ETV Bharat / state

ರಾಜ್ಯ ಮಟ್ಟದ ಸೈಕ್ಲಿಂಗ್ ಚಾಂಪಿಯನ್‍ಶಿಪ್‍: ವಿಜಯಪುರ ತಂಡಕ್ಕೆ ಪ್ರಥಮ ಬಹುಮಾನ

State level cycling championship: ಬಾಗಲಕೋಟೆಯಲ್ಲಿ ನಡೆದ ರಾಜ್ಯ ಮಟ್ಟದ ಸೈಕ್ಲಿಂಗ್ ಚಾಂಪಿಯನ್‍ಶಿಪ್‍ನಲ್ಲಿ ವಿಜಯಪುರ ತಂಡ 35 ಅಂಕ ಗಲಿಸುವ ಮೂಲಕ ಮೊದಲ ಸ್ಥಾನ ಪಡೆದರೆ, ಬಾಗಲಕೋಟೆ ಜಿಲ್ಲಾ ತಂಡಕ್ಕೆ ಎರಡನೇ ಸ್ಥಾನ ಲಭಿಸಿತು.

author img

By ETV Bharat Karnataka Team

Published : Nov 26, 2023, 10:19 AM IST

Etv Bharat
Etv Bharat

ಬಾಗಲಕೋಟೆ: ಗ್ರಾಮೀಣ ಕ್ರೀಡೆಯಾದ ಸೈಕಲ್ ಸವಾರಿ ಇಂದು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಬಾಗಲಕೋಟೆ ಸಹ ಸೈಕ್ಲಿಸ್ಟ್​ಗಳ ತವರು ಜಿಲ್ಲೆಯಾಗಿ ಪರಿಣಮಿಸಿದೆ. ಇಲ್ಲಿನ ಸೈಕ್ಲಿಂಗ್ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕಿದೆ ಎಂದು ಬೀಳಗಿ ಶಾಸಕ ಜೆ.ಟಿ.ಪಾಟೀಲ ಹೇಳಿದರು.

State Level Cycling Championship
ಬಾಗಲಕೋಟೆಯಲ್ಲಿ ನಡೆದ ರಾಜ್ಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆ

ನವನಗರದ ಯುನಿಟ್-2ರಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ಸೈಕ್ಲಿಂಗ್ ಚಾಂಪಿಯನ್‍ಶಿಪ್ ಪಂದ್ಯಾವಳಿಯ ಎರಡನೇ ದಿನದ(ಶನಿವಾರ) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, "ಬಾಗಲಕೋಟೆ ಜಿಲ್ಲೆಯು ತನ್ನದೇ ಆದ ವಿವಿಧ ಕ್ರೀಡೆಗಳಲ್ಲಿ ವಿಶಿಷ್ಟವಾದ ಛಾಪು ಮೂಡಿಸಿದೆ. ಕಬಡ್ಡಿ, ಕೋಕೋ, ಮಲ್ಲಕಂಬಗಳಂತಹ ಕ್ರೀಡೆಗಳಲ್ಲಿ ಹೆಸರು ತಂದಿದೆ. ಜಿಲ್ಲೆಯ ಸೈಕ್ಲಿಸ್ಟ್​ಗಳು ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಅವರಿಗೆ ಆರೋಗ್ಯದ ಸಮಸ್ಯೆ ಬರದಂತೆ ನೋಡಿಕೊಳ್ಳಬೇಕು. ಸೈಕಲ್ ಸವಾರಿ ಮಾಡುವಾಗ ರಸ್ತೆಯಲ್ಲಿ ಬಿದ್ದು, ತೊಂದರೆಯಾದಲ್ಲಿ ಸೂಕ್ತ ಚಿಕಿತ್ಸೆ ಕೊಡಿಸುವ ಕೆಲಸ ಇಲಾಖೆಯಿಂದ ಆಗಬೇಕು. ಅದಕ್ಕೆ ಬೇಕಾದ ಅನುದಾನ ಸರ್ಕಾರದಿಂದ ಕೊಡಿಸುವ ಕೆಲಸ ಮಾಡಲಾಗುವುದು. ಕ್ರೀಡಾಪಟುಗಳು ನಮ್ಮ ಜಿಲ್ಲೆಯ ಆಸ್ತಿ ಎಂಬ ಭಾವನೆ ಇಟ್ಟುಕೊಂಡು ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವುದು ಇಲಾಖೆಯ ಜವಾಬ್ದಾರಿ" ಎಂದರು.

