ಬಾಗಲಕೋಟೆ: ರಬಕವಿ-ಬನಹಟ್ಟಿ ನಗರದ ಸೋಮವಾರ ಪೇಟೆಯಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಅತ್ಯಂತ ಹಳೆಯದಾದ ಅಂಚೆ ಇಲಾಖೆ ಕಚೇರಿ ಇದೀಗ ತನ್ನ ಕಾರ್ಯ ಸ್ಥಗಿತಗೊಳಿಸುವ ಭೀತಿ ಎದುರಿಸುತ್ತಿದ್ದು, ಇದರಿಂದ ಸುತ್ತಲಿನ ಜನತೆ ತೀವ್ರ ಆತಂಕದಲ್ಲಿದ್ದಾರೆ.
ಕಳೆದ ನಾಲ್ಕೈದು ದಶಕಗಳಿಂದ ಸುತ್ತಲಿನ ನೂರಾರು ಜನತೆಗೆ ನಿತ್ಯ ಕಾರ್ಯ ಸೇವೆ ಒದಗಿಸುತ್ತಾ, ಪ್ರಮುಖವಾಗಿ ವಯಸ್ಕರಿಗೆ, ವಿಧವೆಯರಿಗೆ ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತಿರುವ ಈ ಕಚೇರಿಯನ್ನು ಸದ್ಯ ವಹಿವಾಟಿನ ಕೊರತೆಯ ನೆಪದಿಂದ ಸ್ಥಗಿತ ಗೊಳಿಸುತ್ತಿದ್ದಾರೆ. ಏಕಾಏಕಿ ಬಂದ್ ಮಾಡುತ್ತಿರುವದನ್ನು ಸ್ಥಳೀಯ ಜನತೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.