ETV Bharat / state

ಜು.1ರಿಂದ ಸೆ.15ರವರೆಗೆ ಜಲಶಕ್ತಿ ಅಭಿಯಾನ: ಕೆ.ಎಂ. ಮಹೇಶ - Bagalkote

ಜುಲೈ 1ರಿಂದ ಸೆಪ್ಟೆಂಬರ 15ವರೆಗೆ ಜಲಶಕ್ತಿ ಅಭಿಯಾನ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿರ್ದೇಶಕ ಕೆ.ಎಂ. ಮಹೇಶ ಕರೆ ನೀಡಿದ್ದಾರೆ.

ಜಲ ಸಂರಕ್ಷಣೆ ಆಂದೋಲನ ಪರಿಣಾಮಕಾರಿ ಅನುಷ್ಟಾನಕ್ಕೆ ಕರೆ
author img

By

Published : Jul 8, 2019, 5:48 AM IST

ಬಾಗಲಕೋಟೆ: ಜಿಲ್ಲೆಯ ಮೂರು ತಾಲೂಕುಗಳಲ್ಲಿ ನೀರಿನ ತೀವ್ರ ಕೊರತೆಯಿರುವ ಹಿನ್ನೆಲೆ ಜುಲೈ 1ರಿಂದ ಸೆಪ್ಟೆಂಬರ್ 15ರವರೆಗೆ ಜಲಶಕ್ತಿ ಅಭಿಯಾನ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿರ್ದೇಶಕ ಕೆ.ಎಂ. ಮಹೇಶ ಕರೆ ನೀಡಿದ್ದಾರೆ.

ಜಿಪಂ​ ಸಭಾ ಭವನದಲ್ಲಿ ಈ ಕುರಿತು ಜರುಗಿದ ಜನಶಕ್ತಿ ಅಭಿಯಾನ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಬಾಗಲಕೋಟೆ, ಬಾದಾಮಿ ಹಾಗೂ ಮುಧೋಳ ತಾಲೂಕುಗಳಲ್ಲಿ ನೀರಿನ ಕೊರತೆ ಕಂಡು ಬಂದಿದ್ದರಿಂದ ಈ ಭಾಗದಲ್ಲಿ ನೀರಿನ ಸದ್ಬಳಕೆ ಹಾಗೂ ನೀರಿನ ಸಂಪನ್ಮೂಲ ಪುನರ್ಜಿವನ ಕುರಿತು, ನೀರಿನ ಅವಶ್ಯಕತೆ ಮುಂದಿನ ಪೀಳಿಗೆಗೆ ದೊರಕುವ ಸಲುವಾಗಿ ಸದ್ಯ ಯಾವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂಬುದರ ಬಗ್ಗೆ ಚರ್ಚಿಸಿದರು.

ಮುಧೋಳ ಭಾಗದಲ್ಲಿ ಕಬ್ಬು ಬೆಳೆಯನ್ನು ಹೇರಳವಾಗಿ ಬೆಳೆಯುತ್ತಿರುವುದರಿಂದ, ಆ ಭಾಗದ ರೈತರು ಹೆಚ್ಚು ನೀರು ಬಳಸಿ ಉತ್ಪನ್ನ ಹೆಚ್ಚಿಸಬಹುದೆಂಬ ತಪ್ಪು ಕಲ್ಪನೆಯಿಂದ ಅವಶ್ಯಕತೆಗೆ ಮೀರಿ ನೀರು ಬಳಸಿದ್ದರಿಂದ ಅಲ್ಲಿಯ ಭೂಮಿ ಸವಳು-ಜವಳು ಆಗಿದೆ. ಈ ನಿಟ್ಟಿನಲ್ಲಿ ನೀರಿನ ಕೊರತೆ ಕಂಡುಬಂದಿದೆ. ಅದರಂತೆ ಬಾದಾಮಿ ತಾಲೂಕಿನಲ್ಲಿ ಕೆಂಪು ಹಾಗೂ ಮರಳು ಭೂಮಿಯಾಗಿದ್ದರಿಂದ ನೀರಿನ ಕೊರತೆ ಉಂಟಾಗಿದೆ ಎಂದರು.

ಬಾಗಲಕೋಟೆ ಭಾಗದಲ್ಲಿ ಕಲಾದಗಿ ಭಾಗ ಸುಣ್ಣದ ಪ್ರಮಾಣ ಹೆಚ್ಚಾಗಿದ್ದು, ಮೀತಿ ಮೀರಿದ ಬೋರವೆಲ್‍ಗಳ ಕೊರತೆಯಿಂದಾಗಿ ನೀರಿನ ಕೊರತೆ ಕಂಡುಬಂದಿದೆ. ಆದ್ದರಿಂದ ಈ ಮೂರು ಭಾಗಗಳಲ್ಲಿ ನೀರಿನ ಸದ್ಬಳಕೆ ಹಾಗೂ ಸಂರಕ್ಷಣೆ ಕುರಿತು ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸರ್ಕಾರೇತರ ಸಂಸ್ಥೆಗಳು, ಶಾಲಾ ಮಕ್ಕಳು ಹಾಗೂ ಗ್ರಾಮದ ಮುಖ್ಯಸ್ಥರನ್ನು ಒಳಗೊಂಡಂತೆ ಗ್ರಾಮೀಣ ಮಟ್ಟದಲ್ಲಿ ಜಲಶಕ್ತಿ ಅಭಿಯಾನದ ಕಾರ್ಯ ಚಟುವಟಿಕೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಿಳಿಸಿದರು.

