ETV Bharat / state

ಒಂದೇ ಬಸ್​ನಲ್ಲಿ 50 ಕೊರೊನಾ ಶಂಕಿತರ ರವಾನೆ... ಬಾಗಲಕೋಟೆ ಜಿಲ್ಲಾಡಳಿತ ಎಡವಟ್ಟು! - ಕೊರೊನಾ ಲೇಟೆಸ್ಟ್​ ಸುದ್ದಿ

ಮುಧೋಳದಲ್ಲಿ ಗುಜರಾತ್ ‌ಮೂಲದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಮುಧೋಳದ ಮದರಸಾ ವ್ಯಾಪ್ತಿಯ ಐವತ್ತು ಜನರನ್ನ ಜಿಲ್ಲಾಡಳಿತ ಒಂದೇ ಬಸ್​ನಲ್ಲಿ ಬಾಗಲಕೋಟೆಗೆ ಸ್ಥಳಾಂತರ ಮಾಡಿದ್ದು ಮತ್ತಷ್ಟು ಸೋಂಕು ಹರಡುವ ಭೀತಿ ಹೆಚ್ಚಿದೆ.

Transport of 50 suspects in a single bus In Bagalkot
ಒಂದೇ ಬಸ್​ನಲ್ಲಿ 50 ಶಂಕಿತರ ರವಾನೆ..ಮುಧೋಳ ಜಿಲ್ಲಾಡಳಿತದಿಂದ ಎಡವಟ್ಟು
author img

By

Published : Apr 8, 2020, 10:57 PM IST

ಬಾಗಲಕೋಟೆ: ಜಿಲ್ಲೆಯಲ್ಲಿ ಒಟ್ಟು ಐದು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಅದರಲ್ಲಿ ಓರ್ವ ವೃದ್ಧ ಮೃತಪಟ್ಟಿರುವುದು ಜನರಲ್ಲಿ ಆತಂಕ ಮೂಡಿಸಿತ್ತು. ಈ ನಡುವೆ ಮತ್ತೊಂದು ಭೀತಿ ಶುರುವಾಗಿದೆ.

ಹೌದು, ಮುಧೋಳದಲ್ಲಿ ಗುಜರಾತ್ ‌ಮೂಲದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಮುಧೋಳದ ಮದರಸಾ ವ್ಯಾಪ್ತಿಯ ಐವತ್ತು ಜನರನ್ನ ಜಿಲ್ಲಾಡಳಿತ ಒಂದೇ ಬಸ್​ನಲ್ಲಿ ಬಾಗಲಕೋಟೆಗೆ ಸ್ಥಳಾಂತರ ಮಾಡಿತ್ತು. ಇದು ಈಗ ವಿವಾದಕ್ಕೆ ಕಾರಣವಾಗಿದ್ದು, ಒಂದೇ ಬಸ್​ನಲ್ಲಿ ಎಲ್ಲರನ್ನೂ ಕಳಿಸಿರುವುದು ಸೋಂಕು ಹೆಚ್ಚಾಗುವ ‌ಭೀತಿ ಹೆಚ್ಚಿಸಿದೆ. ಇದರಿಂದ ಜಿಲ್ಲಾಡಳಿತ ಮತ್ತಷ್ಟು ಎಡವಟ್ಟು ಮಾಡಿಕೊಂಡಿದೆ.

ಸುಮಾರು 50 ಜನರನ್ನ ಮುಧೋಳ ನಗರದಿಂದ ಒಂದೇ ಬಸ್​ನಲ್ಲಿ ಸಾಮಾಜಿಕ ಅಂತರ ಕಾಪಾಡದೆ ಬಾಗಲಕೋಟೆಗೆ ಸ್ಥಳಾಂತರ ಮಾಡಲಾಗಿದೆ. ಸದ್ಯ ಅವರನ್ನ ಬಾಗಲಕೋಟೆ ಸಮೀಪದ ವಸತಿ ನಿಲಯದಲ್ಲಿ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.