ಸಿದ್ದರಾಮೋತ್ಸವ ಬದಲಾಗಿ ಸಿದ್ದರಾಮ ಉರಿಸೋ ಉತ್ಸವ ಮಾಡಬೇಕಿತ್ತು: ಯತ್ನಾಳ ವ್ಯಂಗ್ಯ - ಬಾಗಲಕೋಟೆಯಲ್ಲಿ ಮಾತನಾಡಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ
ಇದ್ಯಾವ ಉತ್ಸವರಿ, ಇದು ಕೊನೆಯದ್ದು - ಸಿದ್ದರಾಮೋತ್ಸವ ಅಲ್ಲ, ಮನೆಗೆ ಹೋಗುವ ಉತ್ಸವ-ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಲೇವಡಿ
ಬಾಗಲಕೋಟೆ: ಸಿದ್ದರಾಮೋತ್ಸವ ಬದಲಾಗಿ ಸಿದ್ದರಾಮ ಉರಿಸೋ ಉತ್ಸವ ಮಾಡಬೇಕಿತ್ತು. ಉತ್ಸವ, ಭಂಡಾರ, ಕೇಸರಿ ಹಚ್ಚಿಕೊಳ್ಳೋದು ಅಂದ್ರೆ ಅವರಿಗೆ ಅಲರ್ಜಿ ಆಗುತ್ತದೆ. ಅದೇ ಹಾಲುಮತ ಪೇಟ ಹಾಕಿಕೊಂಡು ಕುಂಕುಮ ಹಚ್ಚಿಕೊಂಡ್ರೆ ಅದು ಸಿದ್ದರಾಮೋತ್ಸವ ಆಗುತ್ತದೆ. ನಮಾಜ್ ಟೋಪಿ ಹಾಕಿಕೊಳ್ತಾರೆ, ಆದ್ರೆ ಕೇಸರಿ ಬಂದರೆ ನೂಕ್ತಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವ್ಯಂಗ್ಯವಾಡಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದ್ಯಾವ ಉತ್ಸವರಿ, ಇದು ಕೊನೆಯದ್ದು, ಇದು ಸಿದ್ದರಾಮೋತ್ಸವ ಅಲ್ಲ, ಮನೆಗೆ ಹೋಗುವ ಉತ್ಸವ ಎಂದು ಲೇವಡಿ ಮಾಡಿದರು. ರಾಜ ಮಹಾರಾಜರು ವಾನಪ್ರಸ್ಥಾಶ್ರಮಕ್ಕೆ ಹೋಗುತ್ತಿದ್ದರು. ಇಂತಿಷ್ಟು ವರ್ಷ ಆದಮೇಲೆ ರಾಣಿಯರನ್ನ ಕರೆದುಕೊಂಡು ಅಡವಿಗೆ ಹೋಗುತ್ತಿದ್ದರು. ಹಾಗೆಯೇ ಸಿದ್ದರಾಮೋತ್ಸವ ಮೂಲಕ ನಮ್ಮ ಡಿಕೆಶಿಯನ್ನ ಅರಣ್ಯಕ್ಕೆ ಕಳಿಸೋ ಪ್ರೋಗ್ರಾಮ್ ಆಗಿದೆ. ಇಡೀ ಕಾಂಗ್ರೆಸ್ ಈಗ ಅರಣ್ಯಕ್ಕೆ ಹೋಗುತ್ತೆ, ರಾಹುಲ್ ಗಾಂಧಿಯಂತ ವ್ಯಕ್ತಿ ನೇತೃತ್ವ ಇರೋವಾಗ ಕಾಂಗ್ರೆಸ್ ಇಟಲಿಗೆ ಹೋಗುತ್ತದೆ ಎಂದು ಟೀಕಿಸಿದರು.
ಇದೇ ಸಮಯದಲ್ಲಿ ನನ್ನನ್ನು ಹೋಮ್ ಮಿನಿಸ್ಟರ್ ಮಾಡಿದ್ರೆ, ಎನ್ ಕೌಂಟರ್ ಮಾಡಿ ಬಿಡ್ತೀನಿ. ಈಗ ಸಚಿವ ಸ್ಥಾನ ಕೊಟ್ಟರೆ ಎಂಟು ತಿಂಗಳ ಮಾತ್ರ ಅವಧಿ ಇದೆ. ನಾನೇನು ಮಾಡೋದಿದೆ. ಕೆರೂರ ಘಟನೆ ಪೊಲೀಸ್ ಇಲಾಖೆ ವೈಫಲ್ಯ ಎಂಬ ವಿಚಾರವಾಗಿ ಮಾತನಾಡಿ, ಈ ಘಟನೆಗೆ ವೈಯಕ್ತಿಕ ದ್ವೇಷ ಕಾರಣ ಅಂತ ಸಿಎಂಗೆ ರಿಪೋರ್ಟ್ ನೀಡಿದ್ದಾರೆ. ಇದು ಪೊಲೀಸ್ ಇಲಾಖೆಯ ವೈಫಲ್ಯವಾಗಿದೆ. ತಪ್ಪು ಮಾಹಿತಿ ನೀಡಿದವರ ವಿರುದ್ಧ ಆ್ಯಕ್ಷನ್ ತಗೋಬೇಕು. ನಮ್ಮದೇ ಸರ್ಕಾರ ಇದೆ, ನಾನು ಬಿಜೆಪಿ ಶಾಸಕನಾಗಿ ಹೇಳುತ್ತಿದ್ದೇನೆ ಎಂದರು.
ಇದನ್ನೂ ಓದಿ:ಗೋರಿಯಲ್ಲಿದ್ದ ಶವದ ಬಾಯಿಗೆ ನೀರು ಬಿಟ್ಟರು! ಮಳೆಗಾಗಿ ವಿಜಯಪುರದಲ್ಲಿ ವಿಚಿತ್ರ ಪದ್ಧತಿ
ಪೊಲೀಸ್ ಇಲಾಖೆ ಬರಿ ಹಿಂದುಗಳನ್ನಷ್ಟೇ ಹಿಡಿಯೋದು. ಹಿಂದೂಗಳು ಇಲ್ಲಿ ಅಪರಾಧಿಗಳೇ ಅಲ್ಲ. ಹೊಡೆದೋರು ಬೇರೆಯವರು ಅವರನ್ನು ಅರೆಸ್ಟ್ ಮಾಡಬೇಕು. ಆದರೆ 11 ಜನ ಹಿಂದುಗಳನ್ನು ಅರೆಸ್ಟ್ ಮಾಡಿದ್ದಾರೆ. ಪೊಲೀಸ್ ಇಲಾಖೆಯ ಕಾರ್ಯವೈಖರಿ ಬದಲಾವಣೆ ಮಾಡಬೇಕು. ಘಟನೆ ನೋಡಿಕೊಂಡು ಮೂಕಪ್ರೇಕ್ಷಕರಾಗಿ ನಿಂತರೆ ಏನು? ಪೊಲೀಸರ ಕೈಯಲ್ಲಿ ಲಾಠಿ ಬಂದೂಕು ಯಾಕೆ ಕೊಟ್ಟಿದಾರೆ ಎಂದು ಯತ್ನಾಳ ಪ್ರಶ್ನಿಸಿದರು.