ETV Bharat / state

10 ಸಾವಿರ ನಕಲಿ ಮತದಾರರ ಪತ್ತೆ: ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣಗೆ ಸೋಲಿನ ಭಯ

ನಮ್ಮ ತಾಲೂಕಿನ 186 ಜನ ಮತದಾರರು ಸೇರಿದಂತೆ ಕ್ಷೇತ್ರದಲ್ಲಿ ಎಂಟರಿಂದ ಹತ್ತು ಸಾವಿರ ನಕಲಿ ಮತದಾರರು ಇದ್ದರು. ಹೈಕೋರ್ಟಿನ ಆದೇಶದಂತೆ ಅವರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ ಎಂದು ಜೆಡಿಎಸ್ ಕಾನೂನು ಘಟಕದ ಜಿಲ್ಲಾ ಅಧ್ಯಕ್ಷ ಅಂಜನೇಗೌಡ ತಿಳಿಸಿದರು.

author img

By

Published : Oct 24, 2020, 9:07 PM IST

Doddballapura news
ಜೆಡಿಎಸ್ ಕಾನೂನು ಘಟಕದ ಜಿಲ್ಲಾ ಅಧ್ಯಕ್ಷ ಅಂಜನೇಗೌಡ

ದೊಡ್ಡಬಳ್ಳಾಪುರ: ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 10 ಸಾವಿರ ನಕಲಿ ಮಾತದಾರರನ್ನ ಪತ್ತೆ ಮಾಡಿ ಅವರನ್ನ ಮತದಾನ ಪಟ್ಟಿಯಿಂದ ಕೈ ಬೀಡಲಾಗಿದೆ. ಇದರಿಂದ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣರವರಿಗೆ ಸೋಲಿನ ಭಯ ಶುರುವಾಗಿದೆ. ಕೆಲವು ಖಾಸಗಿ ಶಾಲೆಯ ಮಾಲೀಕರು ಮತ್ತು ಬಿಜೆಪಿ ಕಾನೂನು ಪ್ರಕೋಷ್ಠಕವನ್ನು ಬಳಸಿಕೊಂಡು ಜೆಡಿಎಸ್ ಮುಖಂಡರ ಮೇಲೆ ನಿರಾದಾರ ಆರೋಪ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಕಾನೂನು ಘಟಕದ ಜಿಲ್ಲಾ ಅಧ್ಯಕ್ಷ ಅಂಜನೇಗೌಡ ಪುಟ್ಟಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಎ.ಪಿ.ರಂಗನಾಥ್ ಅವರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ತಾಲೂಕಿನ 186 ಜನ ಮತದಾರರು ಸೇರಿದಂತೆ ಕ್ಷೇತ್ರದಲ್ಲಿ ಎಂಟ ರಿಂದ ಹತ್ತು ಸಾವಿರ ನಕಲಿ ಮತದಾರರು ಇದ್ದರು. ಹೈಕೋರ್ಟಿನ ಆದೇಶದಂತೆ ಅವರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ. ಆದರೂ 8 ಜನ ಖಾಸಗಿ ಶಾಲೆಯ ಮತದಾರರು ನುಸುಳಿಕೊಂಡಿದ್ದರು. ಇದನ್ನು ತಹಶೀಲ್ದಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿ ತೆಗೆಸಲಾಗಿದೆ. ನಕಲಿ ಮತದಾರರಿಂದಾಗಿ ಪುಟ್ಟಣ್ಣ ಅವರು ಗೆಲುವು ಸಾಧಿಸುತ್ತಿದ್ದರು. ನಕಲಿ ಮತದಾರರು ಪಟ್ಟಿಯಿಂದ ಕೈಬಿಟ್ಟಿದರಿಂದ ಸೋಲಿನ ಭಯ ಪುಟ್ಟಣ್ಣಗೆ ಕಾಡುತ್ತಿದೆ. ಬಿಜೆಪಿಯ ಕಾನೂನು ಪ್ರಕೋಷ್ಠಕದ ಮೂಲಕ ತಮ್ಮ ಹತಾಶೆಯನ್ನು ಹೊರಗೆ ಹಾಕುತ್ತಿದ್ದಾರೆ.

ನಿಜಕ್ಕೂ ಜೆಡಿಎಸ್​ನಿಂದ ಮತದಾರರಿಗೆ ಬೆದರಿಕೆ ಹಾಕಿರುವ ಪ್ರಕರಣ ನಡೆದಿದ್ದರೆ, ಚುನಾವಣಾ ಆಯೋಗಕ್ಕೆ ದೂರು ನೀಡಲಿ, ನಾವು ಪಾರದರ್ಶಕ ಚುನಾವಣೆ ನಡೆಯಲಿ ಎಂದು ಬಯಸುತ್ತೇವೆ ಎಂದ ಅವರು ಶಿಕ್ಷಕರು ಪೂಜ್ಯನೀಯರು ಮತ್ತು ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೇಳಿ ಕೊಡುವವರು ಅವರ ಮೇಲೆ ಬೆದರಿಕೆ, ಒತ್ತಡ ಅಥವಾ ಆಮಿಷಗಳನ್ನು ಒಡ್ಡುವ ಯಾವುದೇ ಕಾನೂನು ಬಾಹಿರ ಚಟುವಟಿಕೆಯನ್ನು ನಾವು ನಡೆಸುವುದಿಲ್ಲ ಎಂದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.