ETV Bharat / state

ಬತ್ತಿದ ಕೃಷ್ಣಾ ನದಿ: ಬೀದಿಗಿಳಿದ ಮೂರು ಜಿಲ್ಲೆಯ ರೈತಾಪಿ ವರ್ಗ

ಕೃಷ್ಣಾ ನದಿ ನೀರಿಲ್ಲದೇ ಬರಿದಾಗಿರುವುದರಿಂದ ಬಾಗಲಕೋಟೆ, ಬಿಜಾಪೂರ ಹಾಗೂ ಬೆಳಗಾವಿ ಜಿಲ್ಲೆಯ ರೈತರ ಪರಸ್ಥಿತಿ ಹೇಳತೀರದಾಗಿದೆ. ಕುಡಿಯುವ ನೀರಿನ ಸಮಸ್ಯೆ ಗಂಭೀರಗೊಳ್ಳುತ್ತ ಸಾಗಿದೆ.

ಸಂಪೂರ್ಣವಾಗಿ ಬತ್ತಿದ ಕೃಷ್ಣಾ ನದಿ
author img

By

Published : Apr 25, 2019, 9:23 PM IST

ಬಾಗಲಕೋಟೆ: ಉತ್ತರ ಕರ್ನಾಟಕದ ಜೀವಜಲ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿದೆ. ಇನ್ನು ಹಿಪ್ಪರಗಿ ಜಲಾಶಯ ಸಹ ಪೂರ್ತಿಯಾಗಿ ಖಾಲಿಯಾಗಿದ್ದು ಈ ಭಾಗದ ಜಮಖಂಡಿ, ರಬಕವಿ-ಬನಹಟ್ಟಿ, ತೇರದಾಳ, ಹಾರುಗೇರಿ, ಅಥಣಿ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ಕೆಲ ಹಳ್ಳಿಗಳಲ್ಲಿ ನೀರಿನ ಹಾಹಾಕಾರ ಮಿತಿ ಮೀರಿದೆ.

ರಾಜಕೀಯ ಮುಖಂಡರು ಇತ್ತ ಲೋಕ ಸಮರಲ್ಲಿ ಮುಳುಗಿದ್ದು ಅತ್ತ ಮತದಾರ ನೀರಿಗಾಗಿ ಅಲೆದಾಡುವಂತಹ ಪರಿಸ್ಥಿತಿ ಬಂದೊದಗಿದೆ. ಕೋಯ್ನಾದಿಂದ ನೀರು ಬಂದೇ ಬಿಟ್ತು ಎನ್ನುವಂತಹ ಸಾಮಾಜಿಕ ತಾಣಗಳಲ್ಲಿನ ಹೇಳಿಕೆಗಳು ಹೇಳಿಕೆಗಳಾಗಿಯೇ ಉಳಿದಿದ್ದು, ನೀರು ಮಾತ್ರ ಬಂದಿಲ್ಲ. ಅಲ್ಲದೆ ಇದೇ ನೀರನ್ನ ಅವಲಂಬಿಸಿರುವ ಬಾಗಲಕೋಟೆ, ಬಿಜಾಪೂರ ಹಾಗೂ ಬೆಳಗಾವಿ ಜಿಲ್ಲೆಯ ರೈತರ ಪರಸ್ಥಿತಿ ಹೇಳತೀರದಾಗಿದೆ. ನೀರಿಲ್ಲದೇ ಬೆಳೆಗಳು ಒಣಗಿದ್ದು ರೈತ ಕಂಗಾಲಾಗಿದ್ದಾನೆ. ಕೋಯ್ನಾದಿಂದ ನೀರು ಬೀಡಿಸುದೊಂದೆ ಇದಕ್ಕೆ ಪರಿಹಾರ ಎನ್ನುತ್ತಾರೆ ಸ್ಥಳೀಯರು.

