ETV Bharat / state

ಬಿಕ್ಕಟ್ಟಿನಲ್ಲಿ ಜವಳಿ ಉದ್ಯಮ: ಕೈಹೊತ್ತು ಕೂರುವ ಪರಿಸ್ಥಿತಿಗೆ ಬಂದ ನೇಕಾರರ ಬದುಕು - ಜವಳಿ ಉದ್ಯಮ

ಕಳೆದ ಎರಡು ವರ್ಷಗಳಿಂದ ಜಿಎಸ್‌ಟಿ ಮತ್ತು ಅತಿವೃಷ್ಟಿ ತಂದೊಡ್ಡಿದ ಆರ್ಥಿಕ ಸಂಕಷ್ಟದಿಂದ ಬಸವಳಿದಿದ್ದ ಜವಳಿ ಉದ್ಯಮ ಕೋವಿಡ್‌-19 ಪರಿಣಾಮ ಸಂಪೂರ್ಣ ನೆಲಕಚ್ಚಿದೆ. ಲಾಕ್‌ಡೌನ್‌ ಮತ್ತೆ ಮುಂದುವರಿದಿರುವ ಹಿನ್ನೆಲೆ ಜವಳಿ ಉದ್ಯಮಿಗಳು, ನೇಕಾರ ಕಾರ್ಮಿಕರು ತಲೆಮೇಲೆ ಕೈಹೊತ್ತು ಕೂರುವ ಪರಿಸ್ಥಿತಿ ಎದುರಾಗಿದೆ.

textile-industry-in-crisis
ಜವಳಿ ಉದ್ಯಮ
author img

By

Published : Aug 24, 2020, 7:35 PM IST

ಬಾಗಲಕೋಟೆ: ಮುಳಗಡೆ ನಗರಿ ಎಂದು‌ ಖ್ಯಾತಿ ಪಡೆದಿರುವ ಬಾಗಲಕೋಟೆ ಜಿಲ್ಲೆಯು ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಬೀಡಾಗಿದೆ. ಕೆಂಪು ಶಿಲೆಗೆ ಹೆಸರಾಗಿರುವ ಇಳಕಲ್ಲು ‌ಕಾಟನ್ ಸೀರೆಗೂ ಪ್ರಸಿದ್ಧಿ ಪಡೆದುಕೊಂಡಿದ್ದು, ಈ ಮೂಲಕ ದೇಶ, ವಿದೇಶಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಆದರೆ, ಈಗ ಜವಳಿ ಉದ್ಯಮಿಗಳು, ನೇಕಾರ ಕಾರ್ಮಿಕರು ತಲೆಮೇಲೆ ಕೈಹೊತ್ತು ಕೂರುವ ಪರಿಸ್ಥಿತಿ ಎದುರಾಗಿದೆ. ಈ ಕುರಿತ ವಿಶೇಷ ವರದಿ‌ ಇಲ್ಲಿದೆ.

ಇಳಕಲ್ಲು, ಅಮೀನಗಡ, ಕಮತಗಿ, ಗುಳೇದಗುಡ್ಡ, ಕೆರೂರು, ರಬಕವಿ-ಬನಹಟ್ಟಿ ಸೇರಿದಂತೆ ಇತರ ಪ್ರದೇಶದಲ್ಲಿ ನೇಕಾರರು ಇಳಕಲ್ಲು, ಕಾಟನ್ ಸೀರೆ, ರೇಷ್ಮೆ ಸೀರೆ ತಯಾರಿಸುತ್ತಾರೆ. ಸುಮಾರು‌ 30 ಸಾವಿರಕ್ಕೂ‌ ಅಧಿಕ ಕೈಮಗ್ಗ ನೇಕಾರರು,‌ ಲಕ್ಷಕ್ಕೂ ಅಧಿಕ ವಿದ್ಯುತ್ ಚಾಲಿತ ನೇಕಾರರಿದ್ದಾರೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಸಂಪ್ರದಾಯ ಪದ್ಧತಿಯ ಮೂಲಕ ನೇಕಾರಿಕೆ ಅವಲಂಬಿಸಿದವರ ಬದುಕು ಆರಕ್ಕೆ ಏರಲಿಲ್ಲ, ಮೂರಕ್ಕೆ ಇಳಿಯಲಿಲ್ಲ ಎಂಬ ಗಾದೆಯಂತಾಗಿದೆ.

