ETV Bharat / state

ಪ್ರವಾಹದ ಜೊತೆ ಹೋಗಲು ನಾವು ಸತ್ತ ಮೀನುಗಳಲ್ಲ..ಜೀವಂತ ಮೀನುಗಳು: ಉಪೇಂದ್ರ

ದೇಶದಲ್ಲಿ ರಾಜಕಾರಣ ಹೋಗಿ ಪ್ರಜಾಕೀಯ ಅಂತ ಆಗಬೇಕು ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ತಿಳಿಸಿದ್ದಾರೆ.

ಉಪೇಂದ್ರ, ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ
author img

By

Published : Apr 12, 2019, 4:15 PM IST

ಬಾಗಲಕೋಟೆ: ಪ್ರಜಾಕೀಯ ಪಕ್ಷದಲ್ಲಿ ಅಭ್ಯರ್ಥಿಗಳಿಂದ ನಿಧಿ ಸಂಗ್ರಹ ಮಾಡಲ್ಲ, ಅಭ್ಯರ್ಥಿಗಳಿಗೆ ಹಣ ನೀಡಿ ಪ್ರಚಾರ ಮಾಡಲಾಗುತ್ತದೆ. ಆದರೆ ಇಲ್ಲಿ ಸ್ಟಾರ್ ಪ್ರಚಾರಕರೇ ಜನರು ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ತಿಳಿಸಿದ್ದಾರೆ.

ಉಪೇಂದ್ರ, ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ

ನಗರದಲ್ಲಿ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಶಶಿಕುಮಾರ ಪರವಾಗಿ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ರಾಜ್ಯದ 27 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಸ್ಪರ್ಧೆ ಮಾಡಿರುವುದರಿಂದ ಎಲ್ಲಾ ಕಡೆಗೆ ಪ್ರಚಾರ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಮುಂದಿನ ವಿಧಾನಸಭೆಗೆ ಸ್ಪರ್ಧೆ ಮಾಡುತ್ತೇನೆ. ಆದರೆ ಯಾವ ಕ್ಷೇತ್ರ ಎಲ್ಲಿ ಎಂಬುದು ನಿರ್ಧಾರ ಮಾಡಿಲ್ಲ ಎಂದಿದ್ದಾರೆ. ಇನ್ನು ತಮ್ಮ ಪಕ್ಷ ಪ್ರವಾಹ ವಿರುದ್ಧ ಈಜುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ‌ನೀಡಿದ ಉಪೇಂದ್ರ, ಪ್ರವಾಹ ಜೊತೆ ಹೋಗುವದು ಸತ್ತ ಮೀನುಗಳು, ಪ್ರವಾಹ ವಿರುದ್ಧ ಹೋಗುವುದು ಜೀವಂತ ಮೀನುಗಳು ಎಂದರು, ದೇಶದಲ್ಲಿ ರಾಜಕಾರಣ ಹೋಗಿ ಪ್ರಜಾಕೀಯ ಅಂತ ಆಗಬೇಕು ಏಕೆಂದರೆ ಪ್ರಜೆಗಳಿಂದಲೇ ಎಲ್ಲಾ ನಡೆಯುವಂತೆ ಆಗಬೇಕು. ಪ್ರಜೆಗಳು ಹೇಳಿದ ಹಾಗೆ ನಾಯಕರು ಇರಬೇಕು ಇದು ಪ್ರಜಾಕೀಯದ ಪ್ರಮುಖ ಗುರಿ. ಹಣ ವೆಚ್ಚ ಮಾಡಿ ರ‍್ಯಾಲಿ, ಬೃಹತ್ ಸಭೆ ಸಮಾರಂಭ ನಡೆಸುವುದಿಲ್ಲ ಜನತೆ ಮಧ್ಯೆ ಇದ್ದು ಕೆಲಸ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Intro:Anchor

