ಬಾಗಲಕೋಟೆ: ಒಂದು ತಿಂಗಳಿನಿಂದ ನಡೆಯುತ್ತಿದ್ದ ಸಿದ್ದೇಶ್ವರ ಶ್ರೀಗಳ ಪ್ರವಚನ ಸಮಾಪ್ತಿಯಾಗಿದ್ದು, ಇದರ ಅಂಗವಾಗಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ನವನಗರದ ಕಲಾಭವನದಲ್ಲಿ ಒಂದು ತಿಂಗಳು ಪ್ರವಚನ ನೀಡಲಾಗಿತ್ತು. ಮುಕ್ತಾಯ ಸಮಾರಂಭ ಹಾಗೂ ಶಿವರಾತ್ರಿ ಅಂಗವಾಗಿ ಬಂದಿರುವ ಭಕ್ತರು ಪ್ರಸಾದ ಸ್ವೀಕರಿಸಿದರು. ಶಾಸಕ ವೀರಣ್ಣ ಚರಂತಿಮಠ ಕೂಡ ಭಾಗವಹಿಸಿದ್ದರು.