ETV Bharat / state

ಡಾ ವಿಜಯ ಸಂಕೇಶ್ವರ ಅವರಿಗೆ ಶ್ರೀಸಿದ್ದಶ್ರೀ ಪ್ರಶಸ್ತಿ ಪ್ರದಾನ.. ಪ್ರೇಮಾಗೆ ಅತ್ಯುತ್ತಮ ನಟಿ ಪ್ರಶಸ್ತಿ ಗರಿ

ಈ ಬಾರಿ ಪುಣ್ಯಕ್ಷೇತ್ರ ಸಿದ್ದನಕೊಳ್ಳದ ಸಿದ್ದೇಶ್ವರ ಮಠದಿಂದ 2023ನೇ ಸಾಲಿನ ಶ್ರೀ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ವಿಆರ್​ಎಲ್​ ಸಮೂಹ ಸಂಸ್ಥೆ ಚೇರ್ಮನ್ ಡಾ ವಿಜಯ ಸಂಕೇಶ್ವರ ಅವರಿಗೆ ಪ್ರದಾನ ಮಾಡಲಾಯಿತು.

ಡಾ ವಿಜಯ ಸಂಕೇಶ್ವರ
ಡಾ ವಿಜಯ ಸಂಕೇಶ್ವರ
author img

By

Published : Jan 16, 2023, 8:45 PM IST

ಡಾ ವಿಜಯ ಸಂಕೇಶ್ವರ ಅವರಿಗೆ ಶ್ರೀಸಿದ್ದಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ

ಬಾಗಲಕೋಟೆ: ಐತಿಹಾಸಿಕ ತಾಣ ಹಾಗೂ ಧಾರ್ಮಿಕ ಕೇಂದ್ರವಾಗಿ, ನಿರಂತರ ದಾಸೋಹ ಮಠ ಎಂದು ಹೆಸರುವಾಸಿಯಾಗಿರುವ ಸಿದ್ದನಕೊಳ್ಳದಲ್ಲಿ ಡಾ. ಶಿವಕುಮಾರ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುವ ಸಿದ್ದಶ್ರೀ ಉತ್ಸವವು ಈ ಬಾರಿಯು ಅದ್ದೂರಿಯಾಗಿ ನೆರವೇರಿತು. ಪ್ರತಿವರ್ಷ ಜನವರಿ 14 ರಂದು ಜಾತ್ರಾ ಮಹೋತ್ಸವ ಅಂಗವಾಗಿ ಮೂರು ದಿನಗಳ ಕಾಲ ಸಿದ್ದಶ್ರೀ ಉತ್ಸವ ಹಾಗೂ ಚಲನಚಿತ್ರೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

