ETV Bharat / state

ಶಾಸಕರ ಮುಂದೆ ಸಮಸ್ಯೆ ಹೇಳದೆ ಇನ್ಯಾರ ಮುಂದೆ ಹೇಳ್ಬೇಕು ಜನ: ಸಿದ್ದು ಸವದಿ ವಿರುದ್ಧ ಉಮಾಶ್ರೀ ಕಿಡಿ - ಶಾಸಕ ಸಿದ್ದು ಸವದಿ

ಶಾಸಕ ಸಿದ್ದು ಸವದಿ, ನನ್ನ ಕ್ಷೇತ್ರದ ಮತದಾರರು ಮತ್ತು ತಮ್ಮ ಬಿಜೆಪಿ ಕಾರ್ಯಕರ್ತರ ಮೇಲೆಯೇ ಹೀಗೆ ಉದ್ಧಟತನದಿಂದ ವರ್ತನೆ ಮಾಡಿರುವುದು ಎಷ್ಟೊಂದು ಸರಿ. ಕ್ಷೇತ್ರದ ಜನತೆ ಶಾಸಕರಿಗಲ್ಲದೆ ಬೇರೆ ಯಾರಿಗೆ ಕೇಳಬೇಕು ಎಂದು ಮಾಜಿ ಸಚಿವೆ ಉಮಾಶ್ರೀ ಅವರು ಶಾಸಕ ಸಿದ್ದು ಸವದಿ ವಿರುದ್ಧ ಹರಿಹಾಯ್ದಿದ್ದಾರೆ.

umashree-angry-on-mla-siddu-savadi
ಉಮಾಶ್ರೀ
author img

By

Published : May 11, 2021, 10:37 PM IST

Updated : May 11, 2021, 10:57 PM IST

ಬಾಗಲಕೋಟೆ: ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಅವರು ತಮ್ಮ ಕ್ಷೇತ್ರದ ಮತದಾರನಿಗೆ ಉದ್ಧಟತನದಿಂದ ಮಾತನಾಡಿರುವುದಕ್ಕೆ ಕ್ಷೇತ್ರದ ಮಾಜಿ ಶಾಸಕಿ ಉಮಾಶ್ರೀ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸಿದ್ದು ಸವದಿ ವಿರುದ್ದ ಕಿಡಿ ಕಾರಿದ ಉಮಾಶ್ರೀ

ಶಾಸಕರು, ನನ್ನ ಕ್ಷೇತ್ರದ ಮತದಾರರು ಮತ್ತು ತಮ್ಮ ಬಿಜೆಪಿ ಕಾರ್ಯಕರ್ತರ ಮೇಲೆಯೇ ಹೀಗೆ ಉದ್ಧಟತನದಿಂದ ವರ್ತಿಸಿರುವುದು ಎಷ್ಟೊಂದು ಸರಿ. ಕ್ಷೇತ್ರದ ಜನತೆ ಶಾಸಕರಿಗೆ ಅಲ್ಲದೆ ಬೇರೆ ಯಾರಿಗೆ ಕೇಳಬೇಕು. ಕೊರೊನಾದಿಂದ ಮೃತಪಟ್ಟಿರುವ ಕುಟುಂಬದವರಿಗೆ ಸಾಂತ್ವನ ಹೇಳುವ ಬದಲು ಹೀಗೆ ಮಾತನಾಡಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಇದನ್ನು ಓದಿ-ನಾಲಾಯಕ್ ಇಡು ಫೋನ್, ಬಾಳ ಶಾಣ್ಯಾ ಅದಿ: ಸಿದ್ದು ಸವದಿ ಆವಾಜ್ - ವಿಡಿಯೋ ವೈರಲ್​

ಆಕ್ಸಿಜನ್ ಕೊರತೆಯಿಂದ ಜನರು ಸಾಯುತ್ತಿದ್ದಾರೆ. ಅದರ ಬಗ್ಗೆ ಚಿಂತನೆ ಮಾಡುವುದನ್ನು ಬಿಟ್ಟು ಹೀಗೆ ವರ್ತಿಸುವುದು ಖಂಡನೀಯ. ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು, ಇಲ್ಲವಾದರೆ ಮುಂದೆ ಮತದಾರರು ದಂಗೆ ಏಳುವಂತಾಗುತ್ತದೆ. ಸರ್ಕಾರ ನಿದ್ದೆಯಲ್ಲಿ ಇದ್ದು, ಎಚ್ಚರ ಆಗಬೇಕಾಗಿದೆ ಎಂದು ಉಮಾಶ್ರೀ ತರಾಟೆಗೆ ತೆಗೆದುಕೊಂಡಿದ್ದಾರೆ.

Last Updated : May 11, 2021, 10:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.