ಬಾಗಲಕೋಟೆ: ಲೋಕಸಭಾ ಚುನಾವಣೆಯ ಮತದಾನ ಮುಕ್ತಾಯ ಆಗಿರುವ ಹಿನ್ನಲೆಯಲ್ಲಿ ಬಾಗಲಕೋಟೆಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಹಾಗೂ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪ್ರತಿನಿತ್ಯ ಗಿಂತ ಇಂದು ಪುಲ್ ರಿಲ್ಯಾಕ್ಸ್ ಮೂಡದಲ್ಲಿದ್ದರು.
ಪ್ರತಿ ನಿತ್ಯ ರಾಜಕೀಯ ತಂತ್ರ, ಪ್ರಚಾರದ ಗೀಳು, ಸುತ್ತಾಟ, ಬಿಸಲು, ನೆರಳು ಎನ್ನದೇ ಸಂಚಾರಿಸುತ್ತಾ, ನಿದ್ದೆ ಇಲ್ಲದ ಪ್ರಚಾರದಲ್ಲಿ ನಿರತರಾಗುತ್ತಿದ್ದರು. ಆದರೆ ಮತದಾನ ಮುಗಿದ ಹಿನ್ನಲೆಯಲ್ಲಿ ಮನೆಯಲ್ಲಿ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಮತದಾನ ಮುಗಿದ ಹಿನ್ನೆಲೆ ರಿಲ್ಯಾಕ್ಸ್ನಲ್ಲಿದ್ದರು. ನಿರಂತರವಾಗಿ ಪ್ರಚಾರದಲ್ಲಿ ತೊಡಗಿದ್ದ ವೀಣಾ ಕಾಶಪ್ಪನವರ ಮಕ್ಕಳ ಕಡೆ ಹೆಚ್ಚು ಗಮನ ಕೊಡಲಾಗಿರಲಿಲ್ಲ. ಮತದಾನ ಮುಗಿದ ಹಿನ್ನೆಲೆ ವೀಣಾ ಕಾಶಪ್ಪನವರ ಇಳಕಲ್ ನಗರದ ತಮ್ಮ ನಿವಾಸದಲ್ಲಿ ಮಕ್ಕಳಾದ ಸಕ್ಷಮ್ ಮತ್ತು ಸಮೀಕ್ಷಾ ಜೊತೆ ಕೆಲ ಕಾಲ ಸಮಯ ಕಳೆದು ಖುಷಿ ಪಟ್ಟರು. ನಂತರ ಮನೆಗೆ ಬಂದ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಮತದಾನದ ಬಗ್ಗೆ ಲೆಕ್ಕಾಚಾರ ಹಾಕುವಲ್ಲಿ ನಿರತರಾಗಿದ್ದರು.