ETV Bharat / state

ಹೊರ ದೇಶದಲ್ಲಿ ಚಿಕ್ಕಮಕ್ಕಳಂತೆ ದೇಶದ ವಿರುದ್ಧ ಹೇಳಿಕೆ ನೀಡುವುದು ಸರಿಯಲ್ಲ: ಬಿಎಸ್​ವೈ - karnataka assembly election

ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಹುಮ್ಮಸ್ಸಿನಲ್ಲಿದ್ದಾರೆ. ಆದರೆ, ಅವರ ಕನಸು ನನಸಾಗುವುದಿಲ್ಲ ಎಂದು ಯಡಿಯೂರಪ್ಪ ಟಾಂಗ್ ಕೊಟ್ಟರು.

rahul-gandhi-is-dishonoring-the-country-by-making-statements-bs-yeddyurappa
ರಾಹುಲ್​ ಗಾಂಧಿ ಹೊರ ದೇಶಕ್ಕೆ ಚಿಕ್ಕಮಕ್ಕಳಂತೆ ಹೇಳಿಕೆ ನೀಡಿ, ದೇಶದ ಅಪಮಾನ ಮಾಡುತ್ತಿದ್ದಾರೆ: ಬಿ.ಎಸ್.ಯಡಿಯೂರಪ್ಪ​
author img

By

Published : Mar 14, 2023, 7:47 PM IST

Updated : Mar 14, 2023, 8:07 PM IST

ಹೊರ ದೇಶದಲ್ಲಿ ಚಿಕ್ಕಮಕ್ಕಳಂತೆ ದೇಶದ ವಿರುದ್ಧ ಹೇಳಿಕೆ ನೀಡುವುದು ಸರಿಯಲ್ಲ: ಬಿಎಸ್​ವೈ

ಬಾಗಲಕೋಟೆ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿ ಅವರು ಹೊರ ದೇಶದಲ್ಲಿ ಹೋಗಿ ಚಿಕ್ಕಮಕ್ಕಳಂತೆ ಹೇಳಿಕೆ ನೀಡಿ, ದೇಶದ ಅಪಮಾನ ಮಾಡುತ್ತಿದ್ದಾರೆ. ಈ ತರಹ ಹೇಳಿಕೆ ನೀಡುವುದು ಶೋಭೆ ತರವುದಿಲ್ಲ, ಈ ರೀತಿ ಹೇಳಿಕೆಗಳಿಂದ ಕಾಂಗ್ರೆಸ್​ ಪಕ್ಷಕ್ಕೆ ದಕ್ಕೆ ಆಗತ್ತದೆಯೇ ಹೊರತು ನಮಗೆ ಅದರಿಂದ ಸಮಸ್ಯೆ ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​​​​. ಯಡಿಯೂರಪ್ಪ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಬಾಗಲಕೋಟೆ ಜಿಲ್ಲೆಯ ರಬಕವಿ - ಬನಹಟ್ಟಿ ಪಟ್ಟಣದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಭಾಗವಹಿಸಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ‘‘ಬಿಜೆಪಿ ಪಕ್ಷ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆಗೆ ಅಭೂತ ಪೂರ್ಣವಾದ ಬೆಂಬಲ ಸಿಕ್ಕಿದೆ. ಮುಂಬರುವ ದಿನಮಾನದಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ನಿಶ್ಚಿತ’’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ನಾಯಕತ್ವ ಇಲ್ಲ, ರಾಹುಲ್​ ಗಾಂಧಿ ಅವರನ್ನು ಟೀಕೆ ಮಾಡಬೇಕು ಎಂದು ಹೇಳುತ್ತಿಲ್ಲ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರ ಮುಂದೆ ರಾಹುಲ್​ ಗಾಂಧಿ ಸರಿ ಸಮ ಅಲ್ಲ‌, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ, ಮುಂದಿನ ಮುಖ್ಯಮಂತ್ರಿ ಎಂಬ ಹುಮ್ಮಸ್ಸಿನಲ್ಲಿದ್ದಾರೆ. ಆದರೆ, ಅವರ ಕನಸು ನನಸಾಗುವುದಿಲ್ಲ ಎಂದು ಯಡಿಯೂರಪ್ಪ ಟಾಂಗ್ ಕೊಟ್ಟರು.

