ಬಾಗಲಕೋಟೆ : ನಾಡಿಗೆ ಅನ್ನ ನೀಡುವ ರೈತರು ಸಂಕಷ್ಟದಲ್ಲಿದ್ದು,ಅವರ ಸಮಸ್ಯೆಗಳನ್ನು ಆಲಿಸಿ ತಕ್ಷಣವೇ ಸ್ಪಂದಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ
ಅಧಿಕಾರಿಗಳಿಗೆ ಹೇಳಿದರು.
ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ, ಕೃಷಿ, ತೋಟಗಾರಿಕೆ ಹಾಗೂ ಪಶುಸಂಗೋಪನಾ ಅಧಿಕಾರಿಗಳು ರೈತರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ನಿರಂತರವಾಗಿ ರೈತರ ಜೊತೆ ಸಂಪರ್ಕದಲ್ಲಿರಬೇಕು ಎಂದು ತಿಳಿಸಿದರು.
ಕ್ಷೇತ್ರ ಮಟ್ಟದ ಅಧಿಕಾರಿಗಳು ರೈತರ ಜಮೀನುಗಳಿಗೆ, ಮನೆಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕು. ಬೆಳೆವಿಮೆ, ಬೆಳೆ ಪರಿಹಾರ, ಬೆಳೆ ಸಮೀಕ್ಷೆ, ಬೆಳೆ ನೋಂದಣಿ, ಆರ್‍ಟಿಸಿ ತಿದ್ದುಪಡಿ, ಬೆಳೆದರ್ಶಕ ಆಪ್, ಸಿಟಿಜನ್ ಲಾಗ್‍ಇನ್ ನಂತಹ ಪ್ರಕ್ರಿಯೆಗಳ ಬಗ್ಗೆ ನಿರಂತರವಾಗಿ ಪರಸ್ಪರ ಮಾಹಿತಿ ಪೂರೈಸಬೇಕೆಂದು ಸೂಚನೆ ನೀಡಿದರು.