ETV Bharat / state

ಪಂಚಮಸಾಲಿ ಸ್ವಾಮೀಜಿಗಳ ಹೊಸ ಒಕ್ಕೂಟ, ಸಭೆ; ನಿರಾಣಿ ಸಿಎಂ ಆಗಲು ಪೂರ್ವಭಾವಿ ತಯಾರಿ? - Basavajaya Mritunjaya Swamiji

ಜಮಖಂಡಿಯಲ್ಲಿ ನೆಲೋಗಿ ಶಿವಾನಂದೇಶ್ವರ ಮಠದ ಸಿದ್ದಲಿಂಗೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಈ ಸಭೆ ನಡೆದಿದ್ದು, ಬಬಲೇಶ್ವರ ಬೃಹನ್ಮಠದ ಮಹಾದೇವ ಸ್ವಾಮೀಜಿ, ಕಕಮರಿ ಗ್ರಾಮದ ರಾಯಲಿಂಗೇಶ್ವರ ಮಠದ ಲಿಂಗಜಂಗಮ ಸ್ವಾಮೀಜಿ, ಕಾಜಿ ಬೀಳಗಿ ಅಕ್ಕಮಹಾದೇವಿ ಸಂಸ್ಥಾನ ಮಠದ ಮಾತಾ ವಚನ ಶ್ರೀ, ಚಿನ್ಮಯಾನಂದ ಸ್ವಾಮೀಜಿ ಸೇರಿದಂತೆ 30 ಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಂಡಿದ್ದರು ಎಂಬ ಮಾಹಿತಿಗಳು ಲಭ್ಯವಾಗಿವೆ.

more-than-30-swamiji-batting-for-cm-bsy
ಬಿಎಸ್​ವೈ ಪರ ಬ್ಯಾಟಿಂಗ್
author img

By

Published : Jun 23, 2021, 10:03 PM IST

Updated : Jun 25, 2021, 12:12 PM IST

ಬಾಗಲಕೋಟೆ: ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪನವರ ಬದಲಾವಣೆ ಚರ್ಚೆಯ ಬಳಿಕ ಕೆಲ ಮಠಾಧೀಶರು ಮುಖ್ಯಮಂತ್ರಿ ಯಡಿಯೂರಪ್ಪನವರ ಪರವಾಗಿ ನಿಂತಿದ್ದರು. ಆದರೆ, ಈಗ ರಾಜ್ಯದಲ್ಲಿ ಹೊಸ ಬೆಳವಣಿಗೆಯೊಂದು ಕಂಡು ಬಂದಿದ್ದು, ಸಚಿವ ಮುರಗೇಶ ನಿರಾಣಿ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಪರೋಕ್ಷವಾಗಿ ಕಾರ್ಯತಂತ್ರ ರೂಪಿಸಲು ಪಂಚಮಸಾಲಿ ಸಮುದಾಯದ 80 ಜನ ಸ್ವಾಮೀಜಿಗಳನ್ನೊಳಗೊಂಡ ಒಕ್ಕೂಟ ಪ್ರಾರಂಭಿಸಲಾಗಿದೆ.

ಈ ಒಕ್ಕೂಟದಿಂದ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರ ಪೀಠದ ವಚನಾನಂದ ಸ್ವಾಮೀಜಿಯವರನ್ನು ಹೊರಗಿಟ್ಟಿರುವುದು ಸದ್ಯ ಚರ್ಚೆಯ ವಿಷಯವಾಗಿದೆ.

ಕಳೆದ ದಿನ ಜಮಖಂಡಿ ಪಟ್ಟಣದ ಸಮುದಾಯದ ಮುಖಂಡರೊಬ್ಬರ ಮನೆಯಲ್ಲಿ ಸ್ವಾಮೀಜಿಗಳ ಹೊಸ ಒಕ್ಕೂಟದ ಸಭೆ ನಡೆದಿದೆ. ಈ ಸಭೆಯು ಸಚಿವ ಮುರಗೇಶ ನಿರಾಣಿಯವರ ಬೆಂಬಲದಿಂದ ನಡೆದಿದೆ ಎಂದು ಹೇಳಲಾಗುತ್ತಿದೆಯಾದರೂ ನಿರಾಣಿ ಸಹೋದರರು ಈ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ.

ಈಗಾಗಲೇ ಪಂಚಮಸಾಲಿ ಸಮುದಾಯದ ಎರಡು ಪೀಠಗಳು ಇವೆ. ಈಗ ಮತ್ತೆ ಮೂರನೆಯ ಒಕ್ಕೂಟ ರಚನೆ ಏಕೆ ಎಂಬ ವಾದ ಸಮುದಾಯದಲ್ಲಿ ನಡೆಯುತ್ತಿದೆ.

