ETV Bharat / state

ಬಾಗಲಕೋಟೆ: ವಿಶೇಷವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ - ಬಾಗಲಕೋಟೆ

ಬಾಗಲಕೋಟೆ ಜಿಲ್ಲಾ ಪಂಚಾಯತ್​ ಸಭಾಂಗಣದಲ್ಲಿ ಇಂದು ಮಹಿಳೆಯರೆಲ್ಲ ಸೇರಿಕೊಂಡು ವಿಶೇಷವಾಗಿ ಮಹಿಳಾ ದಿನಾಚರಣೆ ಆಚರಿಸಿದರು.

World Women's Day
ವಿಶ್ವ ಮಹಿಳಾ ದಿನಾಚರಣೆ ಆಚರಣೆ
author img

By

Published : Mar 8, 2021, 5:19 PM IST

ಬಾಗಲಕೋಟೆ: ನಗರದ ಜಿಲ್ಲಾ ಪಂಚಾಯತ್​ ಸಭಾಂಗಣದಲ್ಲಿ ಇಂದು ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಜಿ.ಪಂ ಅಧ್ಯಕ್ಷೆ ಗಂಗೂಬಾಯಿ ಮೇಟಿ ಅವರು, ಜಿ.ಪಂ. ಸದಸ್ಯರಿಗೆ ಹಾಗೂ ಇತರ ಮಹಿಳೆಯರಿಗೆ ಅರಿಷಿಣ ಕುಂಕುಮ ಹಚ್ಚಿ ಹೂವು ‌ಮೂಡಿಸಿದರು.

ಜಿಲ್ಲಾ ಪಂಚಾಯತ್​ ನೂತನ ಸಭಾಂಗಣದಲ್ಲಿ ಆಯೋಜಿಸಿದ್ದ, ಕಾರ್ಯಕ್ರಮದಲ್ಲಿ ವೇದಿಕೆಯಿಂದ ಇಳಿದು ಬಂದ ಜಿಲ್ಲಾ ಪಂಚಾಯತ್​ ಅಧ್ಯಕ್ಷೆ ಗಂಗೂಬಾಯಿ(ಬಾಯಕ್ಕ) ಮೇಟಿಯವರು ವೇದಿಕೆ ಮುಂದೆ ಕುಳಿತಿದ್ದ ಮಹಿಳಾ ಅಧಿಕಾರಿಗಳಿಗೆ ಹಾಗೂ‌ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಅರಿಷಿಣ, ಕುಂಕುಮ ಹಚ್ಚಿ ಹೂವು ನೀಡಿ ಪುಸ್ತಕವನ್ನು ಕಾಣಿಕೆ ನೀಡುವ ಮೂಲಕ ಮಹಿಳಾ ದಿನಾಚರಣೆ ಆಚರಿಸಿದರು.

ಜಿಲ್ಲಾ ಪಂಚಾಯತ್​ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ

ಸಾಂಸೃತಿಕ ಕಾರ್ಯಕ್ರಮದಲ್ಲಿ ಶೋಭಾನ ಪದ, ಜಾನಪದ ಹಾಡುವ ಕಲಾವಿದರೊಂದಿಗೆ ಮಹಿಳೆಯರೆಲ್ಲಾ ದನಿಗೂಡಿಸಿದರು. ಅಲ್ಲದೇ ಜಿಲ್ಲಾ ಪಂಚಾಯತ್ ಸದಸ್ಯರ ಅವಧಿ ಮುಕ್ತಾಯ ಆಗುತ್ತಿರುವ ಹಿನ್ನೆಲೆ ತಮ್ಮ ಅಧಿಕಾರಾವಧಿಯ ಕೊನೆಯ ಕಾರ್ಯಕ್ರಮವೆಂದು ಅದ್ಧೂರಿಯಾಗಿ ಆಚರಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.