ನೀರಿನ ಸಂರಕ್ಷಣೆ ಮೂಲಗಳಾದ ಕೆರೆ, ಕೃಷಿ ಹೊಂಡ, ಬಾವಿ ಸಂರಕ್ಷಣೆ ಹಾಗೂ ಪುನರುಜ್ಜೀವನಗೊಳಿಸುವುದು. ಸಮಗ್ರ ಜಲಾನಯನ ಮಳೆ ನೀರನ್ನು ಸಂಗ್ರಹಿಸುವ ಸಲುವಾಗಿ ಮಳೆ ನೀರು ಕೊಯ್ಲು ಕಾರ್ಯಕ್ರಮಗಳನ್ನು ಸರ್ಕಾರಿ ಕಚೇರಿ ಹಾಗೂ ಆವರಣಗಳಲ್ಲಿ ಹಮ್ಮಿಕೊಳ್ಳಬೇಕು. ಮೂರು ತಾಲೂಕುಗಳಲ್ಲಿ ತಲಾ ಒಂದು ಕಿರು ಜಲಾನಯನ ಪ್ರದೇಶ ಆಯ್ಕೆ ಮಾಡಿಕೊಂಡು, ಜಲಾನಯನ ಅಭಿವೃದ್ದಿ ಮತ್ತು ಮಹಾತ್ಮಾ ಗಾಂಧಿ ನರೇಗಾ ಯೋಜನೆ ಹಾಗೂ ಅರಣ್ಯ ಇಲಾಖೆಯನ್ನ ಒಗ್ಗೂಡಿಸಿ ಅನುಷ್ಠಾನಗೊಳಿಸಲು ತಿಳಿಸಿದರು.