ಜಮಖಂಡಿಯಲ್ಲಿ ನೆಲೋಗಿ ಶಿವಾನಂದೇಶ್ವರ ಮಠದ ಸಿದ್ದಲಿಂಗೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಈ ಸಭೆ ನಡೆದಿದ್ದು, ಬಬಲೇಶ್ವರ ಬೃಹನ್ಮಠದ ಮಹಾದೇವ ಸ್ವಾಮೀಜಿ, ಕಕಮರಿ ಗ್ರಾಮದ ರಾಯಲಿಂಗೇಶ್ವರ ಮಠದ ಲಿಂಗಜಂಗಮ ಸ್ವಾಮೀಜಿ, ಕಾಜಿ ಬೀಳಗಿ ಅಕ್ಕಮಹಾದೇವಿ ಸಂಸ್ಥಾನ ಮಠದ ಮಾತಾ ವಚನ ಶ್ರೀ, ಚಿನ್ಮಯಾನಂದ ಸ್ವಾಮೀಜಿ ಸೇರಿದಂತೆ 30 ಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಂಡಿದ್ದರು ಎಂಬ ಮಾಹಿತಿಗಳು ಲಭ್ಯವಾಗಿವೆ.

ಸಭೆಯಲ್ಲಿ ಮಾತನಾಡಿದ ಸಿದ್ದಲಿಂಗೇಶ್ವರ ಸ್ವಾಮೀಜಿ, ಪೀಠದ ಜಗದ್ಗುರುಗಳು ಎಂದು ಕರೆಸಿಕೊಳ್ಳುವ ಸ್ವಯಂ ಘೋಷಿತ ಸ್ವಾಮೀಜಿಗಳನ್ನು ನಾವು ಸಂಪರ್ಕಸಿಲ್ಲ. ಪ್ರತಿಷ್ಠ ಇಟ್ಟುಕೊಂಡವರು ಸಹ ನಮಗೆ ಬೇಕಾಗಿಲ್ಲ. ಇಂಥವರಿಂದ ಸಮಾಜ ಉದ್ದಾರ ಆಗುವುದಿಲ್ಲ. ಒಕ್ಕೂಟದಲ್ಲಿ ನಾನು ಎನ್ನುವ ಸ್ವಾಮೀಜಿಗಳಿಗೆ ಅವಕಾಶವಿಲ್ಲ ಎಂದರು.

ಎಲ್ಲ 80 ಜನ ಪಂಚಮಸಾಲಿ ಸ್ವಾಮೀಜಿಗಳು ಸ್ವಯಂ ಪ್ರೇರಿತರಾಗಿ ಸಭೆಗೆ ಬಂದಿದ್ದಾರೆ. ಇದು ಪಂಚಮಸಾಲಿ ಪೀಠಗಳಿಗೆ ಪರ್ಯಾಯವಲ್ಲ ಹಾಗೂ ಪೀಠಕ್ಕೂ ನಮಗೂ ಸಂಬಂಧವಿಲ್ಲ. ನಾವು ಶ್ರೀಮಂತರ ಮನೆಗೆ ಹೋಗಿಲ್ಲ. ಬಡವರ ಗುಡಿಸಲಿಗೆ ಹೋಗಿ ಅವರ ನೋವುಗಳಿಗೆ ಸ್ಪಂದಿಸುವ ಒಕ್ಕೂಟ ಇದಾಗಿದೆ ಎಂದು ಎರಡೂ ಪೀಠದ ಸ್ವಾಮೀಜಿಗಳಿಗೆ ವಿರೋಧದ ಸಂದೇಶ ರವಾನಿಸಿದರು.

ಬಬಲೇಶ್ವರ ಬೃಹನ್ಮಠದ ಮಹದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಷ್ಟು ದಿನಗಳಾದರೂ ನಮ್ಮ ಸಮಾಜದ ಬಗ್ಗೆ ಚಿಂತನೆ ಮಾಡುವ ಸ್ವಾಮೀಜಿಗಳು ಸಿಗಲೇ ಇಲ್ಲ. ನಮ್ಮ ಸಮಾಜಕ್ಕೆ ಎರಡು ಪೀಠಗಳಿದ್ದರೂ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಇಬ್ಬರೂ ಸ್ವಾಮೀಜಿಗಳು ತಮ್ಮದೇ ಆದ ರೀತಿಯಲ್ಲಿ ಏನೇನೋ ಮಾಡುತ್ತ ಹೊರಟಿದ್ದಾರೆ. ಒಬ್ಬರು ಸಾಮೂಹಿಕ ವಿವಾಹ ಮಾಡುತ್ತಿದ್ದಾರೆ. ಆದರೆ ಅದನ್ನು ಎಲ್ಲರೂ ಮಾಡುತ್ತಾರೆ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳ ಕಾರ್ಯವೈಖರಿಯನ್ನು ಟೀಕಿಸಿದರು.

