ಬಾಗಲಕೋಟೆ: ಕೊರೊನಾ ವೈರಸ್ ಭೀತಿ ಹಿನ್ನೆಲೆ ಬಸವ ಜಯಂತಿಯನ್ನು ಸರಳವಾಗಿ ಮನೆಯಲ್ಲಿ ಆಚರಿಸುವಂತೆ ಶಾಸಕ ವೀರಣ್ಣ ಚರಂತಿಮಠ ಜನತೆಗೆ ಕರೆ ನೀಡಿದ್ದಾರೆ.
ಬಸವೇಶ್ವರ ವಿದ್ಯಾವರ್ಧಕ ಸಂಘದಿಂದ ಪ್ರತಿವರ್ಷ ಅದ್ಧೂರಿಯಾಗಿ ಬಸವ ಜಯಂತಿ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್ ರೋಗದ ಭಯದಿಂದ ಸರಳವಾಗಿ ಆಚರಿಸುವಂತಾಗಿದೆ. ಬಾಗಲಕೋಟೆಯು ರೆಡ್ ಝೋನ್ ಆಗಿರುವುದರಿಂದ ಸರ್ಕಾರದ ವತಿಯಿಂದ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಟಾಧಿಕಾರಿ ಹಾಗೂ ಜಿ.ಪಂ ಸಿಇಓ ಮತ್ತು ಶಾಸಕರು ಮಾತ್ರ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುತ್ತಾರೆ.
ನಂತರ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳಷ್ಟೇ ಪೂಜೆ ಮಾಡುವ ಮೂಲಕ ಸರಳವಾಗಿ ಆಚರಣೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಮೇ3 ರವೆಗೆ ಎಲ್ಲರೂ ಲಾಕ್ ಡೌನ್ ಪಾಲಿಸಬೇಕಾಗಿದೆ. ನಂತರ ಪ್ರಧಾನಿಮಂತ್ರಿ ಹಾಗೂ ಮುಖ್ಯಮಂತ್ರಿ ಅವರು ಸಲಹೆ ಸೂಚನೆಗಳನ್ನು ನೀಡಿದಂತೆ ಪಾಲಿಸುವ ಮೂಲಕ ಕೊರೊನಾ ರೋಗ ಓಡಿಸಬೇಕಾಗಿದೆ ಎಂದು ಚರಂತಿಮಠ ಜನತೆಗೆ ಮನವಿ ಮಾಡಿದ್ದಾರೆ.