ETV Bharat / state

ಸಿಎಂ ಬದಲಾವಣೆ ಇಲ್ಲ, ಸುಳ್ಳನ್ನೇ ಪ್ರಚಾರ ಮಾಡುವುದು ಸರಿಯಲ್ಲ : ನೆ.ಲ. ನರೇಂದ್ರ ಬಾಬು - ಸಿಎಂ ಬದಲಾವಣೆ ಇಲ್ಲ

ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ರಾಜ್ಯ ಉಸ್ತುವಾರಿಗಳು ಸ್ಪಷ್ಟವಾಗಿ ಸಂದೇಶ ನೀಡಿದ್ದಾರೆ. ಇದರ ಕುರಿತು ಮಾತನಾಡುವುದು ಅಗತ್ಯ ಇಲ್ಲ. ಸುಳ್ಳನ್ನೆ ಹತ್ತು ಸಲ ಹೇಳಿ ಪ್ರಚಾರ ಪಡಿಸುವುದು ಸರಿಯಲ್ಲ ಎಂದು ಮಾಜಿ ಶಾಸಕ ನೆ.ಲ ನರೇಂದ್ರಬಾಬು ತಿಳಿಸಿದರು.

no cm change in the state narendra babu clarified
ನರೇಂದ್ರ ಬಾಬು
author img

By

Published : Jan 8, 2021, 3:50 PM IST

ಬಾಗಲಕೋಟೆ : ಮುಖ್ಯಮಂತ್ರಿ ಸ್ಥಾನ ಬದಲಾವಣೆ ಎಂಬುದು ಊಹಾಪೋಹ, ಈಗಾಗಲೇ ನಮ್ಮ ವರಿಷ್ಠರು ಇದಕ್ಕೆ ತೆರೆ ಎಳೆದಿದ್ದಾರೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಸ್ಪಷ್ಟ ಪಡಿಸಿದ್ದಾರೆ.

ಸಿಎಂ ಬದಲಾವಣೆ ಕುರಿತು ಮಾಜಿ ಶಾಸಕ ನೆ.ಲ ನರೇಂದ್ರಬಾಬು ಸ್ಪಷ್ಟನೆ

ಅವರು ಬಾಗಲಕೋಟೆ ನವನಗರದ ಪ್ರೆಸ್ ಕಬ್​​ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ರಾಜ್ಯ ಉಸ್ತುವಾರಿಗಳು ಸ್ಪಷ್ಟವಾಗಿ ಸಂದೇಶ ನೀಡಿದ್ದಾರೆ. ಇದರ ಕುರಿತು ಮಾತನಾಡುವ ಅಗತ್ಯ ಇಲ್ಲ. ಸುಳ್ಳನ್ನೇ ಹತ್ತು ಸಲ ಹೇಳಿ ಪ್ರಚಾರ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ಓದಿ-ಪಕ್ಷದ ಸಿದ್ಧಾಂತಗಳನ್ನು ನೋಡಿ ಜನ ಮತ ಹಾಕಿದ್ದಾರೆ : ಡಾ. ಅಶ್ವತ್ಥ್‌ ನಾರಾಯಣ್​​​​

ಇದೇ ಸಂದರ್ಭದಲ್ಲಿ ಶಾಸಕ ಯತ್ನಾಳ ಅವರ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ, ಈ ಕುರಿತು ಮಾತನಾಡುವವರು ಮಾತನಾಡಿದ್ದಾರೆ. ಇದನ್ನು ಟೀಕೆ ಮಾಡುವುದು ಸರಿಯಲ್ಲ. ಇದೆಲ್ಲ ಅನಪೇಕ್ಷಿತ ಎಂದರು.

ಇದೇ ಸಮಯದಲ್ಲಿ ಪಕ್ಷದ ಸಂಘಟನೆ ವಿಚಾರವಾಗಿ ಮಾತನಾಡಿ, ರಾಜ್ಯದ 224 ಕ್ಷೇತ್ರದಲ್ಲಿ ಪ್ರವಾಸ ಮಾಡಿ, ಸಂಘಟನೆಗೆ ಒತ್ತು ನೀಡಲಾಗುತ್ತದೆ. ಪಕ್ಷದ ವತಿಯಿಂದ 310 ಮಂಡಳಗಳನ್ನು ಮಾಡಲಾಗಿದ್ದು, ಎಲ್ಲ ಕಡೆಗೆ ಸಂಚರಿಸಿ ಹಿಂದುಳಿದ ವರ್ಗಗಳ ಸಂಘಟನೆ ಮಾಡಿ, ಸರ್ಕಾರದ ಸಾಧನೆಯನ್ನು ಪ್ರಚಾರ ಮಾಡುವ ಮೂಲಕ ಸಂಘಟನೆ ಕಾರ್ಯ ನಡೆಸಲಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.