ಬಾಗಲಕೋಟೆ: ವಿಪ್ರ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದಿಂದ (ವಿಕೆಎಸ್ಎಸ್) ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಬ್ರಾಹ್ಮಣ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದಲ್ಲಿ ನವನಗರ ಯುನೈಟೆಡ್ ತಂಡವು ಜಮಖಂಡಿಯ ಮಾಧವನ್ ತಂಡದ ವಿರುದ್ಧ ಗೆದ್ಧು ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುನೈಟೆಡ್ ತಂಡದ ಪವನ್ (65) ಹಾಗೂ ವಾದಿರಾಜ್ (54) ಭರ್ಜರಿ ಅರ್ಧಶತಕಗಳ ನೆರವಿನಿಂದ 10 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು. ಮಾಧವನ್ ತಂಡದ ಪರ ಸೌರಭ್ 2 ವಿಕೆಟ್ ಪಡೆದುಕೊಂಡರು.
ಬೃಹತ್ ಮೊತ್ತ ಬೆನ್ನಟ್ಟಿದ ಮಾಧವನ್ ತಂಡದ ಪರ ಶ್ರೀನಿವಾಸ ಅಪರಂಜಿ (46) ಹಾಗೂ ಸೌರಭ (45) ಅಮೋಘ ಪ್ರದರ್ಶನ ನೀಡಿದರೂ ತಂಡ 119 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ಮೂಲಕ ಯುನೈಟೆಡ್ ತಂಡ 29 ರನ್ಗಳಿಂದ ಭರ್ಜರಿ ಗೆಲುವು ಸಾಧಿಸಿತು.