ಬಾಗಲಕೋಟೆ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಇಳಿಮುಖವಾಗಿದ್ದಂತೆ ಡೆಂಘೀ ಸೇರಿದಂತೆ ವೈರಲ್ ಫೀವರ್ ಹೆಚ್ಚಾಗಿದೆ. ಇದರಿಂದ ಜಿಲ್ಲೆಯ ಬಹುತೇಕ ಆಸ್ಪತ್ರೆಗಳು ರೋಗಿಗಳಿಂದ ತುಂಬಿಕೊಂಡಿವೆ. ಹೀಗಾಗಿ ಆಸ್ಪತ್ರೆ ಮುಂದೆ ರೋಗಿಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಕೆಲದಿನಗಳಿಂದ ವೈರಲ್ ಫೀವರ್ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದರಲ್ಲಿ ಮಕ್ಕಳಲ್ಲಿಯೂ ಜ್ವರ ಕಾಣಿಸಿಕೊಳ್ಳುತ್ತಿದ್ದು, ಮಕ್ಕಳ ಆಸ್ಪತ್ರೆಗಳೂ ಸಹ ತುಂಬಿ ಹೋಗಿವೆ. ಜಿಲ್ಲೆಯ ಪ್ರಮುಖ ಆಸ್ಪತ್ರೆಗಳ ಮುಂದೆ ರೋಗಿಗಳ ಸಂಬಂಧಿಕರ ದಂಡೇ ನೆರೆದಿದ್ದು, ವೈರಲ್ ಫೀವರ್ ತೀವತೆ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಬಾಗಲಕೋಟೆ ಜಿಲ್ಲಾ ಕೇಂದ್ರದ ಆಸ್ಪತ್ರೆಗಳಿಗೆ ಬೆಳಗಾವಿ, ರಾಯಚೂರು, ವಿಜಯಪುರ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದಲೂ ರೋಗಿಗಳು ಬಂದು ದಾಖಲಾಗುತ್ತಿದ್ದಾರೆ. ಜೊತೆಗೆ ದಿನೇ ದಿನೆ ಪ್ರಕರಣಗಳು ಹೆಚ್ಚುತ್ತಲೇ ಇದೆ.
ಓದಿ: ಹಾವು ಕಚ್ಚಿ ಬಾಗಲಕೋಟೆ ಯೋಧ ಜಮ್ಮು-ಕಾಶ್ಮೀರದಲ್ಲಿ ಸಾವು, ಹುಟ್ಟೂರಿನಲ್ಲಿ ಅಂತ್ಯಕ್ರಿಯೆ