ಈ ಬಾರಿ ಪುಣ್ಯಕ್ಷೇತ್ರ ಸಿದ್ದನಕೊಳ್ಳದ ಸಿದ್ದೇಶ್ವರ ಮಠದಿಂದ 2023ನೇ ಸಾಲಿನ ಶ್ರೀ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ವಿಆರ್​ಎಲ್​ ಸಮೂಹ ಸಂಸ್ಥೆ ಚೇರ್ಮನ್ ಡಾ ವಿಜಯ ಸಂಕೇಶ್ವರ ಅವರಿಗೆ ಪ್ರದಾನ ಮಾಡಲಾಯಿತು. ಸಿದ್ದನಕೊಳ್ಳದ ಧರ್ಮಾಧಿಕಾರಿ ಡಾ. ಶಿವಕುಮಾರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಡಾ. ವಿಜಯ ಸಂಕೇಶ್ವರ ಅವರಿಗೆ ಮೈಸೂರು ಪೇಟ, ಶಾಲು, ಹಾರ ಹಾಕಿ, ಪಾರಿತೋಷಕ ಹಾಗೂ ನಗದು ಹಣದೊಂದಿಗೆ ಶ್ರೀ ಸಿದ್ಧಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಲೆ, ಕಲಾವಿದರ ಪ್ರೋತ್ಸಾಹಿಸುವ ಮಠ ಎಂದು ಖ್ಯಾತಿ ಪಡೆದಿರುವ ಸಿದ್ದನಕೊಳ್ಳದ ಮಠದಿಂದ ಉತ್ಸವದ ವೇಳೆ ಚಲನಚಿತ್ರೋತ್ಸವ ನಡೆಯುತ್ತ ಬಂದಿದ್ದು, ಈ ವರ್ಷದ ಅತ್ಯುತ್ತಮ ಬಯೋಫಿಕ್ ಚಿತ್ರ ಎಂದು ವಿಜಯಾನಂದ ಚಿತ್ರಕ್ಕೆ ಶ್ರೀಮಠದಿಂದ ಪ್ರಶಸ್ತಿ ಚಿತ್ರತಂಡದ ಪರವಾಗಿ ಡಾ. ವಿಜಯ ಸಂಕೇಶ್ವರ ಅವರಿಗೆ ಪ್ರದಾನ ಮಾಡಲಾಯಿತು. ಕಾಯಕದಲ್ಲಿ ದೇವರನ್ನು ಕಾಣುವ ಡಾ ಸಂಕೇಶ್ವರ ಅವರಿಗೆ ಈ ಪ್ರಶಸ್ತಿ ನೀಡಿದ್ದು, ಶ್ರೀಮಠ ಹಾಗೂ ಮಠದ ಭಕ್ತರಿಗೆ ಅಪಾರ ಸಂತೋಷ ತಂದಿದೆ. ಬಿಡುವಿಲ್ಲದ ಕರ್ತವ್ಯದ ಮಧ್ಯೆಯೂ ಸಿದ್ದನಕೊಳ್ಳಕ್ಕೆ ಆಗಮಿಸಿ ನಮ್ಮ ಗೌರವ ಸ್ವೀಕರಿಸಿದ ಬಗ್ಗೆ ಮಠದ ಧರ್ಮಾಧಿಕಾರಿ ಡಾ ಶಿವಕುಮಾರ ಸ್ವಾಮೀಜಿ ಸಂತೋಷ ವ್ಯಕ್ತಪಡಿಸಿದರು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ ವಿಜಯ ಸಂಕೇಶ್ವರ್​, ಮಠದ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ಮಠ, ಮಂದಿರ, ಪೂಜ್ಯರ ದರ್ಶನ, ಆಶೀರ್ವಾದ ಪಡೆಯುವುದನ್ನು ಅನೇಕ ವರ್ಷಗಳಿಂದಲೂ ನಡೆದಿದ್ದು, ಇದು ನನ್ನ ಹಿಂದಿನ ಜನ್ಮದ ಪುಣ್ಯ ಎಂದರು. ಬ್ಯಾಂಕ್ ಅಕೌಂಟ್ ಇಲ್ಲ, ಟ್ರಸ್ಟ್ ಇಲ್ಲ. ಬಂದ ಕಾಣಿಕೆಯನ್ನು ಭಕ್ತರಿಗೆ ಕೊಡುತ್ತಿರುವ ಈ ಮಠದ ಕಾರ್ಯ ಅಚ್ಚರಿ ಹಾಗೂ ಆಶ್ಚರ್ಯ ತಂದಿದೆ. ಈ ಕ್ಷೇತ್ರದ ಮಹಿಮೆ ಅಪಾರವಾಗಿದ್ದು, ಇಲ್ಲಿಗೆ ನಾನು ಪ್ರಥಮ ಸಲ ಬಂದಿದ್ದೇನೆ. ಈ ಸ್ಥಳಕ್ಕೆ ಅನೇಕ ಸಾಧಕರು ಬಂದು ಹೋಗಿದ್ದು, ಇಲ್ಲಿಯ ಮಹಿಮೆ ಅಪಾರ ಎನ್ನುವುದು ಮನವರಿಕೆ ಆಗಿದೆ ಎಂದರು.

