ಬಾಗಲಕೋಟೆ : ಕ್ಷೇತ್ರದ ಶಾಸಕ ಡಾ.ವೀರಣ್ಣ ಚರಂತಿಮಠ ತಾಲೂಕಿನ ಬೇವೂರು ಹಾಗೂ ಬೆನಕಟ್ಟಿ ಗ್ರಾಮಗಳಲ್ಲಿ ₹10.17 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಹಾಗೂ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಬೆನಕಟ್ಟಿಯಲ್ಲಿ ಬೆನಕಟ್ಟಿ-ಶಿರೂರ ನಡುವಿನ ಜಿಲ್ಲಾ ಮುಖ್ಯ ರಸ್ತೆಯ 6 ಕಿ.ಮೀ ರಸ್ತೆ ಸುಧಾರಣೆ, ಡಾಂಬರೀಕರಣದ 5 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಬೇವೂರಿನಲ್ಲಿ ಬೂದಿಹಾಳ ಬೋಡನಾಯಕ ದಿನ್ನಿ ಕ್ರಾಸ್‍ವರೆಗಿನ ಜಿಲ್ಲಾ ಮುಖ್ಯ ರಸ್ತೆಯ 4.75 ಕಿ.ಮೀ ರಸ್ತೆ ಸುಧಾರಣೆ ಕಾಮಗಾರಿ 5 ಕೋಟಿ ರೂ. ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಿಸಲಾಗುವ 12 ಲಕ್ಷ ರೂ.ಗಳ ವೆಚ್ಚದ ಬಾಬು ಜಗಜೀವನರಾಮ್ ಸಮುದಾಯ ಭವನ ಮತ್ತು ಶಾಸಕರ ಅನುದಾನದ 5 ಲಕ್ಷ ರೂ.ಗಳ ವೆಚ್ಚದ ಭರಮಣ್ಣನ ಗುಡಿಯ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಸಿ ಆರ್ ಪರನಗೌಡ್ರ, ಸದಸ್ಯರುಗಳಾದ ನಿಂಗಪ್ಪ ಮಾಗನೂರ, ರಾಜಶೇಖರ ಅಂಗಡಿ, ಬೆನಕಟ್ಟಿ ಗ್ರಾಪಂ ಅಧ್ಯಕ್ಷೆ ರೇಣವ್ವ ಆಲೂರ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ್ ಕೊಣ್ಣೂರ, ಮುಖಂಡರಾದ ಗಿರೀಶ ಹುಡೇದಮನಿ, ರವಿ ಅರಿಷಿಣಗೋಡಿ, ರಾಜು ಮುದೇನೂರ, ಕಲ್ಲಪ್ಪ ಭಗವತಿ, ಮಂಜು ಗೌಡರ, ನಿಂಗಪ್ಪ ದಾಸಪ್ಪನವರ, ವ್ಹಿ.ಪಿ.ಯಡಹಳ್ಳಿ, ಪರಪ್ಪ ಗುನ್ನಿ, ಶಿವು ಯಡಹಳ್ಳಿ, ವೆಂಕಟೇಶ ಕಟಗೇರಿ, ಸಂಗಮೇಶ ಹಿತ್ತಲಮನಿ, ಪಿಡಬ್ಲುಡಿ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ್ ಈಶ್ವರ ಕುರಬಗಟ್ಟಿ, ಸಹಾಯಕ ಇಂಜನೀಯರ್ ಎಸ್.ಜಿ.ಪಾಟೀಲ, ಗುತ್ತಿಗೆದಾರರಾದ ಸಿ.ಕೆ.ಒಂಟಗೋಡಿ, ಎನ್.ಆರ್.ಕುಲಕರ್ಣಿ, ಗ್ರಾಪಂ ಕಾರ್ಯದರ್ಶಿ ಆರ್.ವೈ.ಅಪ್ಪನ್ನವರ ಮತ್ತಿತರರು ಇದ್ದರು.