ಮತ್ತೊಬ್ಬರು ಬರೀ ಹೋರಾಟ, ಗದ್ದಲ ಮಾಡುತ್ತ 2ಎ ಮೀಸಲಾತಿ ಅಂತ ಹೊರಟಿದ್ದಾರೆ. ಆದರೆ ಅದು ಇನ್ನೂ ಸಿಕ್ಕಿಲ್ಲ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳ ಬಗ್ಗೆಯೂ ಶಿವಾಚಾರ್ಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ಎರಡು ಪೀಠಗಳಿಂದ ಸಮಾಜಕ್ಕೆ ಸಿಕ್ಕ ಕೊಡುಗೆ ಶೂನ್ಯವಾಗಿದ್ದರಿಂದ ಹೊಸ ಒಕ್ಕೂಟ ರಚಿಸಲಾಗಿದೆ. ಪೀಠಾಧೀಶರಾಗುವುದಕ್ಕಿಂತ ಸಂಘಟನೆಯ ಮೂಲಕ ಕೆಲಸ‌ ಮಾಡುವ ಪ್ರಯೋಗ ಮಾಡುತ್ತಿದ್ದೇವೆ. ಈ ಒಕ್ಕೂಟ ಮೂರನೇ ಶಕ್ತಿಯಾಗಿ ಬೆಳೆಯಲಿ ಎಂದು ಬೃಹನ್ಮಠದ ಮಹಾದೇವ ಸ್ವಾಮೀಜಿ ತಿಳಿಸಿದರು.

ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಮೀಸಲಾತಿ ಹೋರಾಟಕ್ಕಾಗಿ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಜೊತೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದರು. ಹೀಗೆ ಸ್ವಾಮೀಜಿಗಳು ಬಿಜೆಪಿ ವಿರುದ್ದ ಹೋರಾಟ ಮಾಡಿದ್ದರಿಂದ ಸಚಿವ ಮುರಗೇಶ ನಿರಾಣಿಯವರೊಂದಿಗೆ ವೈಮನಸ್ಸು ಮೂಡಿದೆ ಎನ್ನಲಾಗಿದೆ.

ಈ ಮಧ್ಯೆ ಹರಿಹರ ಪೀಠದ ವಚನಾನಂದ ಶ್ರೀಗಳು ಯಡಿಯೂರಪ್ಪನವರ ಪರವಾಗಿ ನಿಲ್ಲಬಹುದು ಎಂಬ ಮುಂದಾಲೋಚನೆಯಿಂದ ಮುರಗೇಶ ನಿರಾಣಿ, ತಮ್ಮ ಸಮುದಾಯದ ಕೆಲ ಸ್ವಾಮೀಜಿಗಳನ್ನು ಸೇರಿಸಿ ಒಕ್ಕೂಟ ರಚಿಸಿ, ಮುಂದೆ ಮುಖ್ಯಮಂತ್ರಿ ಬದಲಾವಣೆ ಸಮಯದಲ್ಲಿ ತಮ್ಮನ್ನೇ ಮುಖ್ಯಮಂತ್ರಿ ಮಾಡುವಂತೆ ಒತ್ತಾಯ ಹೇರುವ ತಂತ್ರ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಸಭೆಯಲ್ಲಿ ಯಾವುದೇ ರಾಜಕೀಯ ಮಾತನಾಡಲ್ಲ, ಬರೀ ಸಮುದಾಯದವರ ಚಿಂತನೆಗಾಗಿ ಒಕ್ಕೂಟ ಎಂದು ಹೇಳಲಾಗಿದ್ದರೂ ಮುರಗೇಶ ನಿರಾಣಿ ಮುಖ್ಯಮಂತ್ರಿ ಆದಲ್ಲಿ ಸಮಾಜದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದಂತಾಗುತ್ತದೆ ಎಂಬ ಮಾತುಗಳು ಸಭೆಯಲ್ಲಿ ಕೇಳಿ ಬಂದಿದ್ದು ಕುತೂಹಲಕರವಾಗಿದೆ.

ಓದಿ:ಈಜುಕೊಳ ವಿವಾದಕ್ಕೆ ಹೊಸ ’ರೂಪ’: ರೋಹಿಣಿ‌ ಸಿಂಧೂರಿ ನಡೆಗೆ ಐಪಿಎಸ್ ಮಹಿಳಾ ಅಧಿಕಾರಿ ಆಕ್ಷೇಪ

Last Updated : Jun 25, 2021, 12:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.