ಬಾಗಲಕೋಟೆ: ಪ್ರಧಾನಮಂತ್ರಿ ಮೋದಿ ಅವರ ಭಾಷಣದ ನಂತರ ಕೊರೊನಾ ಮುಂಜಾಗೃತೆ ಹಿನ್ನಲೆಯಲ್ಲಿ ಐತಿಹಾಸಿಕ, ಧಾರ್ಮಿಕ ಶಕ್ತಿ ಕೇಂದ್ರವಾಗಿರುವ ಬಾದಾಮಿ-ಬನಶಂಕರಿ ದೇವಾಲಯದ ಗರ್ಭಗುಡಿ ಬಂದ್ ಮಾಡಿ ಪ್ರಮುಖ ಸೇವೆಗಳನ್ನ ಸ್ಥಗಿತಗೊಳಿಸಲು ಆಡಳಿತ ಮಂಡಳಿ ನಿರ್ಧಾರ ಮಾಡಿದೆ.
ಶುಕ್ರವಾರ ಮಾರ್ಚ್ 20ರಿಂದ ಮುಂದಿನ ಆದೇಶದವರೆಗೆ ಗರ್ಭ ಗುಡಿ ಬಾಗಿಲು ಬಂದ್ ಮಾಡಿ,ಪೂಜಾ ಸೇವೆ,ಕುಂಕುಮಾರ್ಚನೆ,ಪಲ್ಲಕ್ಕಿ ಸೇವೆ,ಅಭಿಷೇಕ,ಕಾಯಿ ಕರ್ಪೂರ್ ಬೆಳೆಗೋದು, ತೀರ್ಥ ಕೊಡುವುದು ಎಲ್ಲವೂ ಬಂದ ಮಾಡಲಾಗಿದೆ.
ಅರ್ಚಕರು ಮಾತ್ರ ದೇವಿಗೆ ಬೆಳಿಗ್ಗೆ ಸರ್ವಾಂಗ ಅಭಿಷೇಕ, ಮಧ್ಯಾಹ್ನ ನೈವೇಧ್ಯ ಸೇವೆ,ಸಂಜೆ ಮಹಾಮಂಗಳಾರತಿ ಮಾತ್ರ ನೇರವೇರಿಸಲಿದ್ದು,ಈ ಸಂಧರ್ಭದಲ್ಲಿ ಅರ್ಚಕರು ಮಾತ್ರ ಉಪಸ್ಥಿತಿರಿದ್ದು,ಭಕ್ತರಿಗೆ ನಿಷೇಧ ಮಾಡಲಾಗಿದೆ.
ಕಳೆದ ಕೆಲ ದಿನಗಳಿಂದ ಪ್ರಸಾದ ವ್ಯವಸ್ಥೆ ಸ್ಥಗಿತಗೊಳಿಸಲಾಗಿತ್ತು. ಈಗ ಭಕ್ತರಿಗೆ ಗರ್ಭಗುಡಿ ನಿಷೇಧ ಮಾಡಲಾಗಿದೆ. ಹೂರಗೆ ನಿಂತು ದೇವಿಗೆ ಕೇವಲ ನಮಸ್ಕಾರ ಮಾಡುವುದು ಹಾಗೂ ಉಳಿದ ಎಲ್ಲಾ ಸೇವೆ ಸ್ಥಗಿತಗೊಳಿಸಲಾಗಿದೆ. ಇಡೀ ದೇಶಕ್ಕೆ ಬಂದಿರುವ ಕಂಟಕವನ್ನು ಪಾರು ಮಾಡುವುದಕ್ಕೆ ಬನಶಂಕರಿ ದೇವಿಗೆ ಪೂಜೆ ಪುನಸ್ಕಾರ ಮಾಡಿ,ಪ್ರಾರ್ಥನೆ ಮಾಡುತ್ತೇವೆ ಎಂದು ಬನಶಂಕರಿ ದೇವಸ್ಥಾನ ಟ್ರಸ್ಟ್ನ ಮುಖ್ಯಸ್ಥರಾದ ಮಲಹಾರಭಟ್ ಪೂಜಾರ ತಿಳಿಸಿದ್ದಾರೆ.