ಜೀವ ಕಳೆದುಕೊಂಡ ಉದ್ಯಮ: ಕೈಮಗ್ಗದಿಂದ ತಯಾರಾಗುವ ಸಾದಾ ಇಳಕಲ್ಲು ಸೀರೆಗೆ ₹800- 1000 ವರೆಗೆ ದರ ಇದೆ. ಆದರೆ, ಒಂದು‌‌ ಸೀರೆ ತಯಾರಾಗಲು ಕನಿಷ್ಠ ಎರಡು ದಿನ ಆಗಲಿದೆ. ಸೀರೆ ಬೇಕಾಗುವ ಕಚ್ಚಾ ವಸ್ತು ನೂಲು, ರೇಷ್ಮೆ, ಚಮಕಾ ಸೇರಿದಂತೆ ಇತರ ವಸ್ತುಗಳು ಬೇಕಾಗುತ್ತದೆ. ಅವುಗಳ ದರವೂ ಗಗನಕ್ಕೇರಿದ್ದು, ಕೊರೊನಾದಿಂದ ಆ ಸೀರೆ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಇಲ್ಲದಂತಾಗಿದೆ. ಹೀಗಾಗಿ, ಆರ್ಥಿಕ ಸಂಕಷ್ಟಕ್ಕೆ ತಂದೊಡ್ಡಿದೆ. ಈ ಮೂಲಕ ಜವಳಿ ಉದ್ಯಮ ಜೀವ ಕಳೆದುಕೊಂಡಿದೆ.

ದೊಡ್ಡ ಪೆಟ್ಟು ಕಮತಗಿ ಪಟ್ಟಣದಲ್ಲಿ ನೇಕಾರರು ಸಾವಿರದಿಂದ ‌ಹಿಡಿದು ಮೂವತ್ತು ಸಾವಿರ ರೂಪಾಯಿಗಳ ಇಳಕಲ್ಲು ರೇಷ್ಮೆ ಸೀರೆ ಹಾಗೂ ಫ್ಯಾಶನ್​​ ಡಿಸೈನ್ ಸೀರೆ ನೇಯುತ್ತಾರೆ. ಮೂಲ ಮಾರುಕಟ್ಟೆ ಮಹಾರಾಷ್ಟ್ರದಲ್ಲಿದೆ. ಲಾಕ್​ಡೌನ್ ಕಾರಣ ಅಲ್ಲಿಗೆ ಸಂಚಾರ ಸ್ಥಗಿತಗೊಂಡು ಉದ್ಯಮಕ್ಕೆ ದೊಡ್ಡ ಪೆಟ್ಟು ಬಿತ್ತು. ಅಲ್ಲದೆ, ಸೀರೆ ದರ‌ವೂ ಕುಸಿಯಿತು. ಈ ಪರಿಣಾಮ ನೇಕಾರರ ಕೂಲಿಯೂ ಪಾತಾಳಕ್ಕೆ ಹೋಯಿತು. ಸ್ವತಃ ತಾವೇ ಲಕ್ಷಾಂತರ ಸೀರೆಗಳನ್ನು ಸಂಗ್ರಹಿಸಿಟ್ಟುಕೊಂಡಿರುವ ನೇಕಾರಿಕೆ ಉದ್ಯಮಿಗಳೂ ತಮ್ಮ ಉದ್ಯಮವನ್ನು ಮುಂದುವರಿಸುವ ಸ್ಥಿತಿಯಲ್ಲಿ ಇಲ್ಲ.

ಸರ್ಕಾರರಿಂದ ನೇಕಾರರಿಗೆ ಸೌಲಭ್ಯಗಳು

  • ಜವಳಿ ಇಲಾಖೆಯಿಂದ ಕೌಶಲಾಭಿವೃದ್ಧಿ ತರಬೇತಿ
  • ವಿದ್ಯುತ್ ಮಗ್ಗಗಳ ಖರೀದಿಗೆ ಸಬ್ಸಿಡಿ ಮೂಲಕ ಸಾಲ‌-ಸೌಲಭ್ಯ
  • ಸೀರೆಗಳ ಡಿಸೈನ್​​​ಗೆ ಬಳಸುವ ವಸ್ತುಗಳ ಉಪಯೋಗ, ತರಬೇತಿ

ಕಮತಗಿ ಪಟ್ಟಣದಲ್ಲಿ ನೇಕಾರರ ಸಂಘಟನೆ ಮೂಲಕ ಫ್ಯಾಷನ್ ಡಿಸೈನ್ ಹಾಗೂ ಗುಣಮಟ್ಟದ ರೇಷ್ಮೆ ತಯಾರಿಸಲಾಗುತ್ತದೆ. ಆದರೆ ಡಿಸೈನ್ ಮಾಡುತ್ತಿರುವ ನೇಕಾರರಿಂದ ಒಂದು ಸೀರೆ ತಯಾರಾಗಲು 10-15 ದಿನ ಹಿಡಿಯುತ್ತದೆ. ಇಂತಹ ಡಿಸೈನ್ ರೇಷ್ಮೆ ಸೀರೆಗೆ ನೇಕಾರರಿಗೆ ₹3500 ಲಾಭ ದೊರೆಯುತ್ತದೆ. ಇದು ನಿಧಾನ ಹಾಗೂ ಬೇಸರದ ಕೆಲಸ. ಹೀಗಾಗಿ ದಿನಾಲು ದುಡಿದು, ಜೀವನ ಸಾಗಿಸುವ ನೇಕಾರರು ಇಂತಹ ಸೀರೆ ತಯಾರಿಸಲು ಮುಂದಾಗುವುದಿಲ್ಲ. ಸಾದಾ ಹಸಿರು ಬಣ್ಣದ ಚಮಕಾ, ಕಾಟನ್ ಮಿಶ್ರಿತ ಸೀರೆಯನ್ನೇ ಹೆಚ್ಚು ನೇಯುತ್ತಾರೆ.

