ಮುದ್ದೇಬಿಹಾಳ: ಇಲ್ಲಿನ ಮಸೂತಿ ಗ್ರಾಮದಲ್ಲಿ ಹುಚ್ಚು ತೋಳವೊಂದು ಇಬ್ಬರು ರೈತರ ಮೇಲೆ ದಾಳಿ ಮಾಡಿದ್ದು, ಓರ್ವ ರೈತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.
ಮಸೂತಿ ಗ್ರಾಮದ ಮಲ್ಲಪ್ಪ ಶಿವಪ್ಪ ಕೂಡಗಿ ಹಾಗೂ ವಡವಡಗಿ ಗ್ರಾಮದ ಯಮನಪ್ಪ ಹಳೆ ನಿಡಗುಂದಿ ಎಂಬವರ ಮೇಲೆ ತೋಳ ದಾಳಿ ಮಾಡಿದೆ. ತಮ್ಮ ಹೊಲಕ್ಕೆ ಕೆಲಸಕ್ಕೆಂದು ಹೊರಟಿದ್ದವರ ಮೇಲೆ ಏಕಾಏಕಿ ತೋಳ ದಾಳಿ ಮಾಡಿದೆ ಎನ್ನಲಾಗಿದೆ. ಬಳಿಕ ರೈತರ ಜೊತೆಗಿದ್ದ ನಾಯಿಗಳು ತೋಳವನ್ನು ಬೆನ್ನಟ್ಟಿ ಕೊಂದು ಹಾಕಿವೆ.
![farmers injured from wolf attack](https://etvbharatimages.akamaized.net/etvbharat/prod-images/7312967_688_7312967_1590220831397.png)
ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ರೈತನೊಬ್ಬನನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.