ETV Bharat / state

ರಾಷ್ಟ್ರೀಯ ವುಶು ಚಾಂಪಿಯನ್​ಶಿಪ್​: ಬಾಗಲಕೋಟೆ ಕ್ರೀಡಾಪಟುಗಳಿಗೆ 9 ಪದಕ

author img

By

Published : Mar 26, 2021, 7:42 PM IST

ಜಾರ್ಖಂಡ್​​ನ ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಸಬ್ ಜೂನಿಯರ್ ವುಶು ಚಾಂಪಿಯನ್​ಶಿಪ್​ನಲ್ಲಿ ಬಾಗಲಕೋಟೆಯ ಕ್ರೀಡಾಪಟುಗಳು 9 ಪದಕ ಪಡೆದಿದ್ದಾರೆ.

National Sub Junior Wushu Championship
ವುಶು ಚಾಂಪಿಯನ್​ಶಿಪ್

ಬಾಗಲಕೋಟೆ: ಮಾರ್ಚ್​​ 21 ರಿಂದ 25​ವರೆಗೆ ಜಾರ್ಖಂಡ್​​ನ ರಾಂಚಿಯಲ್ಲಿ ನಡೆದ 20ನೇ ರಾಷ್ಟ್ರೀಯ ಸಬ್ ಜೂನಿಯರ್ ವುಶು ಚಾಂಪಿಯನ್​ಶಿಪ್​ನಲ್ಲಿ ನಗರದ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ 1 ಬಂಗಾರ, 5 ಬೆಳ್ಳಿ, ಹಾಗೂ 4 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ.

ಖುಷಿ ವರ್ಮಾ ಬಂಗಾರ, ಬೆಳ್ಳಿ ಪದಕ, ವಿದ್ಯಧರಿ ವಿ. ಗರಸಂಗಿ ಬೆಳ್ಳಿಯ ಪದಕ, ಸಾನ್ವಿ ಜಂಗಿ ಬೆಳ್ಳಿಯ ಪದಕ, ತನ್ಮಯ ಕುಪ್ಪಸ್ತ ಬೆಳ್ಳಿಯ ಪದಕ, ಸುಮಿತ್ ಘೋರ್ಪಡೆ ಕಂಚಿನ ಪದಕ, ವಿನಾಯಕ ವಿ. ಗರಸಂಗಿ ಕಂಚಿನ ಪದಕ, ವಿನಯ ವಿ. ಗರಸಂಗಿ ಕಂಚಿನ ಪದಕ, ಮೆಘರಾಜ ಬಡಿಗೇರ ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಪದಕ ಪಡೆದ ಕ್ರೀಡಾಪಟುಗಳಿಗೆ ರಾಜ್ಯ ವುಶು ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಡಾ. ವಿ.ಸಿ. ಚರಂತಿಮಠ, ಸೇರಿ ರಾಜ್ಯ ವುಶು ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.