ETV Bharat / state

'ಸ್ವಾಭಿಮಾನಿ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯರನ್ನು ರಾಜಕೀಯವಾಗಿ ಮುಗಿಸ್ತಾರೆ'

author img

By

Published : Oct 31, 2022, 3:39 PM IST

ಸಿದ್ದರಾಮಯ್ಯ ಮೇಲೆ ಭಯವಿಲ್ಲ, ನಮಗೆ ಬಹಳ ಖುಷಿ ಇದೆ. ಬಿಜೆಪಿಗೆ ಹೆಚ್ಚು ಮತ ಬರುವುದೇ ಅವರ ಮಾತಿನಿಂದ. ಸ್ವಾಭಿಮಾನಿ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯನವರನ್ನು ರಾಜಕೀಯವಾಗಿ ಮುಗಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್ ಹೇಳಿದರು.

nalin kumar kateel
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಈ ಬಾರಿ ಕಾಂಗ್ರೆಸ್ ಖಂಡಿತ ಟಿಕೆಟ್ ಕೊಡುವುದಿಲ್ಲ. ಸ್ವಾಭಿಮಾನಿ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯನವರನ್ನು ರಾಜಕೀಯವಾಗಿ ಮುಗಿಸುವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್ ಹೇಳಿದರು.

ಬಾಗಲಕೋಟೆ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಭಯ ಬಿಜೆಪಿಗರಿಗೆ ಬಹಳ ಆವರಿಸಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಮೇಲೆ ಭಯವಿಲ್ಲ, ನಮಗೆ ಬಹಳ ಖುಷಿ ಇದೆ. ಬಿಜೆಪಿಗೆ ಹೆಚ್ಚು ಮತ ಬರುವುದೇ ಅವರ ಮಾತಿನಿಂದ. ಎಲ್ಲಿಯವರೆಗೆ ರಾಹುಲ್ ಗಾಂಧಿ ಇರ್ತಾರೋ ಅಲ್ಲಿಯವರೆಗೆ ಕೇಂದ್ರದಲ್ಲಿ ಬಿಜೆಪಿ ಇರುತ್ತದೆ. ಎಲ್ಲಿಯವರೆಗೆ ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಇರ್ತಾರೋ ಅಲ್ಲಿಯವರೆಗೆ ರಾಜ್ಯದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್

ಇದನ್ನೂ ಓದಿ: ಸಿದ್ದರಾಮಣ್ಣ ಯಾರ ಯಾರ ಬಳಿ ಭಿಕ್ಷೆ ಬೇಡಿ, ಕಾಲಿಗೆ ಬಿದ್ದು ಸಿಎಂ ಆದವರು: ಕಟೀಲ್​

ಕಾಂಗ್ರೆಸ್ ಅತಂತ್ರ ಸ್ಥಿತಿಗೆ ಬಂದಿದೆ. ಕಾಂಗ್ರೆಸ್​ನಲ್ಲಿ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಅನ್ನೋದು ಡಿಕೆಶಿಗೆ ಗೊತ್ತಾಗಿದೆ. ಸಿದ್ದರಾಮಯ್ಯ ರಾಜಕೀಯವಾಗಿ ಹಾಳಾಗ್ತಾರೆ, ಹಾಳಾಗ್ಲಿ ಅಂತ ಡಿ ಕೆ ಶಿವಕುಮಾರ್​ ಬಿಟ್ಟಿದ್ದಾರೆ ಎಂದು ಕಟೀಲ್ ವ್ಯಂಗ್ಯವಾಡಿದರು.

ದೇವೇಗೌಡರು ಸಿದ್ದರಾಮಯ್ಯನವರ ರಾಜಕೀಯ ಗುರುಗಳು. ಸಿಎಂ ಸ್ಥಾನಕ್ಕಾಗಿ ಜೆಡಿಎಸ್​ನಿಂದ ಹೊರಬಂದರು. ಅಂದು ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿಗೆ ಅತಿ ಹೆಚ್ಚು ಕೆಟ್ಟ ಶಬ್ದ ಬಳಸಿದ್ದು ಸಿದ್ದರಾಮಯ್ಯ. ಇಂದು ಅದೇ ಸೋನಿಯಾ ಗಾಂಧಿ ಕಾಲು ಹಿಡಿದಿದ್ದಾರೆ. ಯೋಗ್ಯತೆ, ನೈತಿಕತೆ, ಸ್ವಾಭಿಮಾನ ಇದ್ದಿದ್ದರೆ ಕಾಲಿಗೆ ಬಿದ್ದು ಸಿಎಂ ಆಗುವ ಅವಶ್ಯಕತೆ ಯಾಕಿತ್ತು ಎಂದು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದರು.

ಇದನ್ನೂ ಓದಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ದರಾಮಣ್ಣ, ನೀಚಣ್ಣ.. ಕಟೀಲ್ ಲೇವಡಿ

ಕಳೆದ ಬಾರಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋಲು ಕಂಡರು. ಸಿದ್ದರಾಮಯ್ಯ ಜೊತೆ ಜನರಿಲ್ಲ. ಈಗ ಬಾದಾಮಿಯಲ್ಲೂ ಚುನಾವಣೆಗೆ ನಿಲ್ಲುವ ಪರಿಸ್ಥಿತಿಯಲ್ಲಿ ಅವರಿಲ್ಲ. ಹಾಗಾಗಿ, ಸೂಕ್ತ ಕ್ಷೇತ್ರಕ್ಕಾಗಿ ಮಾಜಿ ಸಿಎಂ ಹುಡುಕಾಡುತ್ತಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿ ಒಂದು ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುವ ಮಟ್ಟಕ್ಕೆ ಕಾಂಗ್ರೆಸ್ ಇಳಿದಿದೆ. ಸಿದ್ದರಾಮಯ್ಯನವರಿಗೆ ಧಮ್ ಇದ್ದರೆ ಅವರು, ಚಾಮುಂಡೇಶ್ವರಿ ಅಥವಾ ಬಾದಾಮಿಯಲ್ಲಿ ಮತ್ತೆ ಸ್ಪರ್ಧಿಸಿ ಗೆದ್ದು ಬರಲಿ ನೋಡೋಣ ಎಂದು ಸವಾಲು ಹಾಕಿದರು.

ಇದನ್ನೂ ಓದಿ: ಕಾಂಗ್ರೆಸ್​ನ ಎಲ್ಲಾ ನಾಟಕಗಳನ್ನು ಬಲ್ಲ ಏಕೈಕ ನಾಯಕ ಸಿದ್ದರಾಮಯ್ಯ: ನಳಿನ್​ ಕುಮಾರ್ ಕಟೀಲ್

ಮುಖ್ಯಮಂತ್ರಿಯಾಗಿದ್ದವರಿಗೆ ತಮ್ಮ ಸ್ವಂತ ಕ್ಷೇತ್ರದಲ್ಲಿ ನಿಲ್ಲಲು ಯೋಗ್ಯತೆ ಇಲ್ಲವೆಂದಾದರೆ, ಇವರಿಗೆ ಬೇರೆಯವರ ಬಗ್ಗೆ ಮಾತನಾಡೋ ಹಕ್ಕೇನಿದೆ, ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು. ಅಲ್ಲದೇ, ಕಾಂಗ್ರೆಸ್​ನಲ್ಲಿ ಈಗ ಗೊಂದಲ ಶುರುವಾಗಿದೆ, ಬಿಜೆಪಿಯಲ್ಲಿ ಗೊಂದಲ ಇಲ್ಲ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.