ಬಾಗಲಕೋಟೆ : ತಂಬಾಕು, ಅಡಿಕೆ ಮಿಶ್ರಿತ ಮಾರಕ ಗುಟ್ಕಾ ಮಾವ ತಯಾರಿಕೆ ಮಾಡುತ್ತಿರುವ ಕೇಂದ್ರದ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ವೀರಭದ್ರ ಹಂಡಿ, ಅಶೋಕ ಗಚ್ಚಿನಮನಿ ಹಾಗೂ ಗದಿಗೆಪ್ಪ ನಿಲ್ಲೂಗಲ್ಲ ಎಂಬುವರನ್ನು ಬಂಧಿಸಿದ್ದು, ಕಬ್ಬಿಣದ ಗಿರಣಿ, 4 ಕೆ.ಜಿ ತಂಬಾಕು, 4 ಕೆ.ಜಿ ಅಡಕೆ ಹಾಗೂ 4 ಕೆ.ಜಿ ಸುಣ್ಣ ಮತ್ತು 200 ಮಾವಾ ಇದ್ದ ಪ್ಯಾಕೇಟ್ ವಶಕ್ಕೆ ಪಡೆದುಕೊಂಡಿದ್ದಾರೆ.
ಎಸ್. ಪಿ ಲೋಕೇಶ ಜಗಲಸಾರ ಆದೇಶದ ಮೆರೆಗೆ ಸಿಇಎನ್ ಪೋಲಿಸ್ ಠಾಣೆಯ ಅಧಿಕಾರಿ ಎಸ್.ಎಮ್ ತಹಶಿಲ್ದಾರ ನೇತೃತ್ವದ ತಂಡ ದಾಳಿ ಮಾಡಿದ್ದರು. ಈ ಬಗ್ಗೆ ಬಾಗಲಕೋಟೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.