ನೇಕಾರರ ಮಾತು ಹೀಗಿದೆ...

ಪರ್ಯಾಯ ಕೆಲಸ: ಒಂದು ಸಾವಿರ ಇದ್ದ ಸೀರೆಯ ಬೆಲೆಯು ₹600ಕ್ಕೆ ಗ್ರಾಹಕರು ಕೇಳುತ್ತಿದ್ದಾರೆ. ಜೊತೆಗೆ ಕೊರೊನಾ ಸಮಯದಲ್ಲಿ ಯಾವುದೇ ಶುಭ-ಸಮಾರಂಭಗಳು ಜರುಗುತ್ತಿಲ್ಲ. ಇದು ಕೂಡ ಉದ್ಯಮಕ್ಕೆ ದೊಡ್ಡ ಆಘಾತ ನೀಡಿದೆ. ಲಾಕ್​ಡೌನ್ ಅವಧಿಯಲ್ಲಿ ಸರ್ಕಾರ ನೇಕಾರರಿಗೆ ₹2,000 ಪರಿಹಾರ ಧನ ನೀಡಲಾಯಿತು. ಆದರೆ, ಕೆಲವರಿಗೆ ಬಂದಿದೆ. ಮತ್ತೆ ಕೆಲವರಿಗೆ ಹಣ ಜಮೆಯಾಗಿಲ್ಲ. ನೇಕಾರಿಕೆಯಿಂದ ಬದುಕು‌ ಕಟ್ಟಿಕೊಳ್ಳಲು ಸಾಧ್ಯವಿಲ್ಲವೆಂದು ಎಂದು ಕೆಲವರು ಬಿದರಿನ ಪುಟ್ಟಿ ಹಣೆದು ಮಾರುವ ಸ್ಥಿತಿಗೆ ಬಂದಿದ್ದಾರೆ. ಇತರ ಸಂಬಂಧಿ ಉಪಕಸುಬುಗಳ ಕಾರ್ಮಿಕರು ಜೀವನ ನಿರ್ವಹಣೆಗಾಗಿ ತರಕಾರಿ ಮಾರಾಟ, ಕಿರಾಣಿ, ಮನೆಗೆಲಸಗಳತ್ತ ಮುಖ ಮಾಡುತ್ತಿದ್ದಾರೆ.

ಆರ್ಥಿಕವಾಗಿ ಉತ್ತೇಜಿಸಬೇಕಿದೆ: ನೇಕಾರರನ್ನು ಉತ್ತೇಜಿಸುವ ಕೆಲಸಕ್ಕೆ ಸರ್ಕಾರಕ್ಕೆ ಮುಂದಾಗಬೇಕಿದೆ. ಜಿಲ್ಲೆಯಲ್ಲಿ ಫ್ಯಾಷನ್ ಡಿಸೈನರ್​​ಗಳನ್ನು ನೇಮಿಸಬೇಕು. ಅವರು ನೇಕಾರರಿದ್ದ ಸ್ಥಳಕ್ಕೆ ಹೋಗಿ, ಅವರ ಮಗ್ಗದಲ್ಲಿಯೇ ಡಿಸೈನ್ ಬಗ್ಗೆ ಮಾಹಿತಿ‌ ನೀಡಬೇಕಿದೆ. ಈ ಮೂಲಕ ಆರ್ಥಿಕವಾಗಿ ಮೇಲೆತ್ತುವ ಕಲೆಯ ಮಾಹಿತಿಯನ್ನು ತಿಳಿಸಬೇಕಾಗಿದೆ. ಅಂದಾಗ ಮಾತ್ರ ನೇಕಾರರು ಬಾಳು ಹಸನಾಗಲಿದೆ. ಇಂಥ ಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯದ ಜವಳಿ ಕ್ಷೇತ್ರವನ್ನು ಸರ್ಕಾರ ಕೈಡಿಯದಿದ್ದದರೆ ಲಕ್ಷಾಂತರ ಸಂಖ್ಯೆಯ ನೇಕಾರರು, ಜವಳಿ ಉದ್ಯಮವನ್ನೇ ಅವಲಂಬಿಸಿರುವ ಉಪ ಕಸುಬುದಾರರು ಬಾಗಿಲು ಮುಚ್ಚಿ ಬೀದಿಗೆ ಬರುವ ಸ್ಥಿತಿ ಉದ್ಭವಿಸಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.