ದೊಡ್ಡಬಳ್ಳಾಪುರ: ಯಲಹಂಕ- ಪೆನುಕೊಂಡ ರೈಲು ಮಾರ್ಗದ ಅಂತಿಮ ಹಂತದ ವಿದ್ಯುದೀಕರಣ ಮತ್ತು ದ್ವಿಪಥ ಕಾಮಗಾರಿ ನಡೆಯುತ್ತಿದೆ. ಇದರಿಂದ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಮಾರ್ಚ್ 29ರವರೆಗೆ 10 ರೈಲುಗಳ ಸೇವೆಯನ್ನು ಸಂಪೂರ್ಣ ರದ್ದು ಮಾಡಲಾಗಿದೆ.
ಯಲಹಂಕದಿಂದ ಹಿಂದೂಪುರವರೆಗೆ ಈಗಾಗಲೇ ದುರಸ್ಥಿ ಕೆಲಸ ಪೂರ್ಣಗೊಂಡಿದೆ. ಈಗ ಹಿಂದೂಪುರದಿಂದ ಪೆನುಕೊಂಡವರೆಗಿನ 37 ಕಿ.ಮೀಗಳ ಅಂತಿಮ ಹಂತದ ವಿದ್ಯುದೀಕರಣ ಮತ್ತು ಹಳಿ ಡಬ್ಲಿಂಗ್ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಈ ಮಾರ್ಗದಲ್ಲಿನ 12 ರೈಲುಗಳು ಭಾಗಶಃ ರದ್ದು ಆಗಲಿದ್ದು, 14 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಇದನ್ನೂ ಓದಿ: ದಾಸರಹಳ್ಳಿ ವಲಯ ಅಭಿವೃದ್ಧಿಗೆ 110 ಕೋಟಿ ಬಿಡುಗಡೆ : ಹೈಕೋರ್ಟ್ ಗೆ ಸರ್ಕಾರದ ಸ್ಪಷ್ಟನೆ