ಬಾಗಲಕೋಟೆ : ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ದೇವಾಲಯದಲ್ಲಿ ಅವಳಿ ಕರುಗಳಿಗೆ ಅಪರೂಪದ ನಾಮಕರಣ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ರಾಮ ಲಕ್ಷ್ಮಣ ಎಂದು ಹೆಸರು ಇಟ್ಟು ಮುತ್ತೈದೆಯರು ಸಂಭ್ರಮಿಸಿದರು.
ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ತ್ರಯಂಬಕೇಶ್ವರ ದೇವಾಲಯದಲ್ಲಿ ಎರಡು ತೊಟ್ಟಿಲಿನಲ್ಲಿ ಕರುಗಳನ್ನು ಇಟ್ಟು ನಾಮಕರಣ ಮಾಡಲಾಗಿದೆ. ಇಲ್ಲಿನ ಆಕಳೊಂದು ಅವಳಿ ಕರುಗಳಿಗೆ ಜನ್ಮ ನೀಡಿತ್ತು. ಈ ಅವಳಿ ಕರುಗಳಿಗೆ ಗ್ರಾಮಸ್ಥರೆಲ್ಲ ಸೇರಿ ಅದ್ಧೂರಿ ನಾಮಕರಣ ಮಾಡಿದ್ದಾರೆ.
ಈ ಕರುಗಳಿಗೆ ಗುರು ಹಿರಿಯರು, ಮುತ್ತೈದೆಯರ ಸಮ್ಮುಖದಲ್ಲಿ ನಾಮಕರಣ ಕಾರ್ಯಕ್ರಮ ನಡೆಯಿತು. ದೇವಾಲಯದ ಆವರಣದಲ್ಲಿ ಎರಡು ತೂಗುವ ತೊಟ್ಟಿಲು ಇಟ್ಟು ಅದಕ್ಕೆ ಹೂವಿನಿಂದ ಅಲಂಕಾರ ಮಾಡಿ, ಕರುಗಳಿಗೆ ಸಂಪ್ರದಾಯದಂತೆ ರಾಮ, ಲಕ್ಷ್ಮಣ ಎಂಬ ಹೆಸರನ್ನು ನಾಮಕರಣ ಮಾಡಲಾಯಿತು.
ನಾಮಕರಣ ಕಾರ್ಯಕ್ರಮ ಹಿನ್ನೆಲೆ, ಇಡೀ ದೇವಾಲಯದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಜನಿಸಿದ ಮಗುವಿಗೆ ನಾಮಕರಣ ಮಾಡುವಂತೆ ಈ ಕರುಗಳಿಗೂ ನಾಮಕರಣ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಬಂದವರಿಗೆ ಊಟವನ್ನು ಏರ್ಪಡಿಸಲಾಗಿತ್ತು.
ಇದನ್ನೂ ಓದಿ : ಆನೆ ಚೆಕ್ ಪೋಸ್ಟ್.. ತಮಿಳುನಾಡು- ಕರ್ನಾಟಕ ಗಡಿ ಬಂದ್ ಮಾಡಿದ ಗಜಪಡೆ