ETV Bharat / state

ಕೆಆರ್​ಪಿಪಿ ಪಕ್ಷ ಬಿಜೆಪಿಯ ಬಿ ಟೀಮ್: ವಿಜಯಾನಂದ ಕಾಶಪ್ಪನವರ್​​ ಆರೋಪ

ಹುನಗುಂದ ಕ್ಷೇತ್ರದ ಕಾಂಗ್ರೆಸ್​​ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ್​​​ ಅವರಿಂದು ಇಳಕಲ್​​ ಪಟ್ಟಣದಲ್ಲಿ ಈಟಿವಿ ಭಾರತ್​ದೊಂದಿಗೆ ಮಾತನಾಡಿದರು.

vijayananda-kashappanavar-accused-krpp-party-of-being-b-team-of-bjp-party
ಕೆಆರ್​ಪಿಪಿ ಪಕ್ಷ ಬಿಜೆಪಿಯ ಬಿ ಟೀಮ್: ವಿಜಯಾನಂದ ಕಾಶಪ್ಪನವರ್​​ ಆರೋಪ
author img

By

Published : May 8, 2023, 3:46 PM IST

Updated : May 8, 2023, 4:41 PM IST

ಕೆಆರ್​ಪಿಪಿ ಪಕ್ಷ ಬಿಜೆಪಿಯ ಬಿ ಟೀಮ್: ವಿಜಯಾನಂದ ಕಾಶಪ್ಪನವರ್​​ ಆರೋಪ

ಬಾಗಲಕೋಟೆ: ಕೊನೆಯ ಚುನಾವಣೆ ಎಂದು ನಾಟಕ ಆಡುವ ಮೂಲಕ ಬಿಜೆಪಿ ಶಾಸಕರಾದ ದೊಡ್ಡನಗೌಡ ನಾಟಕ ಮಾಡುತ್ತಿದ್ದಾರೆ ಎಂದು ಹುನಗುಂದ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ್ ಹೇಳಿದರು. ಇಳಕಲ್ಲ ಪಟ್ಟಣದಲ್ಲಿ ಈಟಿವಿ ಭಾರತ್​​ನೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಹಾಲಿ ಶಾಸಕರ ದೌರ್ಜನ್ಯದಿಂದ ಜನ ಬೇಸತ್ತು ಹೋಗಿದ್ದಾರೆ. ಈ ಹಿನ್ನಲೆ, ಈ ಬಾರಿ ಕಾಂಗ್ರೆಸ್ ಪಕ್ಷ ಜಯಬೇರಿ ಭಾರಿಸುವುದು ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿ ಮಾಡಿಲ್ಲ, ರಸ್ತೆ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಭ್ರಷ್ಟಾಚಾರದಿಂದ ಕ್ಷೇತ್ರದ ಜನತೆ ರೋಸಿ ಹೋಗಿದ್ದಾರೆ. ಇನ್ನು ಜನಾರ್ದನ ರೆಡ್ಡಿ ಪಕ್ಷದ ಅಭ್ಯರ್ಥಿ ಎಸ್​​​​​​ಆರ್​​ ನವಲಿ ಹಿರೇಮಠ ಅವರು ಮತದಾರರಿಗೆ ಹಣದ ಆಮಿಷ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕೆಆರ್​ಪಿಪಿ ಪಕ್ಷ ಬಿಜೆಪಿಯ ಬಿ ಟೀಮ್: ಜನಾರ್ದನ ರೆಡ್ಡಿ ಮತ್ತು ಬಿಜೆಪಿ ಪಕ್ಷದವರು ಇನ್ನೊಂದು ಪಕ್ಷವನ್ನು ಸ್ಥಾಪಿಸಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ತಂತ್ರ ಮಾಡುತ್ತಿದ್ದಾರೆ. ಜರ್ನಾರ್ದನ ರೆಡ್ಡಿ ಪಕ್ಷ ಬಿಜೆಪಿ ಪಕ್ಷದ ಬಿ ಟೀಮ್ ಆಗಿದೆ. ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದೇ ಪ್ರಮುಖ ಉದ್ದೇಶ ಆಗಿದೆ. ಆದರೆ, ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ, ಎಷ್ಟೇ ತಂತ್ರ ಕುತಂತ್ರ ಮಾಡಿದರೂ, ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆಲ್ಲುವುದು ಖಚಿತ ಎಂದು ವಿಜಯಾನಂದ ಕಾಶಪ್ಪನವರ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: ಜನಾರ್ದನರೆಡ್ಡಿ ಬೆಳೆಸಿದವರು ಈಗ ಅವರನ್ನೇ ನಡು ನೀರಿನಲ್ಲಿ ಕೈಬಿಟ್ಟು ಹೋಗಿದ್ದಾರೆ: ಗಾಲಿ ಲಕ್ಷ್ಮೀ ಅರುಣಾ

