿಸ್​ನಿಂದ ಬೆಂಗಳೂರಿಗೆ 172 ಕನ್ನಡಿಗರು

ಲಾಕ್​ಡೌನ್​ ಪರಿಣಾಮ ಪ್ಯಾರಿಸ್​ನಲ್ಲಿ ಸಿಲುಕಿದ್ದ 172 ಮಂದಿ ಅನಿವಾಸಿ ಭಾರತೀಯರು, ವಂದೇ ಭಾರತ್ ಮಿಷನ್​ ಅಡಿಯ ಇಪ್ಪತ್ತೊಂದನೇ ಏರ್ ಇಂಡಿಯಾ ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದಿದ್ದಾರೆ.

172 Kannadigas landed from Paris to Bangalore Airport
ಪ್ಯಾರಿಸ್​ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ 172 ಕನ್ನಡಿಗರು
author img

By

Published : May 29, 2020, 8:57 AM IST

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಲಾಕ್​ಡೌನ್​ನಿಂದಾಗಿ ಪ್ಯಾರಿಸ್​ನಲ್ಲಿ ಸಿಲುಕಿದ್ದ 172 ಕನ್ನಡಿಗರು, ಗುರುವಾರ ಸಂಜೆ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

172 Kannadigas landed from Paris to Bangalore Airport
ಪ್ಯಾರಿಸ್​ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ 172 ಕನ್ನಡಿಗರು

ವಂದೇ ಭಾರತ್ ಮಿಷನ್​ ಅಡಿಯ ಇಪ್ಪತ್ತೊಂದನೇ ಏರ್ ಇಂಡಿಯಾ ವಿಮಾನದಲ್ಲಿ 172 ಮಂದಿ ಅನಿವಾಸಿ ಭಾರತೀಯರು ಆಗಮಿಸಿದ್ದಾರೆ. 172 ಮಂದಿ ಪ್ರಯಾಣಿಕರಲ್ಲಿ ಒಂದು ಮಗು ಸೇರಿದಂತೆ 123 ಪುರುಷರು ಮತ್ತು 48 ಮಹಿಳೆಯರಿದ್ದಾರೆ. ತಜ್ಞ ವೈದ್ಯರು ಹಾಗೂ ಸಿಬ್ಬಂದಿ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿ,14 ದಿನಗಳ ಕ್ವಾರಂಟೈನ್​ಗಾಗಿ ಹೋಟೆಲ್​ಗಳಿಗೆ ಕಳುಹಿಸಿಕೊಟ್ಟಿದ್ದಾರೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದ್ದಾರೆ.

ನಂತರ ಏರ್ ಇಂಡಿಯಾ ವಿಮಾನವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇರಳದ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.