ಬರೀ ಪ್ರಶಸ್ತಿ ಮಾತ್ರ ಪಡೆಯುತ್ತೇನೆ: ನನಗೆ ಯಾವುದೇ ಪ್ರಶಸ್ತಿ ಬಂದಾಗಲೂ ಹಣವನ್ನು ನಾನು ಪಡೆಯಲ್ಲ. ಬರೀ ಪ್ರಶಸ್ತಿ ಮಾತ್ರ ಪಡೆಯುತ್ತೇನೆ. ಎಂಪಿ, ಎಂಎಲ್ಸಿ, ಪೆನ್ಶನ್ ಸಹ ನಾನು ತೆಗೆದುಕೊಳ್ಳಲ್ಲ. ಇಲ್ಲಿಯೂ ಸಹ ಪ್ರಶಸ್ತಿ ಹಣ ಬೇಡ ಎಂದರೂ ಸ್ವಾಮೀಜಿ. ಇದು ಆಶೀರ್ವಾದ ಪಡೆಯಲೇಬೇಕು ಅಂತಿದ್ದಾರೆ. ಈ ಹಣವನ್ನು ಹುಬ್ಬಳ್ಳಿಯಲ್ಲಿ ನಿರ್ಮಾಣ ಮಾಡುತ್ತಿರುವ ದೇವಾಲಯಕ್ಕೆ ನಾಳೆಯೇ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಪ್ರೇಮಾ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ: ಸಿದ್ದನಕೊಳ್ಳ ಕ್ಷೇತ್ರ ಅಭೂತಪೂರ್ವವಾಗಿ ಬೆಳೆಯಬೇಕು. ಮುಂದಿನ ಪೀಳಿಗೆಗೆ ಇದು ಉಳಿಯಬೇಕು. ಇಲ್ಲಿನ ಶ್ರೀಗಳು ದುಡ್ಡು ತೆಗೆದುಕೊಳ್ಳಲ್ಲ. ಹೀಗಾಗಿ ಮಠದ ಭಕ್ತರು, ಉತ್ಸವಗಳ ಪ್ರಾಯೋಜಕರು ಎಲ್ಲರೂ ಸೇರಿ ಕ್ಷೇತ್ರ ಅಭಿವೃದ್ದಿಪಡಿಸಿ, ನಾನು ಸಹ ನಿಮ್ಮ ಜೊತೆ ಇರುತ್ತೇನೆ ಎಂದು ಹೇಳಿದರು. ಇದೇ ಸಮಯದಲ್ಲಿ ಚಲನಚಿತ್ರ ನಟಿಯಾಗಿರುವ ಪ್ರೇಮಾ ಅವರಿಗೆ ಅತ್ಯುತ್ತಮ ನಟಿ ಎಂಬ ಪ್ರಶಸ್ತಿಯನ್ನು ನೀಡಲಾಗಿತು. ಪ್ರೇಮಾಗೂ ಮೈಸೂರು ಪೇಟೆ, ಶಾಲು ಹಾರ ಹಾಕಿ, ಪ್ರಶಸ್ತಿ ಫಲಕ ಹಾಗೂ ನಗದು ಹಣ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ನಟಿ ಪ್ರೇಮಾ ಮಾತನಾಡಿ, ಇಂತಹ ಪುಣ್ಯ ಕ್ಷೇತ್ರದಲ್ಲಿ ಪ್ರಶಸ್ತಿ ಸನ್ಮಾನದ ಗೌರವ ಸಿಕ್ಕಿದ್ದು, ಹೆಮ್ಮಯ ಸಂಗತಿಯಾಗಿದೆ ಎಂದರು. ನಂತರ ಪೇಕ್ಷಕರ ಒತ್ತಾಯ ಮೇರೆಗೆ ಕನಸುಗಾರ ಚಿತ್ರದ ಹಾಡನ್ನು ಹಾಡಿ ರಂಜಿಸಿದರು. ಇದೇ ಸಂದರ್ಭದಲ್ಲಿ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ಕುಷ್ಟಗಿ ಶಾಸಕ ಅಮರೇಗೌಡ ಭಯ್ಯಾಪುರ, ಬಿಜೆಪಿ ಯುವ ಮುಖಂಡ ಡಾ. ಆರ್. ಎಸ್ ರಾಜು, ಮಲ್ಲಿಕಾರ್ಜುನ ಚರಂತಿಮಠ, ಚಿತ್ರ ನಿರ್ಮಾಪಕ ಘನಶಾಮ ಭಾಂಡಗೆ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.

ಓದಿ: ಆರ್​ಆರ್​ಆರ್​ ಹೊಗಳಿದ ಅವತಾರ್​ ನಿರ್ದೇಶಕ ಜೇಮ್ಸ್​ ಕ್ಯಾಮೆರಾನ್​: ಪ್ರಪಂಚದ ಉತ್ತುಂಗದಲ್ಲಿದ್ದೇನೆ ಎಂದ ನಿರ್ದೇಶಕ ರಾಜಮೌಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.