ಸೈಕ್ಲಿಂಗ್‍ನಲ್ಲಿ ವಿಜೇತರು: ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಸೈಕ್ಲಿಂಗ್ ಚಾಂಪಿಯನ್‍ಶಿಪ್‍ನಲ್ಲಿ ವಿಜಯಪುರ ತಂಡ 35 ಅಂಕ ಪಡೆಯುವ ಮೂಲಕ ವಿನ್ನರ್ ಸ್ಥಾನ ಪಡೆದರೆ, ಬಾಗಲಕೋಟೆ ಜಿಲ್ಲಾ ತಂಡ 33 ಅಂಕ ಪಡೆಯುವ ಮೂಲಕ ರನ್ನರ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಪುರುಷರ ವಿಭಾಗ: 30 ಕಿ.ಮೀ (ಇಂಡಿಜುವಲ್) ಸೌರಭ ಸಿಂಗ್ (ಪ್ರಥಮ), ಸೋಮಶೇಖರ ಜಿ (ದ್ವಿತೀಯ), ರಾವುತ್ ಚೆಂಬರ್ (ತೃತೀಯ) ಸ್ಥಾನ ಪಡೆದುಕೊಂಡರೆ, 23 ವರ್ಷದೊಳಗಿನ ಪುರುಷ ವಿಭಾಗದ 30 ಕಿ.ಮೀನಲ್ಲಿ (ಟಯಮ್ ಟ್ರಯಲ್) ಪ್ರತಾಪ ಪಡಚಿ (ಪ್ರಥಮ), ಶ್ರೀಶೈಲ ವೀರಾಪೂರ (ದ್ವಿತೀಯ), ಅನೀಲ ಕಾಳಪ್ಪಗೋಳ (ತೃತೀಯ), 4 ಲ್ಯಾಪ್ಸ್ ಮಾಸ್ಟ ಸ್ಪಾರ್ಟನಲ್ಲಿ ಬಾಗಲಕೋಟೆ ಜಿಲ್ಲೆಯ ನಂದೆಪ್ಪ ಸವದಿ (ಪ್ರಥಮ), ಗದಗ ಜಿಲ್ಲೆಯ ಮಾಂತೇಶ ಮದರಖಂಡಿ (ದ್ವಿತೀಯ), ಧಾರವಾಡ ಜಿಲ್ಲೆಯ ಶ್ರೀನಿಧಿ ಉರಾಲ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.

ಬಾಲಕರ ವಿಭಾಗ: 14 ವರ್ಷದೊಳಗಿನ ಬಾಲಕರ 10 ಕಿ.ಮೀ ಟಯಮ್ ಟ್ರಯಲ್‍ನಲ್ಲಿ ಕರೆಪ್ಪ ಹೆಗಡೆ (ಪ್ರಥಮ), ಸ್ಟ್ಯಾಲಿನ್ ಗೌಡರ (ದ್ವಿತೀಯ), ಹೊನ್ನಪ್ಪ ಧರ್ಮಪ್ಪ (ತೃತೀಯ), 16 ವರ್ಷದೊಳಗಿನ 10 ಕಿ.ಮೀ ಟಯಮ್ ಟ್ರಯಲ್‍ನಲ್ಲಿ ಯಲ್ಲೇಶ ಹುಡೇದ (ಪ್ರಥಮ), ನಿತೇಶ ಪೂಜಾರಿ (ದ್ವಿತೀಯ), ತರುಣ ನಾಯಕ (ತೃತೀಯ), 18 ವರ್ಷದೊಳಗಿನ 20 ಕಿ.ಮೀ ಟಯಮ್ ಟ್ರಯಲ್‍ನಲ್ಲಿ ವಿಜಯಪುರ ಜಿಲ್ಲೆಯ ಸುಜಲ್ ಜಾದವ (ಪ್ರಥಮ), ರಾಹುಲ್ ರಾಠೋಡ (ದ್ವೀತೀಯ), ಚಂದರಗಿಯ ರಾಘವೇಂದ್ರ ವಂದಾಲ (ತೃತೀಯ), 16 ವರ್ಷದೊಳಗಿನ ಬಾಲಕರ 2 ಲ್ಯಾಪ್ಸ್ ಮಾಸ್ಟ-ಸ್ಪಾರ್ಟದಲ್ಲಿ ವಿಜಯಪುರದ ಬೀರಪ್ಪ ನವಲಿ (ಪ್ರಥಮ), ಅರವಿಂದ ರಾಠೋಡ (ದ್ವಿತೀಯ), ಬೆಳಗಾವಿಯ ಮೋಹನ ದಳವಾಯಿ (ತೃತೀಯ) ಬಹುಮಾನ ಜಯಿಸಿದರು.

23 ವರ್ಷದೊಳಗಿನ 4 ಲ್ಯಾಪ್ಸ್ ಮಾಸ್ಟ-ಸ್ಪಾರ್ಟದಲ್ಲಿ ಬಾಗಲಕೋಟೆ ಜಿಲ್ಲೆಯ ಮಧು ಕಾಡಾಪೂರ (ಪ್ರಥಮ), ಚಂದರಗಿಯ ಮನೋಜ ಬಾಟಿ (ದ್ವಿತೀಯ), ಬಾಗಲಕೋಟೆಯ ಮಲ್ಲಿಕಾರ್ಜುನ ಯಾದವಾಡ (ತೃತೀಯ), 18 ವರ್ಷದೊಳಗಿನ 3 ಲ್ಯಾಪ್ಸ್ ಮಾಸ್ಟ-ಸ್ಪಾರ್ಟದಲ್ಲಿ ಬಾಗಲಕೋಟೆಯ ವರುಣ ಶಿರೂರ (ಪ್ರಥಮ), ಮೈಸೂರಿನ ಧನಂಜಯ (ದ್ವಿತೀಯ), ವಿಜಯಪುರದ ರಮೇಶ ಮಲಗುಂದಿ (ತೃತೀಯ) ಸ್ಥಾನ ಪಡೆದರು.

