ETV Bharat / state

ಕನ್ನಡದ ಕೋಟ್ಯಧಿಪತಿಯಲ್ಲಿ 6.40 ಲಕ್ಷ ರೂ. ಗೆದ್ದಿದ್ದ ಲೈನ್​ಮನ್ ಆತ್ಮಹತ್ಯೆ!

ಸುಮಾರು 18 ಲಕ್ಷ ರೂ. ಖರ್ಚು ಮಾಡಿ ಮನೆ ಕಟ್ಟಿಸಿದ್ದ ತಿಮ್ಮಣ್ಣ ಗೃಹಪ್ರವೇಶಕ್ಕೆ ಬಬಲಾದಿ ಸ್ವಾಮೀಜಿಗಳನ್ನು ಸಹ ಆಹ್ವಾನಿಸಿದ್ದನಂತೆ. ಆದರೆ, ಹೊಸಮನೆ ಗೃಹಪ್ರವೇಶಕ್ಕೂ ಮುನ್ನವೇ ಆತ್ಮಹತ್ಯೆಗೆ ಶರಣಾಗಿದ್ದು ಗ್ರಾಮಸ್ಥರಲ್ಲಿ ಆಶ್ಚರ್ಯ ಉಂಟುಮಾಡಿದೆ.

Young Man Suicide In Bagalakote
ತಿಮ್ಮಣ್ಣ
author img

By

Published : May 5, 2022, 7:44 PM IST

ಬಾಗಲಕೋಟೆ: ಕನ್ನಡದ ಕೋಟ್ಯಧಿಪತಿಯಲ್ಲಿ ಭಾಗವಹಿಸಿದ್ದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಹೆಸ್ಕಾಂ ಲೈನ್​​ಮನ್ ಆಗಿದ್ದ ತಿಮ್ಮಣ್ಣ ಗುರಡ್ಡಿ (27) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಯುವಕ ಎಂದು ತಿಳಿದು ಬಂದಿದೆ. ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಮುಧೋಳ ತಾಲೂಕಿನ ಮಂಟೂರ ವ್ಯಾಪ್ತಿಯ ತೋಟದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಸೋಮವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ವಿವಾಹ ನೋಂದಣಿ ಕಚೇರಿ ಸಮೀಪಿಸುತ್ತಿದ್ದಂತೆ ಯುವಕ ಪರಾರಿ.. ಪ್ರೀತಿಸಿದಾಕೆ ಕಂಗಾಲು!

ನಟ ರಮೇಶ್ ಅರವಿಂದ ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಧಿಪತಿಯಲ್ಲಿ ಈ ಯುವಕ ಭಾಗವಹಿಸಿದ್ದ. ಎಸ್​ಎಸ್​ಎಲ್​ಸಿ ಓದಿದ್ದ ತಿಮ್ಮಣ್ಣ ಕನ್ನಡದ ಕೋಟ್ಯಧಿಪತಿಯಲ್ಲಿ 6.40 ಲಕ್ಷ ರೂ. ಗೆದ್ದಿದ್ದ. ಟಿಕ್​​ಟಾಕ್, ಹಾಸ್ಯ, ಸಂಗೀತದ ಮೂಲಕ ಅಭಿಮಾನಿ ಬಳಗ ಹೊಂದಿದ್ದ. ಅಲ್ಲದೇ ಕ್ರೀಡಾಪಟು ಸಹ ಆಗಿದ್ದ. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯ ಚಿಕಿತ್ಸೆ ಹಣ ಸಂಗ್ರಹಿಸಿದ್ದನಂತೆ. ಅಲ್ಲದೇ ಹೊಸ ಮನೆ ಕಟ್ಟಿಸುವ ಸಲುವಾಗಿ ಸಾಲ ಸಹ ಮಾಡಿಕೊಂಡಿದ್ದನಂತೆ. ಆ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

Young Man Suicide In Bagalakote
ಕನ್ನಡದ ಕೋಟ್ಯಧಿಪತಿ ತಿಮ್ಮಣ್ಣ

ಇಂದು (ಮೇ 5) ಹೊಸಮನೆ ಗೃಹಪ್ರವೇಶ ಇತ್ತು. ಸುಮಾರು 18 ಲಕ್ಷ ರೂ. ಖರ್ಚು ಮಾಡಿ ಮನೆ ಕಟ್ಟಿಸಿದ್ದ ತಿಮ್ಮಣ್ಣ ಗೃಹಪ್ರವೇಶಕ್ಕೆ ಬಬಲಾದಿ ಸ್ವಾಮೀಜಿಗಳನ್ನು ಸಹ ಆಹ್ವಾನಿಸಿದ್ದನಂತೆ. ಆದರೆ, ಹೊಸಮನೆಯ ಗೃಹಪ್ರವೇಶಕ್ಕೂ ಮುನ್ನವೇ ಆತ್ಮಹತ್ಯೆಗೆ ಶರಣಾಗಿದ್ದು, ಗ್ರಾಮಸ್ಥರಲ್ಲಿ ಆಶ್ಚರ್ಯ ಉಂಟುಮಾಡಿದೆ. ಆದರೆ, ಆತ್ಮಹತ್ಯೆ ಮಾಡಿಕೊಳ್ಳುವಂತಹ ಹಣದ ಸಮಸ್ಯೆ ಆತನ ಬಳಿ ಇರಲಿಲ್ಲ. ಒಳ್ಳೆಯ ಸಂಬಳ ಬರುತ್ತಿತ್ತು. ಸ್ಯಾಲರಿ ಮೇಲೆ 16 ಲಕ್ಷ ರೂ. ಬ್ಯಾಂಕ್ ಸಾಲ ತೆಗೆದಿದ್ದ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನಾದಿನ ರಾತ್ರಿ 10 ಗಂಟೆಗೆ ಸ್ನೇಹಿತನ ಪಾನ್​​ಶಾಪ್​ಗೆ ಹೋಗಿದ್ದ.

ಇದನ್ನೂ ಓದಿ: ಬಡ ಅನ್ನದಾತನಿಗೆ ಒಲಿದ ಅದೃಷ್ಟ.. ಜಮೀನಿನಲ್ಲಿ ಕೆಲಸ ಮಾಡ್ತಿದ್ದ ವೇಳೆ ಸಿಕ್ತು ವಜ್ರ!

ಮನೆ ಗೃಹಪ್ರವೇಶ ಬಗ್ಗೆ ಮಾತನಾಡಿ ಬಂದಿದ್ದ. ಆದರೆ, ಬೆಳಗ್ಗೆ 7 ಗಂಟೆಗೆ ಆತ್ಮಹತ್ಯೆ ಸುದ್ದಿ ಕೇಳಿ ನಮಗೂ ಆಶ್ಚರ್ಯವಾಗಿದೆ ಅನ್ನುತ್ತಾರೆ ಆತನ ಸ್ನೇಹಿತರು. ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಕೇಳಿ ಆತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಬೀಳಗಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.