Intro:AnchorBody:ಜಲಸಂರಕ್ಷಣೆ ಆಂದೋಲನ ಪರಿಣಾಮಕಾರಿ ಅನುಷ್ಠಾನಕ್ಕೆ ಕರೆ

ಬಾಗಲಕೋಟೆ-: ಜಿಲ್ಲೆಯ ಮೂರು ತಾಲೂಕುಗಳಲ್ಲಿ ನೀರಿನ ತೀವ್ರ
ಕೊರತೆಯಿರುವ ಹಿನ್ನಲೆಯಲ್ಲಿ ಜುಲೈ 1 ರಿಂದ ಸೆಪ್ಟೆಂಬರ 15 ವರೆಗೆ ಜಲಶಕ್ತಿ ಅಭಿಯಾನ
ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ
ಅನಿಲದ ನಿರ್ದೇಶಕ ಮಹೇಶ ಕೆ.ಎಂ ಕರೆ ನೀಡಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಈ ಕುರಿತು ಜರುಗಿದ ಜನಶಕ್ತಿ ಅಭಿಯಾನ
ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಬಾಗಲಕೋಟೆ, ಬಾದಾಮಿ ಹಾಗೂ ಮುಧೋಳ
ತಾಲೂಕುಗಳಲ್ಲಿ ನೀರಿನ ಕೊರತೆ ಕಂಡುಬಂದಿದ್ದರಿಂದ ಈ ಭಾಗದಲ್ಲಿ ನೀರಿನ ಸದ್ಬಳಕೆ ಹಾಗೂ ನೀರಿನ
ಸಂಪನ್ಮೂಲ ಪುನರ್ಜಿವನ ಕುರಿತು, ನೀರಿನ ಅವಶ್ಯಕತೆ ಮುಂದಿನ ಪೀಳಿಗೆಗೆ ನೀರು ದೊರಕುವ
ಸಲುವಾಗಿ ಸದ್ಯ ಯಾವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂಬುದರ ಬಗ್ಗೆ ಚರ್ಚಿಸಿದರು.
ಮುಧೋಳ ಭಾಗದಲ್ಲಿ ಕಬ್ಬು ಬೆಳೆಯನ್ನು ಹೇರಳವಾಗಿ ಬೆಳೆಯುತ್ತಿರುವದರಿಂದ ಆ ಭಾಗದ
ರೈತರು ಹೆಚ್ಚು ನೀರು ಬಳಸಿ ಉತ್ಪನ್ನ ಹೆಚ್ಚಿಸಬಹುದೆಂಬ ತಪ್ಪು ಕಲ್ಪಣೆಯಿಂದ ಅವಶ್ಯಕತೆಗೆ ಮೀರಿ
ನೀರು ಬಳಸಿದ್ದರಿಂದ ಅಲ್ಲಿಯ ಭೂಮಿ ಸವಳು-ಜವಳು ಆಗಿದೆ. ಈ ನಿಟ್ಟಿನಲ್ಲಿ ನೀರಿನ ಕೊರತೆ
ಕಂಡುಬಂದಿದೆ. ಅದರಂತೆ ಬಾದಾಮಿ ತಾಲೂಕಿನಲ್ಲಿ ಕೆಂಪು ಹಾಗೂ ಮರಳು ಭೂಮಿಯಾಗಿದ್ದರಿಂದ
ಸಾಕಷ್ಟು ನೀರು ಉಪಯೋಗಿಸಿದರೂ ಕೂಡಾ ಉಪಯೋಗಕ್ಕೆ ಬರುತ್ತಿಲ್ಲವಾದ್ದರಿಂದ ನೀರಿನ ಕೊರತೆ
ಉಂಟಾಗಿದೆ ಎಂದರು.
ಬಾಗಲಕೋಟೆ ಭಾಗದಲ್ಲಿ ಕಲಾದಗಿ ಭಾಗ ಸುಣ್ಣದ ಪ್ರಮಾಣ ಹೆಚ್ಚಾಗಿದ್ದು, ಮೀತಿಮೀರಿದ
ಬೋರವೆಲ್‍ಗಳ ಕೊರತೆಯಿಂದಾಗಿ ನೀರಿನ ಕೊರತೆ ಕಂಡುಬಂದಿದೆ. ಆದ್ದರಿಂದ ಈ ಮೂರು
ಭಾಗಗಳಲ್ಲಿ ನೀರಿನ ಸದ್ಬಳಕೆ ಹಾಗೂ ಸಂರಕ್ಷಣೆ ಕುರಿತು ಅಭಿಯಾನ ಕಾರ್ಯಕ್ರಮ
ಹಮ್ಮಿಕೊಳ್ಳಲಾಗುತ್ತಿದೆ. ಅಭಿಯಾನದ ಸರಕಾರೇತರ ಸಂಸ್ಥೆಗಳು, ಶಾಲಾ ಮಕ್ಕಳು ಹಾಗೂ ಗ್ರಾಮದ
ಮುಖ್ಯಸ್ಥರನ್ನು ಒಳಗೊಂಡಂತೆ ಗ್ರಾಮೀಣ ಮಟ್ಟದಲ್ಲಿ ಜಲಶಕ್ತಿ ಅಭಿಯಾನದ ಕಾರ್ಯ ಚಟುವಟಿಕೆ
ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಿಳಿಸಿದರು.
ನೀರಿನ ಸಂರಕ್ಷಣೆಗೆ ಮೂಲಗಳಾದ ಕೆರೆ, ಕೃಷಿ ಹೊಂಡ, ಬಾವಿ, ಬೋರವೆಲ್‍ಗಳ ಸಂರಕ್ಷಣೆ
ಹಾಗೂ ಪುನರುಜ್ಜೀವನಗೊಳಿಸುವದು, ಸಮಗ್ರ ಜಲಾನಯನ ಮಳೆಯ ನೀರನ್ನು ಸಂಗ್ರಹಿಸುವ
ಸಲುವಾಗಿ ಮಳೆ ನೀರು ಕೊಯ್ಲು ಕಾರ್ಯಕ್ರಮಗಳನ್ನು ಸರಕಾರಿ ಕಚೇರಿ ಹಾಗೂ ಆವರಣಗಳಲ್ಲಿ
ಹಮ್ಮಿಕೊಳ್ಳಬೇಕು. ಮೂರು ತಾಲೂಕುಗಳಲ್ಲಿ ತಲಾ ಒಂದು ಕಿರು ಜಲಾನಯನ ಪ್ರದೇಶವನ್ನು ಆಯ್ಕೆ
ಮಾಡಿಕೊಂಡು ಜಲಾನಯನ ಅಭಿವೃದ್ದಿ ಮತ್ತು ಮಹಾತ್ಮಾ ಗಾಂಧಿ ನರೇಗಾ ಯೋಜನೆ ಹಾಗೂ
ಅರಣ್ಯ ಇಲಾಖೆ ವತಿಯಿಂದ ಒಗ್ಗೂಡಿಸಿ ಅನುಷ್ಠಾನಗೊಳಿಸಲು ತಿಳಿಸಿದರು.
ಸಭೆಯಲ್ಲಿ ಭಾರತ ಸರಕಾರದ ನೋಡಲ್ ಅಧಿಕಾರಿ ಓ.ಆರ್.ಕೆ ರೆಡ್ಡಿ, ಜಿ.ಪಂ ಸಿಇಓ
ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ದುರ್ಗೇಶ ರುದ್ರಾಕ್ಷಿ, ಜಿ.ಪಂ ಉಪಕಾರ್ಯದರ್ಶಿ
ವಿ.ಎಸ್.ಹಿರೇಮಠ ಸೇರಿದಂತೆ ವಿವಿಧ ಅನುಷ್ಠಾನ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.Conclusion:ಈ ಟಿವಿ ಭಾರತ,ಬಾಗಲಕೋಟೆ

For All Latest Updates

TAGGED:

Bagalkote
ETV Bharat Logo

Copyright © 2025 Ushodaya Enterprises Pvt. Ltd., All Rights Reserved.