ETV Bharat / state

ಹನಿ ನೀರಾವರಿ ಯೋಜನೆ ವೀಕ್ಷಣೆಗೆ ಬಂದಿದ್ದ ವಿಧಾನಸಭೆ ಸದನ ಸಮಿತಿ-ರೈತರ ನಡುವೆ ವಾಗ್ವಾದ - ಈಟಿವಿ ಭಾರತ್​ ಕನ್ನಡ

ಏತ ನೀರಾವರಿ ಮತ್ತು ಹನಿ ನೀರಾವರಿ ಯೋಜನೆ ವೀಕ್ಷಣೆಗೆ ಆಗಮಿಸಿದ್ದ ವಿಧಾನಸಭೆ ಸದನ ಸಮಿತಿ ಸದಸ್ಯರೊಂದಿಗೆ ಸ್ಥಳೀಯ ರೈತರು ವಾಗ್ವಾದ ಮಾಡಿದರು. ರೈತರ ಸಮಸ್ಯೆಯನ್ನು ಕೇಳುವುದನ್ನು ಬಿಟ್ಟು ಸುಮ್ಮನೆ ಬಂದು ಹೋಗ್ತೀರಿ ಎಂದು ಅವರು ದೂರಿದರು.

debate-between-assembly-house-committee-and-farmers-in-bagalkote
ವಿಧಾನಸಭೆ ಸದನಸಮಿತಿ
author img

By

Published : Sep 2, 2022, 10:14 AM IST

ಬಾಗಲಕೋಟೆ: ವಿಧಾನಸಭೆ ಸದನ ಸಮಿತಿ ಸದಸ್ಯರ ತಂಡವು ಹನಿ ನೀರಾವರಿ ಯೋಜನೆ ವೀಕ್ಷಣೆಗೆ ಆಗಮಿಸಿದ ಸಂದರ್ಭದಲ್ಲಿ ಸ್ಥಳೀಯ ರೈತರು ವಾಗ್ವಾದ ನಡೆಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರು ಗ್ರಾಮದ ಬಳಿ ಘಟನೆ ನಡೆಯಿತು. ಹುನಗುಂದ ಮತಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ ರೈತರಿಗೆ ಏಕವಚನದಲ್ಲಿ ನಿಂದಿಸಿದ್ದರಿಂದ ಕೆಲ ಸಮಯ ಗೊಂದಲಮಯ ವಾತಾವರಣ ಉಂಟಾಯಿತು.

ಯೋಜನೆ ವೀಕ್ಷಣೆಗೆ ಆಗಮಿಸಿದ್ದ ವಿಧಾನಸಭೆ ಸದನಸಮಿತಿ ಮತ್ತು ರೈತರ ನಡುವೆ ಮಾತಿನ ಚಕಮಕಿ

ಅರಸೀಕೆರೆ ಶಾಸಕ ಶಿವಲಿಂಗೇ ಗೌಡ, ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್, ಹುನಗುಂದದ ಸ್ಥಳೀಯ ಶಾಸಕ ದೊಡ್ದನಗೌಡ ಪಾಟೀಲ್, ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ್, ನಾಗಮಂಗಲ ಶಾಸಕ ಸುರೇಶ್ ಗೌಡ ಸೇರಿದಂತೆ ವಿವಿಧ ಅಧಿಕಾರಿಗಳ ತಂಡ ವೀಕ್ಷಣೆಗೆ ಆಗಮಿಸಿದ್ದರು. ರಾಮತಾಳ, ಮರೊಳ ಏತ ನೀರಾವರಿ ಯೋಜನೆ ಪರಿವೀಕ್ಷಣೆಗೆ ಆಗಮಿಸಿದ್ದ ತಂಡದೊಂದಿಗೆ ಸ್ಥಳೀಯ ರೈತರು ವಾಗ್ವಾದ ನಡೆಸಿದರು.

ಕೇವಲ ವೀಕ್ಷಣೆಗೆ ಬರುತ್ತೀರಿ, ವಾಪಸ್ ಹೋಗುತ್ತೀರಿ. ರೈತರ ಸಮಸ್ಯೆಗಳ ಬಗ್ಗೆ ಯಾರೂ ಕೇಳುತ್ತಿಲ್ಲ. ಏನು ಪರಿಹಾರ ಮಾಡುತ್ತೀರಿ ಎಂದು ವೀಕ್ಷಣೆಗೆ ಬಂದ ಸದನ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡರು. ಸರಿಯಾಗಿ ನೀರು ಬರಲ್ಲ, ಏತ ನೀರಾವರಿ ಸಿಬ್ಬಂದಿ ರೈತರಿಗೆ ಸ್ಪಂದಿಸುವುದಿಲ್ಲ ಎಂದು ಸಮಿತಿ ಎದುರು ರೈತರು ಆಕ್ರೋಶ ವ್ಯಕ್ತಪಡಿಸಿ ಸ್ಥಳೀಯ ಶಾಸಕರು ಜೊತೆ ವಾಗ್ವಾದಕ್ಕಿಳಿದರು‌.

ರೈತರನ್ನು ಶಾಸಕ ಶಿವಲಿಂಗೇಗೌಡ ಸಮಾಧಾನಪಡಿಸಿ, ಎಲ್ಲರ ಸಮಸ್ಯೆಗಳನ್ನೂ ಆಲಿಸಲು ಬಂದಿದ್ದೇವೆ. ಈ ಬಗ್ಗೆ ಸಚಿವರೊಂದಿಗೆ, ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅಧಿಕಾರಿಗೊಂದಿಗೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಂಡು ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ಕೊಟ್ಟರು.

ಇದನ್ನೂ ಓದಿ: ಬಾಗಲಕೋಟೆ ಜಿಲ್ಲೆಯಲ್ಲಿ ಮಾದರಿ ಕೆರೆ ನಿರ್ಮಾಣ.. ಮನ್​ ಕಿ ಬಾತ್​ನಲ್ಲಿ ಪ್ರಧಾನಿ ಶ್ಲಾಘನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.