ETV Bharat / state

ಆಲಮಟ್ಟಿ ಜಲಾಶಯದ ಹಿನ್ನೀರು ಮುಳುಗಡೆ ಸಂತ್ರಸ್ತರಿಗೆ ನಿವೇಶನ ಹಕ್ಕುಪತ್ರ ವಿತರಣೆ - ನಿವೇಶನ ಹಕ್ಕುಪತ್ರ ವಿತರಿಸಿದ ಶಾಸಕ ವೀರಣ್ಣ ಚರಂತಿಮಠ

ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆ ಆಗುವ ಮನೆಗಳ ಸಂತ್ರಸ್ತರಿಗೆ ನೀಡಲಾಗಿರುವ ನಿವೇಶನದ ಹಕ್ಕು ಪತ್ರಗಳನ್ನು ಶಾಸಕ ವೀರಣ್ಣ ಚರಂತಿಮಠ ಸಂತ್ರಸ್ತರಿಗೆ ಹಸ್ತಾಂತರಿಸಿದರು.

mla veeranna charantimatt distributes site documents
ನಿವೇಶನ ಹಕ್ಕುಪತ್ರ ವಿತರಣೆ
author img

By

Published : Sep 4, 2020, 11:47 PM IST

ಬಾಗಲಕೋಟೆ: ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆ ಆಗುವ ಮನೆಗಳಿಗೆ ನವನಗರದ ಯುನಿಟ್ - 2 ರಲ್ಲಿ ನಿವೇಶನದ ಹಕ್ಕು ಪತ್ರಗಳನ್ನು ಪಟ್ಟಣ ಪ್ರಾಧಿಕಾರದ ಅಧ್ಯಕ್ಷ ಹಾಗೂ ಶಾಸಕ ವೀರಣ್ಣ ಚರಂತಿಮಠ ಸಂತ್ರಸ್ತರಿಗೆ ವಿತರಣೆ ಮಾಡಿದರು.

ನಿವೇಶನ ಹಕ್ಕುಪತ್ರ ವಿತರಣೆ

ಆಲಮಟ್ಟಿ ಜಲಾಶಯದಲ್ಲಿ 523 ಮೀಟರ್ ನೀರು ಸಂಗ್ರಹವಾದ ಬಳಿಕ ಮುಳುಗಡೆ ಆಗುವ ಸ್ವಂತ ಮನೆಗಳು, ಬಾಡಿಗೆ ಮನೆಗಳಿಗೆ ಹಾಗೂ ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ನಿವೇಶನದ ಹಕ್ಕು ಪತ್ರವನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ನಿವೇಶನ ತೆಗೆದುಕೊಂಡವರು ಒಂದು ವರ್ಷದಲ್ಲಿ ಮನೆಯನ್ನು ಕಟ್ಟಿಕೊಳ್ಳಿ, ಇಲ್ಲವಾದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ನಿವೇಶನ ಬದಲಾವಣೆ ಮಾಡಿಕೊಳ್ಳಲು ಅನಾವಶ್ಯಕವಾಗಿ ಕಚೇರಿಗೆ ಅಲೆಯೋದು ಬೇಡ, ಸಂತ್ರಸ್ತರಿಗೆ ಅಲೆದಾಡುವಂತೆ ಮಾಡದೇ ಬೇಗ ಬೇಗ ಅಧಿಕಾರಿಗಳು ಕಾರ್ಯ ಮಾಡಿಕೊಡಬೇಕು ಎಂದು ಸೂಚನೆ ನೀಡಿದರು.

ನಂತರ ಪಟ್ಟಣ ಅಭಿವೃದ್ಧಿ ‌ಪ್ರಾಧಿಕಾರದ ವಿವಿಧ ಕಟ್ಟಡಗಳ ಕಾಮಗಾರಿಯನ್ನು ಪರಿಶೀಲನೆ ನಡೆಸಿ, ಶೀಘ್ರವಾಗಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ, ಸ್ವಚ್ಚತೆ ಕಾಪಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.