ETV Bharat / state

ಚಾಲಕನ ಮೇಲೆ ಕಲ್ಲು ತೂರಾಟ; ಚಿಕಿತ್ಸೆ ಫಲಕಾರಿಯಾಗದೇ ಸಾವು

ಸಾರಿಗೆ ನೌಕರರು ನಡೆಸುತ್ತಿದ್ದ ಪ್ರತಿಭಟನೆಯನ್ನು ಧಿಕ್ಕರಿಸಿ ಬಸ್​ ಚಾಲನೆ ಮಾಡಿಕೊಂಡು ಬಂದ ಡ್ರೈವರ್​ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ‌. ಇದರಿಂದ ನಬಿಸಾಬ್​ ಅವಟಿ ಎಂಬ ಚಾಲಕ ತೀವ್ರವಾಗಿ ಗಾಯಗೊಂಡು ಮೃತ ಪಟ್ಟಿದ್ದಾನೆ.

stone-pelting-on-bus-in-bagalkote
ನಬಿಸಾಬ ಅವಟಿ
author img

By

Published : Apr 16, 2021, 7:10 PM IST

ಬಾಗಲಕೋಟೆ: ಪ್ರತಿಭಟನೆ ವೇಳೆ ಬಸ್ ಚಾಲನೆ ಮಾಡಿದ ಸಿಬ್ಬಂದಿಯನ್ನು ಕಂಡು ಆಕ್ರೋಶಿತರಾಗಿರುವ ಕಿಡಿಕೇಡಿಗಳು ಕಲ್ಲು ತೂರಾಟ ನಡೆಸಿದ ಪರಿಣಾಮ ಚಾಲಕ ಮೃತಪಟ್ಟಿರುವ ಘಟನೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬಳಿ ನಡೆದಿದೆ.

ಸಾರಿಗೆ ನೌಕರರು ನಡೆಸುತ್ತಿದ್ದ ಪ್ರತಿಭಟನೆ ಧಿಕ್ಕರಿಸಿ ಬಸ್​ ಚಾಲನೆ ಮಾಡಿಕೊಂಡು ಬಂದ ಡ್ರೈವರ್​ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ‌. ಇದರಿಂದ ನಬಿಸಾಬ್​ ಅವಟಿ ಎಂಬ ಬಸ್ ಚಾಲಕ ತೀವ್ರವಾಗಿ ಗಾಯಗೊಂಡು ಮೃತ ಪಟ್ಟಿದ್ದಾನೆ.

ಗಾಯಾಗೊಳಗಾದ ಚಾಲಕನನ್ನು ಆಸ್ಪತ್ರೆಗೆ ರವಾನಿಸಲಾಯಿತು

ಅಫಜಲಪೂರದಿಂದ ಜಮಖಂಡಿಗೆ ಆಗಮಿಸುತ್ತಿದ್ದ ಬಸ್ ಮೇಲೆ ಕಲ್ಲು ಎಸೆಯಲಾಗಿದೆ. ಪರಿಣಾಮ ಗಾಜು ಒಡೆದು ಚಾಲಕನ ತಲೆಗೆ ಪೆಟ್ಟು ಬಿದ್ದಿದೆ.ಇದರಿಂದ ಆತನಿಗೆ ಪ್ರಜ್ಞೆ ತಪ್ಪಿದ್ದು, ಕೂಡಲೇ ಜಮಖಂಡಿ ‌ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿ ಆಗದೇ ಮೃತ ಪಟ್ಟಿದ್ದಾನೆ. ಅದೃಷ್ಟವಶಾತ್​ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.

ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಈ ಘಟನೆ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಓದಿ: ಕೊರೊನಾ ಎರಡನೇ ಅಲೆಗೆ ಪೊಲೀಸ್ ಇಲಾಖೆ ಹೈರಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.