ಸಚಿವ ನಿರಾಣಿ ರೋಡ್​​ ಶೋ: ಬಹಿರಂಗ ಸಭೆ, ಪ್ರಚಾರಕ್ಕೆ ಕೊನೆಯ ದಿನವಾದ ಇಂದು ಸಚಿವ ಮುರಗೇಶ ನಿರಾಣಿ‌ ಇಂದು ಕಲಾದಗಿ ಹಾಗೂ ಬೀಳಗಿ ಪಟ್ಟಣದಲ್ಲಿ ರೋಡ್ ಶೋ ಹಾಗೂ ಬೈಕ್ ರ‍್ಯಾಲಿ ನಡೆಸುವ ಮೂಲಕ ಮತದಾರರನ್ನು ಸೆಳೆಯುವ ಕೊನೆಯ ಕಸರತ್ತು ನಡೆಸಿದರು. ಕಲಾದಗಿ ಗ್ರಾಮದಲ್ಲಿ ತೆರದ ವಾಹನದಲ್ಲಿ ರೋಡ್​​​ ಶೋ ನಡೆಸಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮದ ಯುವಕರು, ಹೂ ಮಳೆ ಸುರಿಸುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ನಂತರ ಬೀಳಗಿ ಪಟ್ಟಣದಲ್ಲಿ ಬೃಹತ್ ಬೈಕ್ ರ‍್ಯಾಲಿ ನಡೆಸುವ ಮೂಲಕ‌ ಮತಯಾಚನೆ ನಡೆಸಿದರು. ಇಡೀ ಬೀಳಗಿ ಪಟ್ಟಣದಲ್ಲಿ ಕೇಸರಿಮಯವಾಗಿದ್ದು, ಯುವಕರು ಬೈಕ್ ರ‍್ಯಾಲಿ ಮೂಲಕ ಬಿಜೆಪಿ ಪಕ್ಷದ ಧ್ವಜವನ್ನು ಹಿಡಿದು ಜಯ ಘೋಷಣೆ ಹಾಕುತ್ತಾ ಮತಯಾಚನೆ ನಡೆಸಿದರು. ಜಿಲ್ಲೆಯ ಏಳು‌ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ಪಕ್ಷದ ಅಭ್ಯರ್ಥಿಗಳು ರೋಡ್ ಶೋ, ಬೈಕ್ ರ‍್ಯಾಲಿ ಸೇರಿದಂತೆ ಇತರ ಸಭೆ ನಡೆಸಿ, ಕೊನೆಯ ಬಹಿರಂಗ ಪ್ರಚಾರ ಮತಯಾಚನೆ ನಡೆಸಿದರು.

ಇದನ್ನೂ ಓದಿ : ವರುಣಾದಲ್ಲಿ ಸಿದ್ದರಾಮಯ್ಯಗೆ ಸೋಲು, ಕನಕಪುರದಲ್ಲಿ ಡಿಕೆಶಿಗೆ ಟೆನ್ಷನ್: ನಳಿನ್ ಕುಮಾರ್ ಕಟೀಲ್

Last Updated : May 8, 2023, 4:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.