ETV Bharat / state

ಸಾಲ ಮನ್ನಾ ವಿಚಾರ: ಬಿಎಸ್​ವೈ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದ ನೇಕಾರರ ಸಂಘ - ನೇಕಾರರ ಸಾಲ ಮನ್ನಾ

ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಕೂಡಲೇ ಬಿ.ಎಸ್​.ಯಡಿಯೂರಪ್ಪ ನೇಕಾರರ 100 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿ ಘೋಷಣೆ ಮಾಡಿದ್ದಾರೆ.

ನೇಕಾರರ ಸಮಾಜದ ವತಿಯಿಂದ ಸಿಎಂಗೆ ಗೌರವ
author img

By

Published : Jul 30, 2019, 11:08 PM IST

ಬಾಗಲಕೋಟೆ: ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನವೇ ರಾಜ್ಯದ ನೇಕಾರರ 100 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿ ಬಿಎಸ್​ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಬಿಎಸ್​ವೈ ಕಾರ್ಯ ಶ್ಲಾಘನೀಯ ಎಂದು ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಸಂತಸ ವ್ಯಕ್ತಪಡಿಸಿದ್ದಾರೆ.

ಇಂದು ಬೆಳ್ಳಗ್ಗೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸಿರುವ ಅವರು,ರಾಜ್ಯಾದ್ಯಂತ ನೇಕಾರರ ಸಾಲ 241 ಕೋಟಿ ರೂ.ಗಳಷ್ಟಿದ್ದು,100 ಕೋಟಿ ರೂ.ಗಳ ಬದಲಾಗಿ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಮನವಿ ಮಾಡಿದರು. ಇದರಿಂದ ನೇಕಾರರ ಬದುಕು ಮತ್ತಷ್ಟು ಸರಳವಾಗುವುದು ಎಂದು ತಿಳಿಸಿದರು.

ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ನೇಕಾರರ 100 ಕೋಟಿ ರೂ.ಗಳ ಸಾಲ ಮನ್ನಾ ಮಾಡಿದ್ದಕ್ಕೆ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ನೇಕಾರ ಮುಖಂಡರು ಬಿ.ಎಸ್. ಯಡಿಯೂರಪ್ಪನವರನ್ನು ಸನ್ಮಾನಿಸಿದರು. ನೇಕಾರ ಮುಖಂಡರಾದ ಸುರೇಶ ಕೋಲಾರ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಭೀಮಶಿ ಮಗದುಮ್, ಜಿಲ್ಲಾ ಹೋರಾಟಗಾರ ಡಾ. ಪಂಡಿತ ಪಟ್ಟಣ, ಮಲ್ಲಿಕಾರ್ಜುನ ಬಾಣಕಾರ, ಸಂಗಯ್ಯ ಅಮ್ಮಣಗಿಮಠ, ರಾಜು ಅಂಬಲಿ, ಆನಂದ ಕಂಪು, ಲಕ್ಕಪ್ಪ ಪಾಟೀಲ ಮತ್ತಿತರರು ಇದ್ದರು.

Intro:AnchorBody:ಸಾಲ ಮನ್ನಾ ಸ್ವಾಗತಾರ್ಹ: ಸಂಪೂರ್ಣ ಸಾಲಮನ್ನಾವಾಗಲಿ

ಬಾಗಲಕೋಟೆ--ರಾಜ್ಯದ ನೇಕಾರರಿಗೆ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಂದೇ 100 ಕೋಟಿ ರೂ.ಗಳಷ್ಟು ನೇಕಾರರ ಸಾಲ ಮನ್ನಾ ಮಾಡುವದಾಗಿ ಅಭೂತಪೂರ್ವ ಕ್ರಮ ಕೈಗೊಂಡಿರುವ ಬಿ.ಎಸ್. ಯಡಿಯೂರಪ್ಪನವರ ಕಾರ್ಯ ಶ್ಲಾಘನೀಯವಾದುದು ಎಂದು ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಹೇಳಿದರು.
         ಮಂಗಳವಾರ ಬೆಳಿಗ್ಗೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸುವ ಮೂಲಕ ಮನವಿ ಅರ್ಪಿಸಿದ ಅವರು, ಸಿಎಂರಿಗೆ ಮತ್ತಷ್ಟು ಮನವಿ ಮಾಡಿ ರಾಜ್ಯಾದ್ಯಂತ ಎಲ್ಲ ನೇಕಾರರ ಸಾಲ ಕೇವಲ 241 ಕೋಟಿ ರೂ.ಗಳಷ್ಟು ಮಾತ್ರವಿದ್ದು, 100 ಕೋಟಿ ರೂ.ಗಳ ಬದಲಾಗಿ ಸಂಪೂರ್ಣ ಸಾಲ ಮನ್ನಾ ಎಂದು ಘೋಷಣೆ ಮಾಡಿದರೆ ನೇಕಾರ ಸಮುದಾಯದ ಜೀವನ ಮಟ್ಟ ಸುಧಾರಣೆ ಜೊತೆಗೆ ಪುನಶ್ಚೇತನ ಕಲ್ಪಿಸಿದಂತಾಗುವದು ಎಂದು ಟಿರಕಿ ಮನವಿ ಮಾಡಿದರು.

-ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ನೇಕಾರರ 100 ಕೋಟಿ ರೂ.ಗಳ ಸಾಲ ಮನ್ನಾ ಮಾಡಿದ್ದಕ್ಕೆ ಮಂಗಳವಾರ ಮಧ್ಯಾಹ್ನ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ನೇಕಾರ ಮುಖಂಡರು ಬಿ.ಎಸ್. ಯಡಿಯೂರಪ್ಪನವರನ್ನು ಸನ್ಮಾನಿಸಿದರು. ನೇಕಾರ ಮುಖಂಡರಾದ ಸುರೇಶ ಕೋಲಾರ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಭೀಮಶಿ ಮಗದುಮ್, ಜಿಲ್ಲಾ ಹಟಗಾರ ಸಮಾಜದ ಅಧ್ಯಕ್ಷ ಡಾ. ಪಂಡಿತ ಪಟ್ಟಣ, ಮಲ್ಲಿಕಾರ್ಜುನ ಬಾಣಕಾರ, ಸಂಗಯ್ಯ ಅಮ್ಮಣಗಿಮಠ, ರಾಜು ಅಂಬಲಿ, ಆನಂದ ಕಂಪು, ಲಕ್ಕಪ್ಪ ಪಾಟೀಲ, ಕಕಮರಿ ಇದ್ದರು.
         ನೇಕಾರ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷ ರಮೇಶ ಭಾಕರೆ, ಡಾ. ಅನಿಲ ಕಾಂಬಳೆ, ವಿಜಯ ಜುಂಜಾ, ಓಂಶಂಕರ ಹುಲಗೇರಿ, ರವಿಚಂದ್ರ ನರಬೆಂತಿ ಅನೇಕರಿದ್ದರು.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.