ಇದನ್ನೂ ಓದಿ: ಭಾರತ ಹೆಣ್ಣು ಮಕ್ಕಳ ಸುರಕ್ಷಿತ ತಾಣ : ನಿರೂಪಣೆಗಾಗಿ ಸೈಕಲ್ ಮೂಲಕ ದೇಶ ಪರ್ಯಟನೆ ಹೊರಟ ಯುವತಿ!

ಮಹಿಳಾ ವಿಭಾಗ: 20 ಕಿ.ಮೀ ಟಯಮ್ ಟ್ರಯಲ್‍ನಲ್ಲಿ ಬಾಗಲಕೋಟೆಯ ಸಾವಿತ್ರಿ ಹೆಬ್ಬಾಳಟ್ಟಿ (ಪ್ರಥಮ), ಬೆಂಗಳೂರಿನ ಪ್ರಿಯಾ ಕೃಷ್ಣನ್ (ದ್ವಿತೀಯ), ಧಾರವಾಡದ ಸೌಮ್ಯ ಅಂತಾಪೂರ (ತೃತೀಯ), 2 ಲ್ಯಾಪ್ಸ್ ಮಾಸ್ಟ-ಸ್ಪಾರ್ಟದಲ್ಲಿ ಬೆಳಗಾವಿಯ ಗಂಗಾ ದಂಡಿನ (ಪ್ರಥಮ), ಬಾಗಲಕೋಟೆಯ ಸೌಮ್ಯ ಅಂತಾಪೂರ (ದ್ವಿತೀಯ), ಸಾವಿತ್ರಿ ಹೆಬ್ಬಾಳಟ್ಟಿ (ತೃತೀಯ) ಸ್ಥಾನ ಗಿಟ್ಟಿಸಿಕೊಂಡರು.

ಬಾಲಕಿಯರ ವಿಭಾಗ: 14 ವರ್ಷಗಳ 10 ಕಿ.ಮೀ ಟಯಮ್ ಟ್ರಯಲ್‍ನಲ್ಲಿ ವಿಜಯಪುರದ ದಿಪೀಕಾ ಪಡತರೆ (ಪ್ರಥಮ), ಬಾಗಲಕೋಟೆಯ ಗಾಯತ್ರಿ ಕಿತ್ತೂರ (ದ್ವಿತೀಯ), ವಿಜಯಪುರದ ಪಲ್ಲವಿ ಹಂಚಿನಾಳ (ತೃತೀಯ), 18 ವರ್ಷದೊಳಗಿನ 10 ಕಿ.ಮೀ ಟಯಮ್ ಟ್ರಯಲ್‍ನಲ್ಲಿ ಬಾಗಲಕೋಟೆಯ ನಂದಾ ಚಿಂಚಖಂಡಿ (ಪ್ರಥಮ), ವಿಜಯಪುರದ ಪಾಯಲಿ ಚವ್ಹಾಣ (ದ್ವಿತೀಯ), ಬಾಗಲಕೋಟೆಯ ನುಪಮಾ ಗಳೇದ (ತೃತೀಯ), 16 ವರ್ಷದೊಳಗಿನ 1 ಲ್ಯಾಪ್ ಮಾಸ್ಟ ಸ್ಪಾರ್ಟದಲ್ಲಿ ವಿಜಯಪುರದ ಕೋಕಿಲಾ ಚವ್ಹಾಣ (ಪ್ರಥಮ), ಛಾಯಾ ನಾಗಶೆಟ್ಟಿ (ದ್ವಿತೀಯ) ಬಾಗಲಕೋಟೆಯ ಸಾವಿತ್ರಿ ರೂಗಿ (ತೃತೀಯ), 18 ವರ್ಷದೊಳಗಿನ 2 ಲ್ಯಾಪ್ ಮಾಸ್ಟ ಸ್ಪಾರ್ಟನಲ್ಲಿ ವಿಜಯಪುರದ ಪಾಯಲ ಚವ್ಹಾಣ (ಪ್ರಥಮ), ಬಾಗಲಕೋಟೆಯ ನಂದಾ ಚಿಂಚಖಂಡಿ (ದ್ವಿತೀಯ), ಅನುಪಮಾ ಗುಳೇದ (ತೃತೀಯ) ಸ್ಥಾನ ಗೆದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.