ETV Bharat / state

ಕೋವಿಡ್​ ಹೆಚ್ಚಳ: ಶಾಸಕ ದೊಡ್ಡಗೌಡ ಪಾಟೀಲರಿಂದ ಆಕ್ಸಿಜನ್ ಘಟಕಕ್ಕೆ ಪುನಶ್ಚೇತನ - Mla Doddagowda patil rejuvenate the oxygen plant in Bagalkot

ಹುನಗುಂದ, ಇಳಕಲ್​ ತಾಲೂಕಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಶಾಸಕ ದೊಡ್ಡನಗೌಡ ಪಾಟೀಲ ಅವರು, ಕೋವಿಡ್ ಚಿಕಿತ್ಸೆ ಗೆ ನಿಗದಿ ಪಡಿಸಿದ ಗೌಳೇರ ಗುಡಿ ಹತ್ತಿರ ಇರುವ 30 ಹಾಸಿಗೆಗಳ ಆಸ್ಪತ್ರೆಗೆ ಭೇಟಿ ನೀಡಿ ಆಕ್ಸಿಜನ್ ಹಾಗೂ ಬೆಡ್​ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆಸಿದರು.

oxygen-plant-rejuvenate-by-mla-doddagowda-patil
ಶಾಸಕ ದೊಡ್ಡಗೌಡ ಪಾಟೀಲರಿಂದ ಆಕ್ಸಿಜನ್ ಘಟಕಕ್ಕೆ ಪುನಶ್ಚೇತನ
author img

By

Published : May 10, 2021, 5:50 PM IST

Updated : May 10, 2021, 7:22 PM IST

ಬಾಗಲಕೋಟೆ: ರಾಜ್ಯದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆತಂಕ ಮೂಡಿಸಿದೆ. ಈ ಮಧ್ಯೆ ಸರಿಯಾದ ಸಮಯಕ್ಕೆ ಆಕ್ಸಿಜನ್ ಇಲ್ಲದೇ ಮೃತ ಪಡುತ್ತಿರುವವರ ಸಂಖ್ಯೆಯೂ ಕೂಡಾ ಅಧಿಕವಾಗುತ್ತಿದೆ. ಈ ಹಿನ್ನೆಲೆ ಹುನಗುಂದ ಶಾಸಕರಾದ ದೊಡ್ಡಗೌಡ ಪಾಟೀಲ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಆಕ್ಸಿಜನ್ ಘಟಕಕ್ಕೆ ಪುನಶ್ಚೇತನ ನೀಡಿ, ಮರಳಿ ಪ್ರಾರಂಭಿಸುವ ಮೂಲಕ ಗಮನ ಸೆಳೆದಿದ್ದಾರೆ.

ಶಾಸಕ ದೊಡ್ಡಗೌಡ ಪಾಟೀಲರಿಂದ ಆಕ್ಸಿಜನ್ ಘಟಕಕ್ಕೆ ಪುನಶ್ಚೇತನ

ಹುನಗುಂದ, ಇಳಕಲ್​ ತಾಲೂಕಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಶಾಸಕ ದೊಡ್ಡನಗೌಡ ಪಾಟೀಲ ಅವರು, ಕೋವಿಡ್ ಚಿಕಿತ್ಸೆ ಗೆ ನಿಗದಿ ಪಡಿಸಿದ ಗೌಳೇರ ಗುಡಿ ಹತ್ತಿರ ಇರುವ 30 ಹಾಸಿಗೆಗಳ ಆಸ್ಪತ್ರೆಗೆ ಭೇಟಿ ನೀಡಿ ಆಕ್ಸಿಜನ್ ಹಾಗೂ ಬೆಡ್​ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳ ಪರಿಶೀಲನೆ ನಡೆಸಿದರು. ನಂತರ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಚೇತನಾ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ಸಮಾಲೋಚನೆ ನಡೆಸಿ, ಚಾಮರಾಜನಗರದಲ್ಲಿ ಆದ ಘಟನೆ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು.

ಇದೇ ಸಮಯದಲ್ಲಿ ಇಳಕಲ್​ ಹಾಗೂ ಹುನಗುಂದ ನಗರಕ್ಕೆ ಆಕ್ಸಿಜನ್ ಕೊರತೆ ಆಗದಂತೆ ನೋಡಿಕೊಳ್ಳಲು 15 ಲಕ್ಷ ರೂಪಾಯಿಗಳ ತಮ್ಮ ಸ್ವಂತ ವೆಚ್ಚದಲ್ಲಿ ಆಕ್ಸಿಜನ್ ಘಟಕ ಪುನಶ್ಚೇತನ ಹಾಗೂ 12 ಕೆ ಎಲ್ ಆಕ್ಸಿಜನ್ ಟ್ಯಾಂಕರ್​ ಅನ್ನ ಖರೀದಿಸಿ ಆಸ್ಪತ್ರೆಗೆ ನೀಡಿದರು.

ಕಳೆದ ಹಲವು ವರ್ಷಗಳಿಂದ ಆಕ್ಸಿಜನ್ ಘಟಕ ಪ್ರಾರಂಭವಾಗದೇ ಧೂಳು ಹಿಡಿದಿತ್ತು. ಈಗ ಅದನ್ನು ಪುನಶ್ಚೇತನ ನೀಡಲು ಶಾಸಕರು ಮುಂದಾಗಿ ಸ್ಥಳದ ಪರಿಶೀಲನೆ ಮಾಡಿ, ಸೂಕ್ತ ವ್ಯವಸ್ಥೆ ಕಲ್ಪಿಸುವುದಕ್ಕೆ ನಿರ್ಧಾರ ತೆಗೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಕೋವಿಡ್ ರೋಗ ಹರಡುತ್ತಿರುವುದರಿಂದ ಸಾವು ನೋವು ಹೆಚ್ಚಾಗುತ್ತಿದೆ. ಹೀಗಾಗಿ ಆಕ್ಸಿಜನ್ ಟ್ಯಾಂಕರ್ ತರಿಸಲಾಗಿದೆ. ಸುಮಾರು 120 ಸಿಲಿಂಡರ್ ತುಂಬಿಸಿ ಆಸ್ಪತ್ರೆಗೆ ವ್ಯವಸ್ಥೆ ಮಾಡಿ ಕೊಡಲಾಗುವುದು ಎಂದರು.

ಓದಿ: ಅಳಿಯನ ಹೆಸರನ್ನೇ ಮರೆತ ಮಾವ : ಸುಳ್ಳು ಹೇಳ್ತಿಯಾ? ಎಂದು ಆಟೋ ಜಪ್ತಿ ಮಾಡಿದ ಪೊಲೀಸರು!

Last Updated : May 10, 2021, 7:22 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.