ETV Bharat / state

ಬಾದಾಮಿ: ಪತ್ನಿ ಜೊತೆ ಜಗಳ ಮಾಡಿದ ಯೋಧನ ಕೊಲೆ ಮಾಡಿದ ಬಾವ - ಯೋಧನ ಕೊಲೆ

ಬಾವನೇ ಚಾಕುವಿನಿಂದ ಇರಿದು ಬಾಮೈದುನನ ಕೊಲೆ ಮಾಡಿರುವ ಘಟನೆ ನಡೆದಿದೆ. ಪತ್ನಿ ಜೊತೆ ಜಗಳ ಮಾಡಿದ್ದಕ್ಕೆ ಯೋಧನ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ.

Etv Bharat,ಯೋಧನ ಕೊಲೆ
Etv Bharat,ಯೋಧನ ಕೊಲೆ
author img

By

Published : Aug 12, 2022, 10:12 AM IST

ಬಾಗಲಕೋಟೆ: ರಜೆ ಮೇಲೆ ಬಂದಿದ್ದ ಯೋಧರೊಬ್ಬರಿಗೆ ಪತ್ನಿಯ ಸಹೋದರನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಕರಿಸಿದ್ದಪ್ಪ‌ ಕಳಸದ (25) ಕೊಲೆಯಾದ ಯೋಧ. ಸಿದ್ದನಗೌಡ ದೂಳಪ್ಪನವರ ಕೊಲೆ ಮಾಡಿದ ಆರೋಪಿ. ಯೋಧ ಕರಿಸಿದ್ದಪ್ಪ ಅವರು ಊಟ ಮಾಡುವ ವೇಳೆ ಪತ್ನಿ ಜೊತೆ ಜಗಳ ಮಾಡಿದ್ದೇ ಕೊಲೆಗೆ ಕಾರಣ ಎನ್ನಲಾಗುತ್ತಿದೆ.

ಬಾವನಿಂದ ಬಾಮೈದುನನ ಕೊಲೆ: ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಕರಿಸಿದ್ದಪ್ಪ ಕಳೆದ ನಾಲ್ಕು ದಿನದ ಹಿಂದೆ ರಜೆಗಾಗಿ ಊರಿಗೆ ಬಂದಿದ್ದರು. ಇವರು ವಿದ್ಯಾ ಎಂಬುವರ ಜೊತೆ ಎರಡು ವರ್ಷದ ಹಿಂದೆ ಲವ್ ಮ್ಯಾರೇಜ್ ಆಗಿದ್ದರು. ಗುರುವಾರ ರಾತ್ರಿ ಊಟ ಮಾಡುವ ವೇಳೆ ಪತಿ ಮತ್ತು ಪತ್ನಿ ನಡುವೆ ಜಗಳ ನಡೆದಿತ್ತು. ಆ ಬಳಿಕ ಪತ್ನಿ ವಿದ್ಯಾ ತನ್ನ ಸಹೋದರನಿಗೆ ಕರೆ ಮಾಡಿ ಮನೆಗೆ ಕರೆಸಿದ್ದರು. ಕೋಪದಲ್ಲಿ ಬಂದ ಆರೋಪಿ ಸಿದ್ದನಗೌಡ ಚಾಕುವಿನಿಂದ ಸಹೋದರಿಯ ಪತಿಗೆ ಇರಿದಿದ್ದಾನೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಯೋಧ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಕೆರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

(ಇದನ್ನೂ ಓದಿ: ಕಣಿವೆ ನಾಡಲ್ಲಿ ನಿಲ್ಲುತ್ತಿಲ್ಲ ಹತ್ಯೆಗಳು.. ಮತ್ತೊಮ್ಮೆ ಕಾಶ್ಮೀರೇತರರ ಮೇಲೆ ಗುಂಡಿನ ದಾಳಿ!)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.