ರಾಜಕೀಯ ಧುರಿಣರು, ಅಧಿಕಾರಿಗಳು ಚುನಾವಣೆ ಪ್ರಕ್ರಿಯೆಯಲ್ಲಿ ಮುಳುಗಿದ್ದರಿಂದ ಜನರ ಸಮಸ್ಯೆಗೆ ಸ್ಪಂದಿಸುವರೇ ಇಲ್ಲದಂತಾಗಿದೆ. ಜಿಲ್ಲೆಯ ರಬಕವಿ-ಬನಹಟ್ಟಿ, ರಾಂಪುರ, ಹೊಸೂರು​ ಸೇರಿದಂತೆ ಹಲವು ಕಡೆಗಳಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ದಿನಗಟ್ಟಲೇ ಸರದಿಯಲ್ಲಿ ನಿಂತು ನೀರು ಪಡೆಯುವ ಸ್ಥಿತಿ ಬಂದಿದೆ.

ನೂತನ ಸದಸ್ಯರಿಗೆ ತಪ್ಪದ ಗೋಳು :

ಇನ್ನು ರಬಕವಿ-ಬನಹಟ್ಟಿ ನಗರಸಭೆಯ ನೂತನ ಸದಸ್ಯರ ಪರಿಸ್ಥಿತಿ ಹೇಳತೀರದಾಗಿದೆ. ದಿನದಿಂದ ದಿನಕ್ಕೆ ಪರಸ್ಥಿತಿ ವಿಕೋಪಕ್ಕೆ ಹೋಗಿದ್ದು, ನಮಗೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಿ ಎಂದು ಸಾರ್ವಜನಿಕರು ಚುನಾಯಿತ ಪ್ರತಿನಿಧಿಗಳ ಮನೆ ಹೋಗುತ್ತಿದ್ದಾರೆ. ಚುನಾವಣೆಯಾಗಿ ಹಲವು ತಿಂಗಳು ಕಳೆದರು ಇತ್ತ ಅಧಿಕಾರವೂ ಇಲ್ಲದ ಇವರು ಅತ್ತ ಲೋಕಸಭೆಯ ನೀತಿ ಸಂಹಿತೆಯ ಜಾರಿಯಿಂದಾಗಿ ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ. ಹೀಗಾಗಿ ಕೆಲವರು ಯಾಕಾದರೂ ನಾವು ನಗರಸಭೆಗೆ ಚುನಾಯಿತರಾದೆವು ಎನ್ನುತ್ತಿದ್ದಾರೆ.

water problem in three districts
ಸಂಪೂರ್ಣವಾಗಿ ಬತ್ತಿದ ಕೃಷ್ಣಾ ನದಿ

ಆದರೂ ನೂತನ ಸದಸ್ಯರು ತಮ್ಮ ತಮ್ಮ ವಾರ್ಡ್​ನಲ್ಲಿರುವ ನೀರಿನ ತೊಂದರೆ ನೀಗಿಸಲು ಹೊಸ ಹೊಸ ತಂತ್ರಗಳನ್ನು ಬಳಸಿ ಹರಸಹಾಸ ಮಾಡುತ್ತಿದ್ದಾರೆ. ಅಕ್ಕ-ಪಕ್ಕದ ಬಾವಿಗಳಲ್ಲಿನ ನೀರನ್ನು ಪೈಪ್​ಲೈನ್​ ಮೂಲಕ ನಗರಸಭೆ ಅಧಿಕಾರಿಗಳೊಂದಿಗೆ ಸೇರಿ ನಾಗರಿಕರಿಗೆ ನೀರು ಕೊಡುವ ವ್ಯವಸ್ಥೆ ಮಾಡುತ್ತಿದ್ದಾರೆ. ಆದರೂ ನೀರು ಸಮರ್ಪಕವಾಗಿ ವಿತರಣೆಯಾಗದೇ ಜನ ರೊಚ್ಚಿಗೆಳುತ್ತಿದ್ದಾರೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.