Body:ಪ್ರಜಾಕೀಯ ಪಕ್ಷದಲ್ಲಿ ಅಭ್ಯರ್ಥಿ ಗಳಿಂದ ನಿಧಿ ಸಂಗ್ರಹ ಮಾಡಲ್ಲ,ಅಭ್ಯರ್ಥಿ ಗಳಿಗೆ ಹಣ ನೀಡಿ ಪ್ರಚಾರ ಮಾಡಲಾಗುತ್ತದೆ.ಆದರೆ ಇಲ್ಲಿ ಸ್ಟಾರ್ ಪ್ರಚಾರಕರೇ ಜನರು ಎಂದು ಉತ್ತಮ ಪ್ರಜಾಕೀಯ ಪಕ್ಷದ ಅಧ್ಯಕ್ಷ‌ ಹಾಗೂ ಚಿತ್ರನಟ ಉಪೇಂದ್ರ ತಿಳಿಸಿದ್ದಾರೆ.
ಅವರು ಬಾಗಲಕೋಟೆ ನಗರದಲ್ಲಿ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಶಶಿಕುಮಾರ ಪರವಾಗಿ ಪ್ರಚಾರ ಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ರಾಜ್ಯದ 27 ಕ್ಷೇತ್ರದಲ್ಲಿ ಅಭ್ಯರ್ಥಿ ಗಳು ಸ್ಪರ್ಧೆ ಮಾಡಿರುವದರಿಂದ ಎಲ್ಲಾ ಕಡೆಗೆ ಪ್ರಚಾರ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಲ್ಲ ಎಂದು ತಿಳಿಸಿದ ಉಪೇಂದ್ರ, ಮುಂದಿನ ವಿಧಾನಸಭೆ ಗೆ ಸ್ಪರ್ಧೆ ಮಾಡುತ್ತೇನೆ.ಆದರೆ ಯಾವ ಕ್ಷೇತ್ರ ಎಲ್ಲಿ ಎಂಬುದು ನಿರ್ಧಾರ ಮಾಡಿಲ್ಲ ಎಂದ ಅವರು,ನಮ್ಮ ಪಾರ್ಟಿಯ ವ್ಯವಸ್ಥೆ ಮುಂದಿನ ಜನರೇಶನ್ ಸಹಾಯ ಆಗುವ ದೃಷ್ಟಿಯಿಂದ ಈಗಲೇ ಸಿದ್ದತೆ ಮಾಡಿಕೊಳ್ಳಬಹುದು ಎಂದರು.ತಮ್ಮ ಪಕ್ಷ ಪ್ರವಾಹ ವಿರುದ್ಧ ಈಜುತ್ತೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ‌ನೀಡಿದ ಉಪೇಂದ್ರ, ಪ್ರವಾಹ ಜೊತೆ ಹೋಗುವದು ಸತ್ತ ಮೀನುಗಳು ,ಪ್ರವಾಹ ವಿರುದ್ದ ಹೋಗುವದು ಜೀವಂತ ಮೀನುಗಳು ಎಂದರು,ದೇಶದಲ್ಲಿ ರಾಜಕಾರಣ ಹೋಗಿ ಪ್ರಜಾಕೀಯ ಅಂತ ಆಗಬೇಕು ಏಕೆಂದರೆ ಪ್ರಜೆಗಳಿಂದಲೇ ಎಲ್ಲಾ ನಡೆಯುವಂತೆ ಆಗಬೇಕು.ಪ್ರಜೆಗಳು ಹೇಳಿದ ಹಾಗೆ ನಾಯಕರು ಇರಬೇಕು ಇದು ಪ್ರಜಾಕೀಯ ಪ್ರಮುಖ ಗುರಿ ಎಂದರು.ಹಣ ವೆಚ್ಚ ಮಾಡಿ ರ್ಯಾಲಿ,ಬೃಹತ್ ಸಭೆ ಸಮಾರಂಭ ನಡೆಸುವುದಿಲ್ಲ ಎಲ್ಲವೂ ಜನತೆ ಮಧ್ಯೆ ಇದ್ದು,ಕೆಲಸ ಮಾಡಲಾಗುವದು ಎಂದು ತಿಳಿಸಿದರು.

Conclusion:Etv,News,Bagalkote

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.