ETV Bharat / state

ಸ್ವಾವಲಂಬಿಯಾಗಿ ದುಡಿದು ಆನ್​ಲೈನ್​ ಶಿಕ್ಷಣಕ್ಕಾಗಿ ಸ್ಮಾರ್ಟ್​​ಫೋನ್​​​ ಖರೀದಿಸಿದ ಸಹೋದರಿಯರು!! - online education system impact

ಎರಡು ಎಕರೆ ಜಮೀನನ್ನು ಹೊಂದಿದ್ದರು. ಬೋರ್‌ವೆಲ್​​ ವಿಫಲವಾದ ಕಾರಣ ಮಳೆಯನ್ನು ಅವಲಂಬಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳು ಬೆಳ್ಳಿಗೆ‌ ಕೂಲಿ ಮಾಡಿ ಸಂಪಾದಿಸಿದ ಹಣದಿಂದ ಹತ್ತು ಸಾವಿರ ರೂ. ಮೌಲ್ಯದ ಗುಣಮಟ್ಟದ ಸ್ಮಾರ್ಟ್‌ಫೋನ್ ಖರೀದಿಸಿ, ಆನ್‌ಲೈನ್ ಶಿಕ್ಷಣ ‌ಪಡೆದುಕೊಳ್ಳುತ್ತಿದ್ದಾರೆ..

sisters-brought-cell-phone-for-online-education
ಆನ್​ಲೈನ್​ ಶಿಕ್ಷಣ
author img

By

Published : Aug 1, 2020, 8:08 PM IST

ಬಾಗಲಕೋಟೆ : ಆನ್​ಲೈನ್​ ಶಿಕ್ಷಣ ಪಡೆಯಲು ಸರ್ಕಾರದ ಸಹಾಯಕ್ಕಾಗಿ ಕಾಯ್ದು ಕುಳಿತಿರುವ ಜನರ ಮಧ್ಯೆ ಸಹೋದರಿಯರಿಬ್ಬರು ಸ್ವಾವಲಂಬಿಯಾಗಿ ದುಡಿದು ಸ್ಮಾರ್ಟ್‌ಫೋನ್​ ಖರೀದಿಸುವ ಮೂಲಕ ಮಾದರಿಯಾಗಿದ್ದಾರೆ.

ಜಿಲ್ಲೆಯ ಬಾದಾಮಿ ತಾಲೂಕಿನ ಮುತ್ತಲಗೇರಿ ಗ್ರಾಮದ ಸವಿತಾ, ಮಹಾದೇವಿ ಕುರಿ ಎಂಬ ಸಹೋದರಿಯರು ಕೂಲಿ ಮಾಡಿ‌ ಮೊಬೈಲ್ ಖರೀದಿಸಿ ಆನ್​ಲೈನ್ ಶಿಕ್ಷಣ ಪಡೆದುಕೊಳ್ಳುತ್ತಿದ್ದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುತ್ತಲಗೇರಿ ಗ್ರಾಮದ ಹನಮಂತ ಕುರಿ ಎಂಬುವರಿಗೆ ಏಳು ಜನ ಹೆಣ್ಣು ಮಕ್ಕಳಿದ್ದು, ಬಡತನದಲ್ಲಿಯೂ ಅವರನ್ನು ಶಿಕ್ಷಣದಿಂದ ದೂರ ಮಾಡಿಲ್ಲ ಎಂಬುವುದು ವಿಶೇಷ.

ಗ್ರಾಮದ ಆರ್​ಎಂಎಸ್ ಸರ್ಕಾರಿ ಪ್ರೌಢ ಶಾಲೆಯಲ್ಲಿ 8ನೇ ತರಗತಿ ಮತ್ತು 9ನೇ ತರಗತಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರು ಸ್ವಾವಲಂಬಿಯಾಗಿ ಶಿಕ್ಷಣಕ್ಕೆ ಬೇಕಾದ ಪರಿಕರ ಖರೀದಿಸಿರುವುದು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ.

ಎರಡು ಎಕರೆ ಜಮೀನನ್ನು ಹೊಂದಿದ್ದರು. ಬೋರ್‌ವೆಲ್​​ ವಿಫಲವಾದ ಕಾರಣ ಮಳೆಯನ್ನು ಅವಲಂಬಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳು ಬೆಳ್ಳಿಗೆ‌ ಕೂಲಿ ಮಾಡಿ ಸಂಪಾದಿಸಿದ ಹಣದಿಂದ ಹತ್ತು ಸಾವಿರ ರೂ. ಮೌಲ್ಯದ ಗುಣಮಟ್ಟದ ಸ್ಮಾರ್ಟ್‌ಫೋನ್ ಖರೀದಿಸಿ, ಆನ್‌ಲೈನ್ ಶಿಕ್ಷಣ ‌ಪಡೆದುಕೊಳ್ಳುತ್ತಿದ್ದಾರೆ.

ಬೆಳಗ್ಗೆ ಕೆಲಸಕ್ಕೆ ಹೋಗುವ ಸಹೋದರಿಯರು ಸಂಜೆ ಯೂಟ್ಯೂಬ್​​ನಲ್ಲಿ ಪಾಠವನ್ನು ಆಲಿಸಿ, ವಿಷಯವನ್ನು ತಿಳಿದುಕೊಳ್ಳುತ್ತಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೇತ್ರದಲ್ಲಿಯೇ ಆನ್​ಲೈನ್ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಪರದಾಡುವಂತಾಗಿರೋದು ವಿಪರ್ಯಾಸ.

ಅವರಿವರಿಂದ ಬೇಡದೆ ಸ್ವಾವಲಂಬಿಯಾಗಿ ದುಡಿದು ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಯರ ಕಾರ್ಯ ಇತರರಿಗೆ ಮಾದರಿ ಅಂತಾ ಗ್ರಾಮದ ಜನ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.