ಬಾಗಲಕೋಟೆ: ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ಇಲ್ಲಿನ ನವನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ನಡೆಸುತ್ತಿದ್ದ ಪ್ರತಿಭಟನೆ ವೇಳೆ ವಾಹನ ಸವಾರ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ವಾಗ್ದಾಳಿ ನಡೆಯಿತು.
ನವನಗರ ಬಸ್ ನಿಲ್ದಾಣ ವೃತ್ತದ ಬಳಿ ಕಾಂಗ್ರೆಸ್ ಪಕ್ಷದ ವಕ್ತಾರ ನಾಗರಾಜ್ ಹದ್ಲಿ ಹಾಗೂ ಮಹಿಳಾ ಘಟಕ ಜಿಲ್ಲಾ ಅಧ್ಯಕ್ಷೆ ರಕ್ಷಿತಾ ಈಟಿ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಸಮಯದಲ್ಲಿ ಮಾನವ ಸರಪಳಿ ನಿರ್ಮಾಸಿ ರಸ್ತೆ ತಡೆ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಹಾಕುತ್ತಿದ್ದರು.
ಇದನ್ನೂ ಓದಿ.. 'ರೈತರ ಬಂದ್ಗೆ ನಿಮ್ಮ ಬೆಂಬಲ ಇಲ್ವಾ?': ವಾಹನ ಸವಾರರ ವಿರುದ್ಧ ಆಕ್ರೋಶ
ಈ ಸಮಯದಲ್ಲಿ ವಾಹನ ಸವಾರರೊಬ್ಬರು ಸಂಚಾರಕ್ಕೆ ಮುಂದಾದರು. ಇದಕ್ಕೆ ಸಿಟ್ಟಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು, ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಚಾಲಕನೂ ವಾಗ್ದಾಳಿ ನಡಿಸಿದ್ದು, ಕೆಲ ಕಾಲ ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪರಿಸ್ಥತಿ ತಿಳಿಗೊಳಿಸಲಾಯಿತು. ನಂತರ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.