ETV Bharat / state

ಬಾಗಲಕೋಟೆ : ನಗರಸಭೆ ಸಿಬ್ಬಂದಿ, ಪೌರಕಾರ್ಮಿಕರಿಗೆ ಸನ್ಮಾನಿಸಿದ ಶಾಸಕ ವೀರಣ್ಣ ಚರಂತಿಮಠ

ಬಾಗಲಕೋಟೆ ನಗರಸಭೆ ಸಿಬ್ಬಂದಿ ಮತ್ತು ಪೌರ ಕಾರ್ಮಿಕರು ತಮ್ಮ ಪ್ರಾಣದ ಹಂಗು ತೊರೆದು ಕೊರೊನಾ ವಿರುದ್ದ ಹೋರಾಡುತ್ತಿದ್ದಾರೆ. ಈ ಕಾರ್ಯಕ್ಕೆ ಶಾಸಕ ವೀರಣ್ಣ ಚರಂತಿಮಠ ಹಾಗೂ ನಗರಸಭೆ ಬಿಜೆಪಿ ಸದಸ್ಯರು ಫಲ ಪುಪ್ಪ ನೀಡಿ, ಶಾಲು ಹೊದಿಸಿ ಸನ್ಮಾನ ಮಾಡಿದರು.

author img

By

Published : May 31, 2020, 11:22 PM IST

Veeranna MLA  honored Bagalkot Municipal Council staff
ಬಾಗಲಕೋಟೆ ನಗರಸಭೆ ಸಿಬ್ಬಂದಿ ಮತ್ತು ಪೌರಕಾರ್ಮಿಕರಿಗೆ ಸನ್ಮಾನ ಮಾಡಿದ ಶಾಸಕ ವೀರಣ್ಣ

ಬಾಗಲಕೋಟೆ: ಕೋವಿಡ್ -19 ಭೀತಿಯಲ್ಲಿಯೂ ನಗರಸಭೆಯ ಸಿಬ್ಬಂದಿ ಮತ್ತು ಪೌರ ಕಾರ್ಮಿಕರು ವಾರಿಯರ್ಸ್ ಗಳಂತೆ ಕೆಲಸ ಮಾಡಿರುವುದಕ್ಕೆ ನಗರಸಭೆ ಬಿಜೆಪಿ ಸದಸ್ಯರಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶಾಸಕರಾದ ವೀರಣ್ಣ ಚರಂತಿಮಠ ಅವರು ಪೌರಕಾರ್ಮಿಕರಿಗೆ ಹಾಗೂ ಸಿಬ್ಬಂದಿಗೆ ಫಲ, ಪುಪ್ಪ ನೀಡಿ, ಶಾಲು ಹೊದಿಸಿ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ಭೀತಿಯ ನಡುವೆಯೂ ಸ್ವಚ್ಛತಾ ಕಾರ್ಯಕ್ಕೆ ನಗರಸಭೆಯವರು ಹೆಚ್ಚು ಮಹತ್ವ ನೀಡಿದ್ದಾರೆ. ನಿಷೇಧಿತ ಪ್ರದೇಶದಲ್ಲಿಯೂ ಕಾರ್ಮಿಕರು ತಮ್ಮ ಜೀವದ ಹಂಗುತೊರೆದು ಭಯ ಇಲ್ಲದೆ ಸ್ವಚ್ಛ ಮಾಡುವುದು, ಸ್ಯಾನಿಟೈಸರ್ ಸಿಂಪಡಣೆ ಮಾಡುವುದು ಹಾಗೂ ಹಾಲು, ಹಣ್ಣು, ತರಕಾರಿ ವಿತರಣೆ ಮಾಡಿರುವುದು ಶ್ಲಾಘನೀಯ ಎಂದರು.

ಇದರಿಂದ ಜನತೆಗೆ ಯಾವುದೇ ತೊಂದರೆ ಉಂಟಾಗಿಲ್ಲ. ನಿಮ್ಮ ಕಾರ್ಯ ಮತ್ತು ಶ್ರಮವನ್ನು ಎಷ್ಟೇ ಕೊಂಡಾಡಿದರು ಕಡಿಮೆ. ಆದ್ದರಿಂದ ‌ಬಿಜೆಪಿ ಪಕ್ಷದಿಂದ ಸನ್ಮಾನ ಮಾಡಿ ನಿಮ್ಮನ್ನು ಗೌರವಿಸಲಾಗಿದೆ ಎಂದು ತಿಳಿಸಿದರು.

ಇದೇ ಸಮಯದಲ್ಲಿ ನಗರಸಭೆ ಬಿಜೆಪಿ ಪಕ್ಷದ ಸದಸ್ಯರು ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.