ಹೈಕಮಾಂಡ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ: ಸಚಿವ ಸೋಮಣ್ಣ‌ ಅವರು ಪಕ್ಷ ಬಿಟ್ಟು ಹೋಗುತ್ತಾರಾ ಎಂಬ ವಿಚಾರವಾಗಿ ಮಾತನಾಡಿ, ‘‘ಆ ರೀತಿಯ ಯಾವುದೇ ವಾತಾವರಣ ಇಲ್ಲ, ಆ ತರಹ ಸುದ್ದಿಗಳಿಗೆ ಮಹತ್ವ ಇಲ್ಲ. ಬಿಜೆಪಿ ‌ಪಕ್ಷದ ಹಿರಿಯ ಮುಖಂಡರು ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದರು. ಇನ್ನು ಟಿಕೆಟ್ ವಿಚಾರವಾಗಿ ಯಾವುದೇ ಊಹಾಪೋಹಗಳಿಗೆ ಉತ್ತರ ನೀಡುವುದಿಲ್ಲ ಟಿಕೆಟ್​ ನೀಡುವ ಬಗ್ಗೆ ಹೈಕಮಾಂಡ್​​​ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ. ಹೈಕಮಾಂಡ್​ ನಿರ್ಧಾರದಂತೆ ಕೆಲಸ ಮಾಡುವುದು’’ ಎಂದರು.

ವಿಜೇಯೇಂದ್ರ ಅವರ ಟಿಕೆಟ್​ ಅವರ ಮನೆಯಲ್ಲಿ ನಿರ್ಧಾರವಾಗುವುದಲ್ಲಿ ಎಂಬ ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘‘ಸಿ.ಟಿ ಹೇಳುವುದು ಸರಿ ಇದೆ, ವಿಜಯೇಂದ್ರ ಆಗಲಿ, ರಾಜ್ಯದ ಯಾವುದೇ ಬಿಜೆಪಿ ಶಾಸಕ ಯಾರಾಗಬೇಕು ಎಂಬ ತೀರ್ಮಾನ ಚುನಾವಣೆ ಸಮಿತಿ ಮಾಡುತ್ತದೆ ಹೊರತು ನಾವಲ್ಲ, ನಾವು ಕೇವಲ ಸಲಹೆ ನೀಡಬಹುದು ಅಷ್ಟೆ, ಅಂತಿಮ ತಿರ್ಮಾನ ಚುನಾವಣೆ ಸಮಿತಿ ಮಾಡುತ್ತದೆ’’ ಎಂದು ತಿಳಿಸಿದರು.

ಬನಹಟ್ಟಿ ಹಾಗೂ ತೇರದಾಳ ಪಟ್ಟಣದಲ್ಲಿ ರಥಯಾತ್ರೆ ಮೆರವಣಿಗೆ ಭಾಗವಹಿಸಿ, ಬಿಜೆಪಿ ಪಕ್ಷಕ್ಕೆ ಅಧಿಕಾರ ನೀಡುವಂತೆ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಮುರಗೇಶ ನಿರಾಣಿ, ಮಾಜಿ ಸಚಿವರಾದ ಲಕ್ಷ್ಮಣ ಸವದಿ ಸೇರಿದಂತೆ ಇತರ ಮುಖಂಡರು ಯಾತ್ರೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ : ದಾವಣಗೆರೆ ದಕ್ಷಿಣ ಮತಕ್ಷೇತ್ರದಲ್ಲಿ ಕಾಂಗ್ರೆಸ್​ ಟಿಕೆಟ್​ ಮೇಲೆ ಮುಸ್ಲಿಂ ನಾಯಕರ ಕಣ್ಣು: ಬಿಜೆಪಿ ರಣತಂತ್ರವೇನು?

Last Updated : Mar 14, 2023, 8:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.